Advertisement

Bhagavad Gita ಸಮ್ಮೇಳನದಿಂದ ಶ್ರೀಕೃಷ್ಣನಿಗೆ ಅತೀವ ಸಂತೋಷ: ಪುತ್ತಿಗೆ ಶ್ರೀ

01:15 AM Mar 30, 2024 | Team Udayavani |

ಉಡುಪಿ: ಗೀತಾಚಾರ್ಯನಾದ ಶ್ರೀಕೃಷ್ಣನಿಗೆ ಗೀತೆಯ ಸೇವನೆಯಿಂದ ಅತೀವ ಸಂತೋಷ. ಸ್ವಯಂ ತನ್ನ ಮುಖಕಮಲದಿಂದ ಹೊರಹೊಮ್ಮಿದ ಅಮೃತಮಯವಾದ ಗೀತಾ ಗ್ರಂಥದ ಅಧ್ಯಯನ-ಚಿಂತನೆಗಳಿಂದ ಜಗತ್ತಿನ ವಿಕಾಸವಾಗುತ್ತದೆ ಎಂದು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಹೇಳಿದರು.

Advertisement

.ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ವತಿಯಿಂದ ಒಡಿಶಾದ ಲೋಕಭಾಷಾ ಪ್ರಚಾರ ಸಮಿತಿಯ ಸಹಭಾಗಿತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಉಪಸ್ಥಿತರಿದ್ದ ಕಿರಿಯ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಭಗವದ್ಗೀತಾ ಗ್ರಂಥದ ಮಹತ್ವ ಮತ್ತು ಆವಶ್ಯಕತೆಯನ್ನು ತಿಳಿಸಿದರು.

ದೇಶ-ವಿದೇಶಗಳ ವಿದ್ವಾಂಸರು ಭಾಗವಹಿಸಿದ್ದುನ್ನು ಕಂಡು ಪರಮಪೂಜ್ಯ ಶ್ರೀಪಾದರು ಸಂತೋಷವನ್ನು ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಆನ್ಲೈನ್ ಮೂಲಕ ಅಮೆರಿಕ, ಆಸ್ಟ್ರೇಲಿಯ, ನೇಪಾಳ ಮುಂತಾದ ರಾಷ್ಟ್ರಗಳ ವಿದ್ವಾಂಸರು ಮತ್ತು ಭಾರತದ ವಿವಿಧ ರಾಜ್ಯಗಳ ನೂರಾರು ವಿದ್ವಾಂಸರು ಪ್ರಬಂಧಗಳನ್ನು ಮಂಡಿಸುವವರಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಒಡಿಶಾದ ಲೋಕಭಾಷಾ ಪ್ರಚಾರ ಸಮಿತಿ ಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿರುವ ಡಾ. ಸದಾನಂದ ದೀಕ್ಷಿತ್. ಹಾಗೂ ಸಂಸ್ಕೃತ ಉಪನ್ಯಾಸಕರಾದ ಕುಶಲ್ ಕಲಿತಾ. ಹಾಗೂ ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಸಂಸ್ಕೃತ ಪ್ರಶಿಕ್ಷಣವನ್ನು ನೀಡುತ್ತಿರುವ ರಾಜಸ್ಥಾನದ ನಿವೃತ್ತ ಪ್ರಾಚಾರ್ಯರಾದ ಡಾ. ನಿರಂಜನ್ ಸಾಹು. ಮತ್ತು ಒಡಿಶಾ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಬಿಪಿನಬಿಹಾರೀ ಶತಪಥಿ ಮತ್ತು ಮಣಿಪಾಲಿನ ಮುನಿಯಾಲು ಆಯುರ್ವೇದ ಕಾಲೇಜಿನ ಉಪ ಪ್ರಾಚಾರ್ಯರಾದ
ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಭಗವದ್ಗೀತೆಯ ಈ ರೀತಿಯ ಅನೇಕ ಸಮ್ಮೇಳನಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆ ಎಂದು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ ಬಿ ಗೋಪಾಲಾಚಾರ್ಯರು ಸ್ವಾಗತಿಸಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next