Advertisement

ಜಗತ್ತಿನ ಎಲ್ಲ ಜನಾಂಗದ ಉನ್ನತಿಗೆ ಭಗವದ್ಗೀತೆಯಲ್ಲಿದೆ ಸಂದೇಶ: ಪುತ್ತಿಗೆ ಶ್ರೀ

11:45 AM Jan 19, 2024 | Team Udayavani |

ಉಡುಪಿ: ಭಗವದ್ಗೀತೆ ಗ್ರಂಥವು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಜನಾಂಗದ ಉನ್ನತಿಗೆ ಅದರಲ್ಲಿ ಮಹತ್ವದ ಸಂದೇಶವಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

Advertisement

ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಗುರುವಾರ ಜರಗಿದ ಪರ್ಯಾಯ ಸಂಧ್ಯಾ ದರ್ಬಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶಿರ್ವಚನ ನೀಡಿದರು.

ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿರುವರಲ್ಲಿ ಶ್ರೀಕೃಷ್ಣ ದೇವರ ವಿಭೂತಿ ರೂಪವಿದೆ. ಪರ್ಯಾಯ ಸಂಧ್ಯಾ ದರ್ಬಾರ್‌ನಲ್ಲಿ ಈ ಸಂದೇಶ ಸಮಾಜಕ್ಕೆ ನೀಡಬೇಕು ಎಂಬ ಆಶಯದಿಂದ ಎಲ್ಲ ಕ್ಷೇತ್ರದ ಸಾಧಕರನ್ನು ಇಲ್ಲಿಗೆ ಆಹ್ವಾನಿಸಿ ಸಮ್ಮಾನಿಸಲಾಗಿದೆ. ಭಗವಂತ ರಾಮ ಮತ್ತು ಕೃಷ್ಣರು ಸರ್ವ ಕ್ಷೇತ್ರದ ಸಾಧಕರಿಗೆ ಮಾರ್ಗದರ್ಶಿಗಳು. ಕೃಷ್ಣನ ಹಲವು ಸಾಧಕ ರೂಪಗಳು ಜೀವನದಲ್ಲಿ ಎಲ್ಲರೂ ಸಾಧನೆ ಮಾಡಲು ಪ್ರೇರಣೆಯಾಗಿವೆ. ಭಗವದ್ಗೀತೆಯಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುವ ತತ್ವಗಳಿವೆ ಎಂದರು.

ಸಾಧಕ ವ್ಯಕ್ತಿ ಎಂದಿಗೂ ವೈಯಕ್ತಿಕ ಪ್ರತಿಷ್ಠೆ ಹೊಂದಿರಬಾರದು. ತಾನು ಮಾಡುವ ಕರ್ತವ್ಯದಲ್ಲಿ ಶ್ರೇಷ್ಠತೆ ಕಾಣಬೇಕು. ಇಲ್ಲದಿದ್ದರೆ ಅದು ಅಧರ್ಮವಾಗುತ್ತದೆ ಎಂದರು.

ಧರ್ಮ ಪ್ರಚಾರದಲ್ಲಿ ವಿಶಿಷ್ಟ ಸಾಧನೆ
ಶಾಸಕ ಬಸವನಗೌಡ ಯತ್ನಾಳ್‌ ಅವರು ಶುಭಾಶಂಸನೆಗೈದು, ವಿಶ್ವಕ್ಕೆ ಹಿಂದುತ್ವದ ಶಕ್ತಿ ತೋರ್ಪಡಿಸಿದ ಕೀರ್ತಿ ಉಡುಪಿ ನೆಲಕ್ಕೆ ಸಲ್ಲುತ್ತದೆ. ವಿಶ್ವಗುರು ಸಂಕಲ್ಪಕ್ಕೆ ಪೂರಕವಾಗಿ ಪುತ್ತಿಗೆ ಶ್ರೀಪಾದರು ವಿದೇಶಗಳಲ್ಲಿ ಧರ್ಮ ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದರು.

Advertisement

ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಜನಾರ್ದನ್‌ ರೆಡ್ಡಿ, ಅರುಣಾ ಲಕ್ಷ್ಮೀ, ಉದ್ಯಮಿ ಸಂತೋಷ್‌ ಶೆಟ್ಟಿ ಪುಣೆ, ಮಹಾರಾಷ್ಟ್ರ ಶಾಸಕ ಹಿತೇಂದ್ರ ಠಾಕೂರ್‌, ಪ್ರವೀಣಾ ಠಾಕೂರ್‌, ಮೊಗವೀರ ಸಮುದಾಯದ ಮುಖಂಡ ಜಯ ಸಿ. ಕೋಟ್ಯಾನ್‌, ಹೈದರಾಬಾದ್‌ ಎಲ್‌ಐಸಿ ಝೋನಲ್‌ ಮ್ಯಾನೇಜರ್‌ ಶ್ಯಾಮ್‌ಸುಂದರ್‌, ಬ್ಯಾಂಕ್‌ ಆಫ್ ಬರೋಡಾ ಮಹಾ ಪ್ರಬಂಧಕಿ ಆರ್‌. ಗಾಯತ್ರಿ, ಉದ್ಯಮಿ ಡಾ| ವಿರಾಜ್‌ ಶೆಟ್ಟಿ, ಪ್ರಮುಖರಾದ ಎನ್‌. ಆರ್‌. ರಮೇಶ್‌, ವೆಂಕಟರಮಣ ಮೂರ್ತಿ ಅವರನ್ನು ಸಮ್ಮಾನಿಸಲಾಯಿತು.

ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್‌. ಎಸ್‌. ಬಲ್ಲಾಳ್‌, ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್‌ ಉಪಸ್ಥಿತರಿದ್ದರು. ಪರ್ಯಾಯ ಸ್ವಾಗತ ಸಮಿತಿ ಪ್ರ. ಕಾರ್ಯದರ್ಶಿ ಬೆಳಪು ದೇವಿ ಪ್ರಸಾದ್‌ ಶೆಟ್ಟಿ ಸ್ವಾಗತಿಸಿ, ವಿ| ಗೋಪಾಲಾಚಾರ್ಯ ನಿರೂಪಿಸಿದರು.

ವಿಶ್ವಾಸಾರ್ಹ ಪತ್ರಿಕೆ “ಉದಯವಾಣಿ’
ಮುದ್ರಣ ಉದ್ಯಮದಲ್ಲಿ ವಿಶೇಷವಾಗಿ ಸೆಕ್ಯು ರಿಟಿ ಪ್ರಿಂಟಿಂಗ್‌ನಲ್ಲಿ ವಿಶ್ವಕ್ಕೇ ಮಾದರಿಯಾದ ಗುಣ ಮಟ್ಟದ ಸೇವೆಯನ್ನು ನೀಡಿದ್ದಲ್ಲದೇ ಅದೇ ರೀತಿ ಪತ್ರಿಕಾರಂಗದಲ್ಲಿಯೂ ವಿಶೇಷ ಸೇವೆ ಸಲ್ಲಿಸಿದವರು ಮಣಿಪಾಲದ ಪೈ ಬಂಧುಗಳು. “ಉದಯ ವಾಣಿ’ಯ ಮೂಲಕ ಜನಸಮುದಾಯದ ಅಗತ್ಯ ಗಳಿಗೆ ಕಾಳಜಿ ವಹಿಸುತ್ತಿರು ವುದು ಸ್ತುತ್ಯರ್ಹ. ಕರಾವಳಿ ಭಾಗದಲ್ಲಿ “ಉದಯವಾಣಿ’ಯನ್ನು ಓದು ಗರು ವಿಶ್ವಾಸಾರ್ಹ ಪತ್ರಿಕೆಯಾಗಿ ಸ್ವೀಕರಿಸಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಮೆಚ್ಚುಗೆ ಸೂಚಿಸಿದರು.

ಧರ್ಮರಕ್ಷಣೆ-ವಿಶಿಷ್ಟ ಸಾಧನೆ
“ತರಂಗ’ ವಾರ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಮಾತನಾಡಿ, ಸಾಧನೆಯಲ್ಲಿ ಎರಡು ಬಗೆಯ ಜನರು ಇರುತ್ತಾರೆ. ಒಬ್ಬರು ಸಾಧಕರ ಮಾರ್ಗದಲ್ಲಿ ಸಾಗಿದರೆ, ಇನ್ನೊಬ್ಬರು ಸಾಧನೆಗಾಗಿ ಹೊಸದಾರಿಯನ್ನು ಹುಡುಕುತ್ತಾರೆ. ಈ ಸಾಲಿನಲ್ಲಿ ಪುತ್ತಿಗೆ ಶ್ರೀಗಳು ಶಾಸ್ತ್ರ, ಕಾನೂನು, ತತ್ವಗಳನ್ನು ಅನುಸರಿಸುವುದರೊಂದಿಗೆ ಸೀಮೋ ಲ್ಲಂಘನ ಮಾಡಿ ವಿದೇಶಗಳಲ್ಲಿ ಧರ್ಮ ಪ್ರಚಾರ ಕಾರ್ಯ ಕೈಗೊಂಡು ಧರ್ಮಕ್ಕಾಗಿ ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಪುತ್ತಿಗೆ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ದರ್ಬಾರ್: ವಿಶೇಷ ಫೋಟೋ ಗ್ಯಾಲರಿ – https://bit.ly/3SbJixY

Advertisement

Udayavani is now on Telegram. Click here to join our channel and stay updated with the latest news.

Next