Advertisement

ಮತ ಜಾಗೃತಿ; ರಂಗೋಲಿ ಸ್ಪರ್ಧೆ

12:04 PM Apr 10, 2019 | Naveen |

ಭದ್ರಾವತಿ: ಲೋಕಸಭಾ ಚುನಾವಣೆ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಸ್ತ್ರೀ ಶಕ್ತಿ ಸಂಘಗಳ
ಒಕ್ಕೂಟದಿಂದ ಸಂಯುಕ್ತವಾಗಿ ಇಲ್ಲಿಯ ಹಳೇ ನಗರದ ವೀರಶೈವ ಸಭಾ ಭವನದಲ್ಲಿ ರಂಗೋಲಿ, ಮ್ಯೂಸಿಕಲ್‌, ಭಾವಗೀತೆ, ಜಾನಪದ
ಹಗ್ಗಜಗ್ಗಾಟ ಸೇರಿದಂತೆ ಇತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Advertisement

ತಾಪಂ ಇಒ ತಮ್ಮಣ್ಣಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಿಡಿಪಿಒ ಸುರೇಶ್‌ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ
ಬಂದಿದ್ದ ನೂರಾರು ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಮತದಾನ ಮಾಡಿ ಕರ್ತವ್ಯ ನಿರ್ವಹಿಸಿ, ಮತದಾನ ನಮ್ಮೆಲ್ಲರ ಹಕ್ಕು ಎಂಬಿತ್ಯಾದಿ ಘೋಷಣಾ ವಾಕ್ಯಗಳನ್ನು ಮಹಿಳೆಯರು ತಾವು ಬಿಡಿಸಿದ ವರ್ಣಮಯ
ರಂಗೋಲಿಯ ಅಡಿಯಲ್ಲಿ ಬರೆದರು.

ಕೆಲವು ಮಹಿಳೆಯರು ಮತದಾನದ ದಿನ ಬಳಸುವ ಮತಯಂತ್ರಗಳ ಚಿತ್ರವನ್ನು, ವಿವಿಪ್ಯಾಟ್‌ ಚಿತ್ರವನ್ನು ಬರೆಯುವ ಮೂಲಕ ಗಮನ ಸೆಳೆದರು. ಮತ್ತೆ ಕೆಲವರು ಮತದಾನದ ಶ್ರೇಷ್ಠತೆ ಸಾರುವ ಸ್ವರಚಿತ ಗೀತೆಗಳನ್ನು ಹಾಡಿದರೆ ಕೆಲವರು ಭಾವಗೀತೆ ,ಜಾನಪದ ಗೀತೆ ಹಾಡುವ ಮೂಲಕ ಮನ ರಂಜಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next