Advertisement

ಭಗವದ್ಗೀತೆ ಪಠ್ಯಕ್ರಮದಲ್ಲಿ ಅಳವಡಿಸಿದಲ್ಲಿ ಸ್ವಾಗತ ಇದೆ: ಸ್ವರ್ಣವಲ್ಲೀ ಶ್ರೀ

06:43 PM Oct 31, 2022 | Team Udayavani |

ದಾವಣಗೆರೆ:ಭಗವದ್ಗೀತೆಯ ಒಂದು ಅಧ್ಯಾಯವನ್ನ ಪಠ್ಯಕ್ರಮದಲ್ಲಿ ಅಳವಡಿಸಿದಲ್ಲಿ ಅದಕ್ಕೆ ತಮ್ಮ ಸ್ವಾಗತ ಇದೆ ಎಂದು ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಭಗವದ್ಗೀತೆಯ ಅಳವಡಿಸುವುದಕ್ಕೆ ಆಗುವು ದೇ ಇಲ್ಲ. ಎಲ್ಲರಿಗೂ ಸಹಮತ, ಸಮ್ಮತವಾಗುವ ಒಂದು ಅಧ್ಯಾಯವನ್ನ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂಬುದು ತಮ್ಮ ಒತ್ತಾಯ. ಸರ್ಕಾರಕ್ಕೆ ತಮ್ಮ ಒತ್ತಾಯವನ್ನ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಕಳೆದ15 ವರ್ಷಗಳ ಹಿಂದೆ ಶಾಲೆಯಲ್ಲಿ ಭಗವದ್ಗೀತೆ ಉಪನ್ಯಾಸಕ್ಕೆ ಅವಕಾಶವೇ ಇರಲಿಲ್ಲ. ಈಗ ಪ್ರತಿಭಾ ಪುರಸ್ಕಾರ ಸ್ಪರ್ಧೆಯಲ್ಲಿ ಭಗವದ್ಗೀತೆಯ ಪಠಣಕ್ಕೆ ಅವಕಾಶ ನೀಡಲಾಗಿದೆ. ಯಾವುದೇ ರೀತಿಯ ವಿವಾದಕ್ಕೆ ಆಸ್ಪದವಾಗದಂತಹ ಒಂದು ಅಧ್ಯಾಯವನ್ನ ಪಠ್ಯಕ್ರಮದಲ್ಲಿ ಸೇರಿಸುವಂತಾಗಬೇಕು. ತಾವು ಇಂತದ್ದೇ ಅಧ್ಯಾಯ ಎಂದು ಹೇಳುವುದಿಲ್ಲ. ಸರ್ಕಾರಕ್ಕೆ ಆಗ್ರಹಿಸುವ ಕೆಲಸ ಮಾತ್ರ ತಮ್ಮದು. ಮುಂದಿನದ್ದು ಸರ್ಕಾರಕ್ಕೆ ಬಿಟ್ಟಂತಹ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾವು ಪ್ರಾರಂಭಿಸಿರುವ ಭಗವದ್ಗೀತಾ ಅಭಿಯಾನ ಹಲವರ ಜೀವನದ ಬದಲಾವಣೆಗೆ ಕಾರಣವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಕಲಬುರುಗಿ ಜೈಲಿನಲ್ಲಿ ಭಗವದ್ಗೀತೆ ಉಪನ್ಯಾಸ ನಡೆಸಿದ 2-3 ಬಾರಿಯೂ ಗುರುತರ ಅಪರಾಧವೆಸಗಿದ್ದಾತ ಅಲ್ಲಿದ್ದ. ಕೆಲವು ದಿನಗಳ ನಂತರ ಆತ ನಮಗೆ ಪತ್ರವೊಂದನ್ನು ಬರೆದಿದ್ದ. ಭಗವದ್ಗೀತೆ ಕೇಳಿ ಪರಿವರ್ತನೆಗೊಂಡಿದ್ದು, ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಗೊಂಡಿರುವ ಬಗ್ಗೆಯೂ ತಿಳಿಸಿದ್ದರು ಎಂದರು.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಭಗವದ್ಗೀತಾ ಅಭಿಯಾನ ಕೈಗೊಳ್ಳಲಾಗಿತ್ತು. ಅಲ್ಲಿದ್ದ ಖೈದಿಯೊಬ್ಬರು ಜೈಲಿನಿಂದ ಬಿಡುಗಡೆಗೊಂಡ ನಂತರದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲವಾರು ಘಟನೆಗಳು ತಮ್ಮ ಗಮನಕ್ಕೆ ಬಂದಿವೆ. ಇನ್ನೂ ಇರಬಹುದು. ಭಗವದ್ಗೀತಾ ಅಭಿಯಾನ ಒಳ್ಳೆಯ ಪರಿಣಾಮ ಬೀರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next