Advertisement
ಭಾನುವಾರ ಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ನಮಗೆ ನಾವೇ ಶತ್ರುಗಳು: ಚುನಾವಣೆ ಸಮಯದಲ್ಲಾಗಲಿ ಅಥವಾ ನಂತರದ ದಿನಗಳಲ್ಲಾಗಲಿ ಅಪ್ಪಾಜಿ ಬಗ್ಗೆ ಅಭಿಮಾನವಿದ್ದವರು ನಾನು ನೇರವಾಗಿ ಅವರನ್ನು ಸಂಪರ್ಕಿಸಿಲ್ಲ ಎಂಬ ಕಾರಣಕ್ಕೆ ತಪ್ಪು ಅರ್ಥಕಲ್ಪಿಸಿಕೊಂಡು ದೂರ ಉಳಿಯುವ ಮನಸ್ಥಿತಿ ಬೆಳೆಸಿಕೊಂಡಿರುವುದರಿಂದ ಸಂಘಟನೆಯಲ್ಲಿ ವ್ಯತ್ಯಯವಾಗಿ ಇದರಿಂದ ಬೇರಯವರಿಗೆ ಲಾಭವಾಗುವಂತಾಯಿತು. ಈ ಮನಸ್ಥಿತಿಯಿಂದ ಹೊರಬರದಿದ್ದರೆ ನಮಗೆ ನಾವೇ ಶತ್ರುಗಳಾಗಿ ಸೋಲಿನ ಸುಳಿಗೆ ಸಿಲುಕಬೇಕಾಗುತ್ತದೆ ಎಂಬುದನ್ನು ಅರಿತು ಸಂಘಟನೆಯಲ್ಲಿ ಸಕ್ರಿಯವಾಗಿರಬೇಕು ಎಂದರು.
ಜಿಪಂ ಸದಸ್ಯ ಯೋಗೀಶ್ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಯವುದೇ ಕ್ಷಣದಲ್ಲಿ ಬರುವ ಸಾಧ್ಯತೆ ಇರುವುದರಿಂದ ಅಪ್ಪಾಜಿ ಬಳಗದ ಚುನಾಯಿತ ಪ್ರತಿನಿಧಿಗಳು ಈ ಹಿಂದೆ ಮಾಡಿದ ತಪ್ಪನ್ನು ಮಾಡದೆ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯಚಟುವಟಿಕೆ ನಡೆಸಿದರೆ ಬರಲಿರುವ ಚುನಾವಣೆಯಲ್ಲಿ ಅಪ್ಪಾಜಿ ಪುನಃ ಶಾಸಕರಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಜಿಪಂ ಸದಸ್ಯ ಮಣಿಶೇಖರ್ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಅಪ್ಪಾಜಿ ಬಳಗದ ಕೆಲವು ಚುನಾಯಿತ ಪ್ರತಿನಿಧಿಗಳ ನಡುವಿನ ಪರಸ್ಪರ ತಪ್ಪು ಕಲ್ಪನೆ ಕಾರಣದಿಂದ ಚುನಾವಣಾ ಪ್ರಚಾರದಲ್ಲಿ ಸರಿಯಾಗಿ ತೊಡಗಿಸಿಕೊಳ್ಳದೆ ಇದ್ದುದರ ಪರಿಣಾಮ ಉತ್ತಮ ಜನನಾಯಕರಾದ ಅಪ್ಪಾಜಿ ಸೋಲ ಬೇಕಾಯಿತು ಎಂದರು.
ಜೆಡಿಎಸ್ ಮುಖಂಡ ಹಾಗೂ ನ್ಯಾಯವಾದಿ ಮಾವಿನ ಕೆರೆ ಮಂಜಪ್ಪ ಮಾತನಾಡಿ ಭದ್ರಾ ಜಲಾಶಯ ತುಂಬುವ ನಿರೀಕ್ಷೆ ಕೈಬಿಟ್ಟಿದ್ದ ಜನತೆಗೆ ಪ್ರಕೃತಿ ನಿರೀಕ್ಷೆಗೂ ಮೀರಿ ಕೇವಲ ಐದಾರು ದಿನಗಳಲ್ಲಿ ಅತಿಯಾದ ಮಳೆ ಸುರಿಸಿ ಜಲಾಶಯ ಭರ್ತಿ ಮಾಡಿ ಕ್ಷೇತ್ರದ ರೈತರ ಮೊಗದಲ್ಲಿ ನಗು ಮೂಡಿಸಿದೆ. ಉತ್ತಮ ಜನನಾಯಕನಾದವನು ಗೆಲುವಿನಿಂದ ದರ್ಪ ಪ್ರದರ್ಶಿಸದೆ ಸೋತಾಗನಾಗದೆ, ಸಮಚಿತ್ತದಿಂದ ಯಾವಾಗಲೂ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕು ಎಂದರು.
ಶಾರದಾ ಅಪ್ಪಾಜಿ, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್, ಉಪಾಧ್ಯಕ್ಷೆ ಸರೋಜಮ್ಮ, ನಗರಸಾಭಾ ಮಾಜಿ ಅಧ್ಯಕ್ಷೆ ಹಾಲಮ್ಮ, ಸುಧಾಮಣಿ, ಸದಸ್ಯರಾದ ರವಿಕುಮಾರ್, ಬದ್ರಿನಾರಾಯಣ್, ಆನಂದ್, ಕೆಎಂಎಫ್ ಅಧ್ಯಕ್ಷ ಆನಂದ್ ಮತ್ತಿತರರು ಮಾತನಾಡಿದರು.
ಬಾಗಿನ ಸಮರ್ಪಣೆ: ಪುರೋಹಿತ ಕೃಷ್ಣಮೂರ್ತಿ ಸೋಮಯಾಜಿಗಳ ಪೌರೋಹಿತ್ಯದಲ್ಲಿ ಮಾಜಿ ಶಾಸಕ ಅಪ್ಪಾಜಿ ದಂಪತಿ ಪಕ್ಷದ ಮುಖಂಡರ, ನಾಗರಿಕರ ಸಮ್ಮುಖದಲ್ಲಿ ಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.