Advertisement
ಗುಜರಾತ್ ಸರಕಾರ ಇಂತಹ ಒಂದು ಧನಾತ್ಮಕವಾದ ಚಿಂತನೆಯನ್ನು ಕ್ರಿಯಾರೂಪಕ್ಕೆ ತಂದಿರುವುದೇ ಈ ಬೆಳವಣಿಗೆಗೆ ಮುಖ್ಯ ಕಾರಣ. ಆದರೆ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯನ್ನು ಹೇಗೆ ಅಳ ವಡಿಸಬೇಕು ಎನ್ನುವುದು ನಾಜೂಕಾದ ಮತ್ತು ಗಂಭೀರವಾದ ಮಂಥನಕ್ಕೆ ಒಳಗಾಗಬೇಕಾದ ವಿಷಯ.
ಇಂತಹ ವಿಷಯಗಳಲ್ಲಿ ಅಭಿಮಾನ, ಪ್ರತಿಷ್ಠೆ ಇತ್ಯಾದಿಗಳು ಸಹಜವಾಗಿ ಮುಂದೆ ನಿಲ್ಲಬಹುದು. ಭಾವಾವೇಶದ ಉದ್ಘೋಷಗಳೂ ಕೇಳಿಬರಬಹುದು. ಸಾಮಾನ್ಯವಾಗಿ ನಮಗೆ ಪ್ರಿಯವಾದ¨ªೆಲ್ಲ ನಮ್ಮ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಬೇಕು ಎನ್ನುವ ಬೇಡಿಕೆ ಬೇರೆ ಬೇರೆ ಸಂದರ್ಭಗಳಲ್ಲಿ ಮುನ್ನೆಲೆಗೆ ಬರುವುದಿದೆ. ಯಕ್ಷಗಾನ, ಭರತನಾಟ್ಯ ಮೊದಲಾದ ಕಲೆಗಳ ಕುರಿತು ಮತ್ತು ಬೇರೆ ಬೇರೆ ಭಾಷೆಗಳ ಕುರಿತು ಈಗಾಗಲೇ ಅಂತಹ ಅಪೇಕ್ಷೆಗಳು ಕಾಣಿಸಿಕೊಂಡಿವೆ. ಭಗವದ್ಗೀತೆ ಹಿಂದೂಗಳ ಪವಿತ್ರವಾದ ಆರಾಧನಾ ಗ್ರಂಥ. ಪ್ರಸ್ಥಾನತ್ರಯಗಳಲ್ಲಿ ಒಂದು. ಆಚಾರ್ಯತ್ರಯರ ಭಾಷ್ಯ ಗೌರವಕ್ಕೆ ಪಾತ್ರವಾದ ಧರ್ಮಗ್ರಂಥವೂ ಹೌದು. ಭಗವದ್ಗೀತೆಯಲ್ಲಿ ಮನುಷ್ಯ ಜೀವನಕ್ಕೆ ಅತ್ಯವಶ್ಯವಾಗಿರುವ ಅನೇಕ ಸದ್ಗುಣಗಳು ಸಾದರಗೊಂಡಿವೆ. ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ ಅತ್ಯಂತ ಪ್ರಬಲವಾದ ಶಕ್ತಿಯಾಗಿ ಪರಿಣಮಿಸಬಲ್ಲ ಮೌಲ್ಯವಿಶೇಷಗಳು ಅದರಲ್ಲಿ ಹಾಸುಹೊಕ್ಕಾಗಿವೆ. ಮಾನಸಿಕವಾದ ಅನೇಕ ಪ್ರಶ್ನೆಗಳಿಗೆ ಉತ್ತರವಿದೆ. ಮಾತ್ರವಲ್ಲ ಅದೊಂದು ಮನಃಶಾಸ್ತ್ರ ಕೃತಿಯೆಂದೂ ಜಾಗತಿಕವಾಗಿ ಅಂಗೀಕರಿಸಲ್ಪಟ್ಟಿದೆ.
Related Articles
Advertisement
-ಡಾ| ರಮಾನಂದ ಬನಾರಿ, ಮಂಜೇಶ್ವರ