Advertisement

ನಗರಸಭೆ ಅಧಿಕಾರಿಗಳಿಂದ ಅಕ್ರಮ ಕಟ್ಟಡ ನೆಲಸಮ

04:59 PM Dec 04, 2019 | Team Udayavani |

ಭದ್ರಾವತಿ: ನಗರಸಭೆಯ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ ನಿಲ್ದಾಣದ ಪಕ್ಕದಲ್ಲಿನ ಕುವೆಂಪು ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಕಚೇರಿ ಕಟ್ಟಡವನ್ನು ಸೋಮವಾರ ರಾತ್ರಿ ನೆಲಸಮಗೊಳಿಸಿದರು.

Advertisement

ಬೆಳಗ್ಗೆ ಕಟ್ಟಡ ಧ್ವಂಸಗೊಂಡಿರುವುದನ್ನು ವಿರೋಧಿಸಿ ಕುವೆಂಪು ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದವರು ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಪ್ರತಿಭಟನಾಕಾರರು, ಈ ಜಾಗಕ್ಕೆ ನಗರಸಭೆಯಿಂದ ಎನ್‌ಒಸಿ ಪಡೆದು ಅನಂತರ ಸಂಘದ ಕಟ್ಟಡದ ಅಭಿವೃದ್ಧಿಗಾಗಿ ಶಾಸಕರ ಅನುಧಾನದಲ್ಲಿ 10 ಲಕ್ಷ ರೂ. ನೆರವಿನಿಂದ ನಿರ್ಮಿತಿ ಕೇಂದ್ರವನ್ನು ಮಾಡಿಕೊಟ್ಟಿದೆ. ಆದರೂ ಇದಾವುದನ್ನೂ ಸರಿಯಾಗಿ ಪರಿಗಣಿಸದೆ ನಗರಸಭೆಯ ಪೌರಾಯುಕ್ತರು ಮತ್ತು ಅಧಿಕಾರಿಗಳು ರಾತೋರಾತ್ರಿ ಕಟ್ಟಡ ನೆಲಸಮ ಮಾಡಿರುವುದು ಖಂಡನೀಯ. ಕೂಡಲೇ ಆ ಜಾಗದಲ್ಲಿ ನಗರಸಭೆಯವರು ನಮಗೆ ವ್ಯವಸ್ಥಿತವಾಗಿ ಕಚೇರಿ ನಿರ್ಮಾಣ ಮಾಡಿಕೊಡಬೇಕು ಹಾಗೂ ಸಂಘಕ್ಕೆ ಈಗಾಗಿರುವ ನಷ್ಟ ತುಂಬಿಕೊಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಾಜು, ಉಪಾಧ್ಯಕ್ಷ ಶಿವಕುಮಾರ್‌, ಖಜಾಂಚಿ ಗಣೇಶ್‌, ಲೋಕೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next