Advertisement
ಮಂಗಳವಾರ 7 ಜನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರ ಅಸ್ವಸ್ಥಗೊಂಡ ಸರೋಜಮ್ಮ, ಗಂಗಾಧರ್ ಇಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 4-5 ಬಾರಿ ಬೇಧಿ ಕಾಣಿಸಿಕೊಂಡು ಹೊರರೋಗಿಗಳಾಗಿ ಸುಮಾರು 23ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
ಕಲುಷಿತ ನೀರು ಕುಡಿದು ಅಸ್ವಸ್ಥರಾದ ಘಟನೆಯ ಬಗ್ಗೆ ಕಳವ್ಯಕ್ತಪಡಿಸಿ ಮೃತ ಕುಟುಂಬಗಳಿಗೆ ಧನ ಸಹಾಯ ಮಾಡಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಘಟನೆಗೆ ಸಂಬಂದಪಟ್ಟ ಅಧಿ ಕಾರಿಗಳ ಬಳಿ ಮಾತನಾಡಿ ಮಾಹಿತಿ ಪಡೆದಿದ್ದೇನೆ ಎಂದರು. ಅಸ್ವಸ್ಥರ ಔಷಧೋಪಚಾರದ ಖರ್ಚನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು. ಮೃತ ಕುಟುಂಬಗಳಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಇನ್ನೆರಡು ದಿನಗಳೊಳಗಾಗಿ ಪರಿಹಾರ ನೀಡಬೇಕು ನೀರು ಕಲುಷಿತಗೊಂಡಿರುವ ಬಗ್ಗೆ ವರದಿ ಬಂದ ಮೇಲೆ ನಿಖರ ಕಾರಣ ತಿಳಿಯುತ್ತದೆ. ನೀರಿನ ಟ್ಯಾಂಕ್ ಗಳನ್ನು ಸ್ವತ್ಛಗೊಳಿಸದಿದ್ದರೆ ಆಗುವ ಅವಘಡವನ್ನು ಸುತ್ತಮುತ್ತಲ ಗ್ರಾಮಗಳ ಜನತೆ ಅರಿತಿದ್ದಾರೆ. ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರು ನೀರಿನ ಟ್ಯಾಂಕ್‌ಗಳನ್ನು ಸ್ವತ್ಛಗೊಳಿಸಬೇಕು ಎಂದರು.
Advertisement
ಮೃತರ ಕುಟುಂಬಕ್ಕೆ ಪರಿಹಾರ ಶೀಘ್ರ
ಕಾಗೋಡು ಕಂದಾಯ ಸಚಿವ ಕಾಗೂಡು ತಿಮ್ಮಪ್ಪ ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.ಮೃತರ ಕುಟುಂಬಗಳಿಗೆ ಸರ್ಕಾರದಿಂದ ನೀಡಬೇಕಾದ ಪರಿಹಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಲಾಗಿದೆ. ಮೃತರಿಗೆ ಸಿಗಬೇಕಾದ ಪರಿಹಾರವನ್ನು ಶೀಘ್ರವಾಗಿ ಮಂಜೂರು ಮಾಡಲಾಗುವುದು. ಕಲುಷಿತ ನೀರಿನ ಘಟನೆಗೆ ಕಾರಣರಾದ ಅಧಿ ಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳಲಾಗುವುದು ಎಂದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಅಸ್ವಸ್ಥರು ದಾಖಲಾಗಿರುವ ಖಾಸಗಿ ಆಸ್ಪತ್ರೆಯವರು ಹಣ ಕೇಳುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ದೂರು ನೀಡಿದರು. ದೂರಿಗೆ ಸ್ಪಂದಿಸಿ ಮಾತನಾಡಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಯ ಸಂಪೂರ್ಣ ಹಣವನ್ನು ಸರ್ಕಾರವೆ ಭರುಸುತ್ತದೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯ ಇಲ್ಲ. ಖಾಸಗಿ ಆಸ್ಪತ್ರೆಯವರು ಹಣ ಕೇಳಿದರೆ ಅವರಿಗೆ ಬುದ್ಧಿ ಕಲಿಸುವ ವಿದ್ಯೆ ನಮ್ಮ ಬಳಿ ಇದೆ. ಗ್ರಾಮಗಳಿಗೆ ಕುಡಿಯುವ ನೀರಿನ ಅಗತ್ಯವಿದ್ದರೆ ಹೊಸದಾಗಿ ಕೊಳವೆ ಬಾವಿ ಹಾಕಿಸಿ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಧಿಕಾರಿಗಳಿಗೆ ತಿಳಿಸಿದರು.
ಗ್ರಾಮಸ್ಥರ ಆಕ್ರೋಶ
ಸಚಿವ ಕಾಗೋಡು ತಿಮ್ಮಪ್ಪ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಬರುತ್ತಿದಂತೆ ಆಂಜನೇಯ ದೇವಾಸ್ಥಾನದ ಬಳಿ ಕೆಲ ಯುವಕರು ಸಚಿವರನ್ನು ಅಡ್ಡಗಟ್ಟಲು ಪ್ರಯತ್ನಿಸಿದರು. ಕಳೆದ ಬಾರಿ ಗ್ರಾಮಕ್ಕೆ ಬಂದಾಗ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡುತ್ತೇವೆಂದು ಭರವಸೆ ನೀಡಿದರು. ಹಣ ಕೇಳಲು ಸಚಿವರ ಮನೆಗೆ ಹೋದಾಗ ದೇವಸ್ಥಾನಗಳ ನಿರ್ಮಾಣಕ್ಕೆ ಹಣ ನೀಡುವುದಿಲ್ಲ. ದೇವಸ್ಥಾನ ಕಟ್ಟುವ ಬದಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದರೆ ಕೂಲಿಯಾದರೂ ಸಿಗುತ್ತದೆ ಎಂದು ಹೇಳಿ ಬರಿಗೈಲಿ ವಾಪಸ್ ಕಳಿಸಿದರು ಎಂದು ಕೆಲವರು ಆಕ್ರೋಶಗೊಂಡು ಸಚಿವರನ್ನು ಅಡ್ಡ ಹಾಕಲು ಪ್ರಯತ್ನಿಸಿದರು.
5 ಲಕ್ಷ ಪರಿಹಾರಕ್ಕೆ ಆಗ್ರಹ: ರೈತಸಂಘ ಆಗ್ರಹ: ಅಸ್ವಸ್ಥಗೊಂಡು ಮೃತರಾದವರಿಗೆ ತಲಾ 5 ಲಕ್ಷ ಪರಿಹಾರ ನೀಡಿ ಅಸ್ವಸ್ಥರಾದವರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು ಎಂದು ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಆಗ್ರಹಿಸಿದರು.
ಮೈದೊಳಲು ಗ್ರಾಮಕ್ಕೀಗ ರಾಜಕಾರಣಿಗಳ ದಂಡು!
ಮೈದೊಳಲು ಗ್ರಾಮವೀಗ ರಾಜಕಾರಣಿಗಳಿಂದ ತುಂಬಿ ತುಳುಕುತ್ತಿದೆ. ಕಳೆದ 15 ದಿನಗಳಿಂದಲೂ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಆದರೆ ಇದೀಗ ಮೂರು ಮಂದಿ ಮೃತಪಟ್ಟ ತಕ್ಷಣವೇ ಎಲ್ಲರಿಗೂ ಈ ಗ್ರಾಮದ ನೆನಪಾಗಿದೆ. ಜಿಲ್ಲಾಡಳಿತ, ಅರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಭೇಟಿ ನೀಡಿರುವುದು ಒಂದೆಡೆಯಾದರೆ, ಇನ್ನೊಂದೆಡೆ ರಾಜಕಾರಣಿಗಳ ದಂಡೆ ಇಲ್ಲಿ ನೆರೆದಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ದಾಂಗುಡಿಯಿಡುತ್ತಿದ್ದಾರೆ. ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಇವರ ಸಾಂತ್ವನ ಪರಿ ಕಂಡು ಗ್ರಾಮಸ್ಥರೇ ದಂಗಾಗುತ್ತಿದ್ದಾರೆ. ಇದ್ದಕ್ಕಿದ್ದಂತೆ ಉಕ್ಕಿ ಹರಿಯುವ ಪ್ರೀತಿ ಕಂಡು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ತುಂಗಾ ಚಾನಲ್ ದಂಡೆ ಒಡೆದು ಶಿವಮೊಗ್ಗ ನಗರ ವ್ಯಾಪ್ತಿಯ ಮಂಡ್ಲಿಯಲ್ಲಿ ಹತ್ತಾರು ಮನೆಗಳು ಕುಸಿದು ಬಿದ್ದು ನೂರಾರು ಮಂದಿ ನಿರಾಶ್ರಿತರಾಗಿದ್ದರೂ ಬೆರಳೆಣಿಕೆಯಷ್ಟು ರಾಜಕಾರಣಿಗಳ ಹೊರತಾಗಿ ಇನ್ನಾರಿಗೂ ಇಲ್ಲಿಗೆ ಬರಲು ಪುರುಸೊತ್ತೇ ಆಗಿರಲಿಲ್ಲ.
ಮೂರು ತಿಂಗಳಾದರೂ ಇವರಿಗೆ ಸೌಲಭ್ಯ ಒದಗಿಸುತ್ತಿಲ್ಲ ಎಂದು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ಇದೇ ರೀತಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮಸ್ಯೆ ಎದುರಾದಾಗಲೂ ಯಾರೂ ಕೇಳಲು ಬಂದಿರಲಿಲ್ಲ. ಆದರೀಗ ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ಮೈದೊಳಲು ಗ್ರಾಮದಲ್ಲೀಗ ರಾಜಕಾರಣಿಗಳ ಜಾತ್ರೆ ನೆರೆದಿದೆ!