Advertisement
ಹೊಸದಿಲ್ಲಿಯಲ್ಲಿ 1974ರ ಎಪ್ರಿಲ್ 22ರಂದು ಜನಿಸಿದರು. ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವೀಧರರಾಗಿದ್ದರೂ ಗುರುತಿಸಿಕೊಂಡದ್ದು ಮಾತ್ರ ಬರವಣಿಗೆ ಹಾಗೂ ಭಾಷಣಕಾರರಾಗಿ. 3 ಈಡಿಯಟ್ಸ್, 2ಸ್ಟೇಟ್ಸ್ ಸಿನೆಮಾಗಳಿಗೆ ಇವರ ಕಾದಂಬರಿಯೇ ಸ್ಫೂರ್ತಿ.
Related Articles
ಯಶಸ್ಸಿನ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹೆಚ್ಚು ಹಣ, ಆಸ್ತಿ ಸಂಪಾದನೆಯನ್ನೇ ಕೆಲವರು ಯಶಸ್ಸು ಎನ್ನುತ್ತಾರೆ. ಇನ್ನು ಕೆಲವರಿಗೆ ಖ್ಯಾತಿ ಗಳಿಸುವುದೇ ಯಶಸ್ಸಾಗಿರುತ್ತದೆ. ನಮ್ಮ ಮಿತಿಯಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಹೊಸ ಆಲೋಚನೆ ದೊರೆಯುತ್ತದೆ. ಅದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎನ್ನುವ ಚೇತನ್ ಭಗತ್ ಅವರ ಮಾತಿನಲ್ಲಿ ಸಾಧನೆಗೆ ಪರಿಶ್ರಮವೂ ಬೇಕು ಎಂಬ ಅರ್ಥವೂ ಇದೆ. ಅಲ್ಲದೇ ಕೇವಲ ಆಸ್ತಿ, ಖ್ಯಾತಿ ಸಂಪಾದನೆಯಷ್ಟೇ ನಮ್ಮ ಯಶಸ್ಸಲ್ಲ. ಹೆಚ್ಚಿನ ಜ್ಞಾನ ಸಂಪಾದನೆಯೂ ಯಶಸ್ಸಿಗೆ ಮುನ್ನುಡಿಯಾಗುತ್ತದೆ ಎಂಬ ಒಳಾರ್ಥವೂ ಸೇರಿಕೊಂಡಿದೆ.
Advertisement
ಕನಸುಗಳೇ ಗುರಿಯಾಗಲಿಕನಸುಗಳನ್ನು ಗುರಿಯಾಗಿಸಿ ಮುನ್ನಡೆದಾಗ ಮಾತ್ರ ಯಶಸ್ಸು ಸಂಪಾದಿಸಲು ಸಾಧ್ಯ. ಆದರೆ ಕನಸು ಮತ್ತು ಗುರಿ ಒಂದೇ ಆಗಲಾರದು. ಇವು ಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ಯುವಕರು ಮೊದಲು ಅರ್ಥಮಾಡಿಕೊಳ್ಳಬೇಕು. ಗುರಿ ಸಾಧನೆ ನಿಟ್ಟಿನಲ್ಲಿ ಇರುವ ಆತಂಕಗಳನ್ನು ನಿವಾರಿಸಿಕೊಳ್ಳಬೇಕು. ಯುವಕರಿಗೆ ಜೀವನದಲ್ಲಿ ಸ್ಪಷ್ಟ ಗುರಿ ಇರುವುದು ಆವಶ್ಯಕ. ಆ ಗುರಿಯನ್ನು ಈಡೇರಿಸುವ ಉದ್ದೇಶ ನಮಗೆ ಸ್ಪಷ್ಟವಾಗಿರಬೇಕು. ಗುರಿ ಸಾಧನೆಗಾಗಿ ಸಮರ್ಪಕ ಕಾರ್ಯ ಯೋಜನೆ ಬೇಕು. ಕೆಲ ಬಾರಿ ಹಿನ್ನಡೆಯಾಗಬಹುದು ಆಗ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಮುನ್ನುಗ್ಗಬೇಕು. ಇದಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸ ಅಗತ್ಯ. ನಾನು ಪುಸ್ತಕ ಬರೆಯುತ್ತೇನೆ ಎಂಬುದು ಕನಸು. ಆದರೆ 6 ತಿಂಗಳಲ್ಲಿ ಪುಸ್ತಕ ಬರೆದು ಮುಗಿಸುತ್ತೇನೆ ಎಂಬುವುದು ನನ್ನ ಗುರಿ ಎನ್ನುವುದು ಚೇತನ್ ಭಗತ್‌ರ ಸ್ಪಷ್ಟ ಮಾತು. ಕನಸು ನನಸಾಗಿಸಿ
ಎಲ್ಲರ ಬದುಕಿನಲ್ಲಿ ಸಾಕಷ್ಟು ಕನಸುಗಳಿರಬಹುದು. ಆದರೆ ಎಲ್ಲವನ್ನೂ ಈಡೇರಿಸಲು ಸಾಧ್ಯವಿಲ್ಲ. ಶ್ರಮಪಟ್ಟರೆ, ದೃಢ ನಿರ್ಧಾರ ಕೈಗೊಂಡರೆ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದರೆ ಮಾತ್ರ ಕನಸುಗಳೆಲ್ಲ ನನಸಾಗಲು ಸಾಧ್ಯವಿದೆ ಎನ್ನುತ್ತಾರೆ ಅವರು. ಜೀವನದಲ್ಲಿ ಬರೀ ವೃತ್ತಿ, ಶೈಕ್ಷಣಿಕ ಗುರಿಗಳೇ ಮುಖ್ಯವಲ್ಲ. ಒಂದು ಸಮತೋಲನವಾದ, ಸಫಲವಾದ ಜೀವನಕ್ಕೆ ತಕ್ಕುದಾದ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು. ದೇವರು ನಾನು ಬಯಸಿದ್ದನ್ನು ಕೊಡಲಿಲ್ಲ. ಆದರೆ ನನಗೇನು ಅಗತ್ಯವಿದೆಯೋ ಅದನ್ನು ಕೊಟ್ಟಿದ್ದಾನೆ. ಅದನ್ನು ಆನಂದಿಸುತ್ತೇನೆ ಎನ್ನುತ್ತಾರೆ ಚೇತನ್ ಭಗತ್. ಸಿಗದಿರುವುದಕ್ಕೆ ದುಃಖ ಪಡುವುದಕ್ಕಿಂತ ಸಿಕ್ಕಿರುವುದರಲ್ಲಿ ಖುಷಿ ಅನುಭವಿಸುವುದನ್ನು ಕಲಿಯಬೇಕು. ನಮಗಿಷ್ಟವಾದ ಉದ್ಯೋಗ, ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೆ ನಮ್ಮ ಬದುಕಿಗೆ ನಮಗಿಷ್ಟವಾಗುವ ಬೇರೊಂದು ದಾರಿಯನ್ನು ಹುಡುಕಿಕೊಳ್ಳಬೇಕು. ನಮ್ಮ ಲ್ಲಿರುವ ಕೌಶಲಗಳ ಬೆಳವಣಿ ಗೆಗೆ ಅವಕಾಶ ನೀಡಬೇಕು ಎನ್ನುತ್ತಾರೆ. ಗುರಿ ಪೂರೈಸಿ
ವಿದ್ಯಾರ್ಥಿಗಳು ದೀರ್ಘಾವಧಿ ಗುರಿಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಎಡವುತ್ತಾರೆ. ಅದಕ್ಕೆ ದೀರ್ಘಾವಧಿ ಗುರಿಯನ್ನು ವಿಭಾಗಿಸಿ, ಹಂತ ಹಂತವಾಗಿ ಅವನ್ನು ಪೂರೈಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಮನಸ್ಸು ಗುರಿ ಬದಲಾವಣೆ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತದೆ. ಮನುಷ್ಯರಂತೆ ಇರೋಣ
ಕೆಲವೊಮ್ಮೆ ತರಗತಿಗಳಿಗೆ ರಜೆ ಹಾಕುವುದು, ಒಂದೆರಡು ಪೇಪರ್‌ಗಳಲ್ಲಿ ಕಡಿಮೆ ಅಂಕ ಗಳಿಸುವುದು, ಕೆಲವು ಸಂದರ್ಶನಗಳನ್ನು ಹಾಳು ಮಾಡಿಕೊಳ್ಳುವುದು, ಕೆಲಸಕ್ಕೆ ರಜೆ ಕೊಡುವುದು, ಪ್ರೀತಿಸುವುದು, ಹೆಂಡತಿ ಜತೆ ಸಣ್ಣ ಪುಟ್ಟ ಕಾರಣಕ್ಕೆ ಜಗಳವಾಡುವುದು ಇವೆಲ್ಲ ಬದುಕಿನಲ್ಲಿ ಇರಬೇಕು. ಯಾಕೆಂದರೆ ನಾವು ಮನುಷ್ಯರು, ಯೋಜಿತ ಸಾಧನಗಳಲ್ಲ ಎನ್ನುವ ಚೇತನ್ ಭಗತ್‌ರ ಈ ಮಾತಿನಲ್ಲಿ ಬದುಕಿನಲ್ಲಿ ಕಷ್ಟ, ಸುಖ ಎಲ್ಲವನ್ನೂ ಅನುಭವಿಸಬೇಕು ಎಂಬ ಸ್ಪಷ್ಟ ಸಂದೇಶವೂ ಅಡಗಿದೆ. ನಿಮ್ಮನ್ನು ನೀವು ಸುಧಾರಣೆ ಮಾಡಿಕೊಳ್ಳುವುದಕ್ಕಾಗಿ ಸಾಕಷ್ಟು ಬ್ಯುಸಿಯಾಗಿರಿ… ಬೇರೆಯವರ ಬಗ್ಗೆ ವಿಮರ್ಶೆ ಮಾಡದಷ್ಟು. ಯಾವಾಗ ನೀವು ಎತ್ತರದಲ್ಲಿ ಹಾರಲು ಪ್ರಾರಂಭಿಸುತ್ತೀರೋ ಆಗ ಜನರು ನಿಮ್ಮೆಡೆಗೆ ಕಲ್ಲು ತೂರಲು ಪ್ರಯತ್ನಿಸುತ್ತಾರೆ. ಆದರೆ ನೀವು ಕೆಳಕ್ಕೆ ನೋಡದೇ ಮತ್ತೂ ಮೇಲೆ ಹಾರಿ ದರೆ ಜನ ತೂರುವ ಕಲ್ಲು ನಿಮ್ಮೆಡೆಗೆ ಬರುವುದಿಲ್ಲ. ಶ್ರಮಪಟ್ಟು ಕೆಲಸ ಮಾಡಿ ಹಾಗೆಯೇ ನಿಮ್ಮ ಪ್ರೀತಿಪಾತ್ರರಿಗೆ, ಗೆಳೆಯರಿಗೆ, ಕುಟುಂಬಸ್ಥರಿಗಾಗಿ ಸಮಯ ಮೀಸಲಿಡಿ. ಯಾಕೆಂದರೆ ನಮ್ಮ ಜೀವನದ ಕೊನೆಯ ಕಾಲದಲ್ಲಿ ಯಾರು ಕೂಡ ನೀವು ಮಾಡಿದ ಪವರ್‌ಪಾಯಿಂಟ್ ಪ್ರಸ್ತುತಿಯನ್ನು ಕೇಳುವುದಿಲ್ಲ. ಸ್ಫೂರ್ತಿ ಎಲ್ಲರಿಗೂ ಮುಖ್ಯ. ಬದು ಕಿ ನಲ್ಲಿ ಸಾಧ ನೆಗೆ ಸ್ಫೂರ್ತಿ ಅತ್ಯಗತ್ಯ. ಪ್ರತಿಯೊಬ್ಬ ಯಶಸ್ವೀ ವ್ಯಕ್ತಿ ಸ್ಫೂರ್ತಿಯಿಂದಲೇ ಸಾಧನೆಗೈದಿರುತ್ತಾರೆ. ಕೇವಲ ಜ್ಞಾನವಷ್ಟೇ ಮುಖ್ಯವಲ್ಲ, ಅದರೊಂದಿಗೆ ಸ್ಫೂರ್ತಿಯ ಸೆಲೆ ಕೂಡ ಅಗತ್ಯವಾಗಿರುತ್ತದೆ. ಜ್ಞಾನವನ್ನು ಬಳಸಿಕೊಂಡು ಮಹಾ ಸಾಧನೆ ಮಾಡಲು ಸ್ಫೂರ್ತಿ ಬೇಕು. ಬುದ್ಧಿಶಾಲಿ ಎನಿಸದವರೂ ಸಹ ಸ್ಫೂರ್ತಿಯಿಂದ ಅಗಾಧವಾದುದನ್ನು ಮಾಡುತ್ತಾರೆ.
– ಚೇತನ್ ಭಗತ್ ಪುನೀತ್ ಸಾಲ್ಯನ್