Advertisement

ಜಗತ್ತು ಕಂಡ ಶ್ರೇಷ್ಠ ಅಧ್ಯಾತ್ಮ ಗುರು ರಮಣ ಮಹರ್ಷಿ

06:30 PM Nov 06, 2019 | mahesh |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ರಮಣ ಮಹರ್ಷಿ, ಈ ಜಗತ್ತು ಕಂಡ ಶ್ರೇಷ್ಠ ಅಧ್ಯಾತ್ಮ ಗುರು, ಸಾಧಕರಲ್ಲೊಬ್ಬರು.
2. ಅವರು ಮಧುರೈ ಬಳಿಯ ತಿರುಚುರಿ ಎಂಬ ಗ್ರಾಮದಲ್ಲಿ, 1879ರ ಡಿಸೆಂಬರ್‌ 30ರಂದು ಹುಟ್ಟಿದರು.
3. ಮಹರ್ಷಿಗಳ ಹುಟ್ಟು ಹೆಸರು ವೆಂಕಟ ರಮಣ ಅಯ್ಯರ್‌.
4. ಬಾಲ್ಯದಲ್ಲಿ ರಮಣ ಮಹರ್ಷಿಗಳನ್ನು ಮನೆಯವರು ಕುಂಭಕರ್ಣ ಎಂದು ಕರೆಯುತ್ತಿದ್ದರಂತೆ. ಯಾಕಂದ್ರೆ, ನಿದ್ದೆ ಮಾಡುವಾಗ ಅವರನ್ನು ಹೊತ್ತೂಯ್ದರೂ ಅದು ಅವರಿಗೆ ತಿಳಿಯುತ್ತಿರಲಿಲ್ಲವಂತೆ.
5. ಹದಿನಾರನೇ ವಯಸ್ಸಿನಲ್ಲಿ ಆತ್ಮ ಸಾಕ್ಷಾತ್ಕಾರಗೊಂಡು ರಮಣ ಮಹರ್ಷಿಗಳು ಅರುಣಾಚಲ (ತಿರುವಣ್ಣಾಮಲೆ)ಕ್ಕೆ ತೆರಳಿದರು. ಮುಂದೆ ಅವರು ತಮ್ಮ ಇಡೀ ಜೀವನವನ್ನು ಅಲ್ಲಿಯೇ ಕಳೆದರು.
6. ಬಂಧುಗಳೊಬ್ಬರಿಂದ ಅರುಣಾಚಲದ ಬಗ್ಗೆ ಮೊದಲ ಬಾರಿ ಕೇಳಿದಾಗ, ರಮಣರಿಗೆ ಅಲ್ಲಿಗೆ ಹೋಗುವ ಆಸೆಯಾಯ್ತು. ಮುಂದೆ ಅದೇ ಊರನ್ನು ಅವರು ಅಧ್ಯಾತ್ಮ ಸಾಧನೆಯ ಸ್ಥಳವಾಗಿಸಿಕೊಂಡರು.
7. ಅವರ ಸಾಧನೆಯಿಂದ ಪ್ರೇರಿತರಾದ ಅನೇಕರು ಅವರ ಶಿಷ್ಯರಾದರು. ಅವರನ್ನು ಬ್ರಹ್ಮ ಸ್ವಾಮಿ ಎಂದು ಕರೆದರು. ಅವರಿಗಾಗಿ ಆಶ್ರಮವನ್ನೂ ಕಟ್ಟಿಸಿದರು.
8. ಅವರ ಪ್ರಭಾವಕ್ಕೆ ಒಳಗಾದವರಲ್ಲಿ ಭಾರತೀಯರಷ್ಟೇ ಅಲ್ಲ, ವಿದೇಶಿಯರೂ ಇದ್ದಾರೆ.
9. 1950ರಲ್ಲಿ ರಮಣ ಮಹರ್ಷಿಗಳು ಆಶ್ರಮದಲ್ಲಿಯೇ ತೀರಿಕೊಂಡರು.
10. ಅರುಣಾಚಲದ ಕುರಿತು ಅವರು ಹಲವು ಕೃತಿಗಳನ್ನೂ ರಚಿಸಿದ್ದಾರೆ.

ಸಂಗ್ರಹ: ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next