Advertisement

ಸನಾತನ ಸಂಸ್ಕೃತಿಯ ಮಹತ್ವ ಅಪಾರ

05:18 PM Jun 03, 2019 | Team Udayavani |

ಭದ್ರಾವತಿ: ತಂದೆ-ತಾಯಿ, ಗುರು- ಅತಿಥಿಗಳನ್ನು ದೇವರೆಂದು ಕಾಣಬೇಕು ಎಂದು ವಿಶ್ವದಲ್ಲಿ ಹೇಳುವ ಏಕೈಕ ಸಂಸ್ಕೃತಿ ಸನಾತನ ವೇದ ಸಂಸ್ಕೃತಿ ಎಂದು ಶ್ರೀ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಹೇಳಿದರು.

Advertisement

ಭಾನುವಾರ ಸಂಜೆ ಸಿದ್ಧಾರೂಢನಗರದ ಶೃಂಗೇರಿ ಶ್ರೀ ಶಂಕರ ಶಾರದಾಂಬಾ ಮಠದಲ್ಲಿ ವೇದಾಂತ ಭಾರತಿ ಭಾಷಾಮೃತವಾಹಿನಿಯಿಂದ ಏರ್ಪಡಿಸಿದ್ದ ತೈತ್ತರೀಯೋಪನಿಷತ್‌ ಶಾಂಕರಭಾಷ್ಯ ಉಪನ್ಯಾಸ ಮಾಲಿಕೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡಿದರು.

ಹತ್ತು ಉಪನಿಷತ್‌ಗಳ ಪೈಕಿ ತೈತ್ತರೀಯ ಉಪನಿಷತ್‌ ತನ್ನದೇ ಆದ ವಿಶಿಷ್ಟತೆ ಹೊಂದಿರುವುದರೊಂದಿಗೆ ಜೀವನದಲ್ಲಿ ಹೇಗೆ ಬದುಕಬೇಕು. ಯಾವುದನ್ನು ಮಾಡಬೇಕು. ಯಾವುದನ್ನು ಮಾಡಬಾರದು ಎಂದು ತಿಳಿಸುತ್ತದೆ. ಶಂಕರಾಚಾರ್ಯರು ತೈತ್ತರೀಯ ಉಪನಿಷತ್‌ ಮೇಲೆ ರಚಿಸಿರುವ ಭಾಷ್ಯ ಅದರಲ್ಲಿನ ಶ್ಲೋಕಗಳ ಯತಾರ್ಥವನ್ನು ತಿಳಿಸುತ್ತದೆ ಎಂದರು.

ಮಾತೃ ದೇವೋಭವ, ಪಿತೃ ದೇವೋಭವ ಎನ್ನುವ ತೈತ್ತರೀಯ ಉಪನಿಷತ್‌ ಮಂತ್ರ ಕೇವಲ ಅವರು ನಮ್ಮ ಜನ್ಮಕ್ಕೆ ಕಾರಣರಾದುದರಿಂದ ಆ ಕೃತಜ್ಞತೆಗಾಗಿ ಅವರನ್ನು ದೇವರೆಂದು ಕಾಣಬೇಕೆಂದು ಹೇಳಿಲ್ಲ. ನಮ್ಮ ಆತ್ಮೋನ್ನತಿಯಾಗಬೇಕಾದರೆ ನಿಜವಾದ ಬ್ರಹ್ಮಜ್ಞಾನ ಅಂದರೆ ಆನಂದ ಪ್ರಾಪ್ತಿಯಾಗಬೇಕಾದರೆ ಬದುಕಿನಲ್ಲಿ ಅವರನ್ನು ಸದಾ ದೇವರಂತೆ ಆದರದಿಂದ ಕಾಣಬೇಕು ಎಂದು ಹೇಳಿದೆ. ಆದರೆ ಇಂದು ಈ ಉಪನಿಷತ್‌ ಮಂತ್ರಗಳ ಅರ್ಥವನ್ನು ಅರಿಯುವ ಗೋಜಿಗೆ ಹೋಗದೆ ಮಂತ್ರಗಳನ್ನು ಕೇವಲ ಕೇಳುವ, ಹೇಳುವ ಪರಿಪಾಠ ಬೆಳೆಸಿಕೊಂಡಿರುವುದರಿಂದ ಮನೆ- ಮನಗಳಲ್ಲಿ ತಂದೆ-ತಾಯಿರನ್ನು ಮಕ್ಕಳು ಅನಾದರದಿಂದ ಕಾಣುವ ಪ್ರವೃತ್ತಿ ಹೆಚ್ಚಾಗಿದೆ ಎಂದರು.

ಮಠದ ಧರ್ಮಾಧಿಕಾರಿ ಸುಬ್ಬರಾವ್‌ ಮಾತನಾಡಿದರು. ವೇದಾಂತ ಭಾರತಿ ಸಂಚಾಲಕ ಕೃಷ್ಣಮೂರ್ತಿ ಸೋಮಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಮ.ಸ. ನಂಜುಂಡಸ್ವಾಮಿ ನಿರೂಪಿಸಿದರು.

ಮಠದ ವತಿಯಿಂದ ನಾಗರಾಜ್‌ ದಂಪತಿಗಳು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಪೂಜಾ ಪ್ರಾರ್ಥಿಸಿದರು.ಮಠದ ಅರ್ಚಕ ಗಣೇಶ್‌ ಭಟ್, ಅಬಸೆ ದಿನೇಶ್‌ಜೋ‚ಶಿ, ಜನಾರ್ಧನ ಐಯ್ಯಂಗಾರ್‌, ವೇ| ಬ್ರ| ರಂಗ‌ನಾಥ ಶರ್ಮ, ಕೆ. ನಾಗರಾಜ್‌ ಹಾಗೂ ಮತ್ತೂರಿನ ಪಂಡಿತರು ಮತ್ತಿತರರು ಇದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಗಳನ್ನು ವೇದಪಠಣದೊಂದಿಗೆ ಪೂರ್ಣಕುಂಭ ಸ್ವಾಗತದ ಮೂಲಕ ದೇವಾಲಯಕ್ಕೆ ಕರೆ ತರಲಾಯಿತು. ಗಣಪತಿ, ಶಾರದೆ, ಶಂಕರಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ತೀರ್ಥಪ್ರಸಾದ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next