Advertisement

ಬಸವ ಧರ್ಮದ ಮಹತ್ವ ಅಪಾರ

05:15 PM Jun 07, 2019 | Naveen |

ಭದ್ರಾವತಿ: ಬಸವಣ್ಣನವರ ತತ್ವಗಳು ಕರ್ನಾಟಕ ಬಿಟ್ಟು ನೆರೆ ರಾಜ್ಯಗಳಿಗೆ ಪ್ರಚಾರವಾಗಿದ್ದರೆ ಅಂದು ಡಾ| ಅಂಬೇಡ್ಕರ್‌ ಬಸವ ತತ್ವವನ್ನು ಅಪ್ಪಿಕೊಳ್ಳುತ್ತದ್ದರೇ ಹೊರತು ಬೌದ್ಧ ದರ್ಮಕ್ಕೆ ಮತಾಂತರಗೊಳ್ಳುತ್ತಿರಲಿಲ್ಲ ಎಂದು ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ಹೇಳಿದರು.

Advertisement

ಬುಧವಾರ ಸಂಜೆ ಸಿದ್ಧಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ತಾಲೂಕು ಶಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವಗುರು ಬಸವೇಶ್ವರ ಜಯಂತ್ಯೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಜನಿಸಿದ ಬೌದ್ಧ ಧರ್ಮ ಇಂದು ವಿಶ್ವದ ವಿವಿಧ ದೇಶಗಳಲ್ಲಿ ಹರಡಿಕೊಂಡಿದೆ. ಆದರೆ ಕರ್ನಾಟಕದಲ್ಲಿ ಜನ್ಮ ತಾಳಿದ ಬಸವ ಧರ್ಮ ರಾಜ್ಯವನ್ನು ಬಿಟ್ಟು ಬೇರೆಡೆ ಪ್ರಚಾರವಾಗಲಿಲ್ಲ. ಅದಕ್ಕೆ ಕಾರಣ ನೀತಿ ಮೇಲಿನ ವ್ಯಾಮೋಹಕ್ಕಿಂತ ಜಾತಿ ಮೇಲಿದ್ದ ವ್ಯಾಮೋಹ ಎಂದರು.

ಬಸವಣ್ಣ ವಚನಗಳನ್ನು ಪ್ರಚಾರಕ್ಕಾಗಿ ಬರೆಯಲಿಲ್ಲ. ಸಮಾಜದ ಅಂಕುಡೊಂಕುಗಳನ್ನು ಕಂಡು ವಾಸ್ತವತೆಯ ಆಧಾರದ ಮೇಲೆ ಮನಸ್ಸಿನ ಅಂತರಾಳದಿಂದ ಬಂದ ಭಾವನೆಯನ್ನು ವಚನ ರೂಪಕ್ಕೆ ಇಳಿಸುವ ಮೂಲಕ ಹಾಗೂ ಸಮಾಜದಲ್ಲಿ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಮಾರ್ಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಳವರ್ಗದ ಜನರಲ್ಲಿ ಆತ್ಮ ವಿಶ್ವಾಸದ ಚೈತನ್ಯವನ್ನು ತುಂಬಿದರು. ಈ ಮೂಲಕ ಅವರಲ್ಲಿದ್ದ ಪ್ರತಿಭೆಗೆ ಅವಕಾಶ ನೀಡಿದ್ದರಿಂದ ಎಲ ್ಲವರ್ಗದಲ್ಲಿ ಶರಣರು ವಚನ ಸಾಹಿತ್ಯ ರಚಿಸುವಂತಾಯಿತು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಕೆ. ಸಂಗಮೇಶ್ವರ್‌ ಮಾತನಾಡಿ, ಜಾತಿ ಅಸಮಾನತೆ, ಲಿಂಗ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದ ಬಸವಣ್ಣನವರ ಆದರ್ಶಪೂರ್ವಕವಾದ ವಚನ ಸಾಹಿತ್ಯವನ್ನು ಪೋಷಕರು ಮಕ್ಕಳಲ್ಲಿ ಬಿತ್ತುವ ಮೂಲಕ ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದರು.

Advertisement

ಉಪನ್ಯಾಸ ನೀಡಿದ ಬೆಂಗಳೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕಿ ಡಾ| ಆಶಾದೇವಿ, ಬಸವಣ್ಣನವರ ನಡೆ-ನುಡಿ ಒಂದಾಗಿ ಅನುಭವ-ಅಭಿವ್ಯಕ್ತಿಯಾಗಿ ಹೊರಹೊಮ್ಮಿದ ಕಾರಣ ಅವರಿಂದ ಮಾನವ ಕುಲದ ಏಳಿಗೆಗಾಗಿ ಅತ್ಯತ್ತಮ ವಚನ ಸಾಹಿತ್ಯ ರಚನೆಯಾಯಿತು. ಬಸವಣ್ಣ ಜಾತಿಯ ಶ್ರೇಷ್ಠತೆಯ ಅಹಂಕಾರಕ್ಕೆ ಎಂದಿಗೂ ಬಲಿಯಾಗದಿದ್ದರಿಂದ ತನನ್ನು ತಾನು ಎಂದಿಗೂ ಹಿರಿಯನೆಂದು ಕರೆದುಕೊಳ್ಳದಿದ್ದರಿಂದ ಬಸವಣ್ಣ ಇಂದಿಗೂ ವಿಶ್ವಗುರು ಎಂಬ ಪದಕ್ಕೆ ಅನ್ವರ್ಥವಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಎಂ. ವಿರೂಪಾಕ್ಷಪ್ಪ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪರಿಷತ್‌ ಜಿಲ್ಲಾಧ್ಯಕ್ಷ ಎಚ್.ಎನ್‌. ಮಹಾರುದ್ರ , ಬಸವೇಶ್ವರ ಧರ್ಮಸಂಸ್ಥೆ ಮಾಲೀಕರು ಭಾಗವಹಿಸಿದ್ದರು.

ಕದಳಿ ವೇದಿಕೆ ಸದಸ್ಯರು ಪ್ರಾರ್ಥಿಸಿದರು. ನಂದಿನಿ ಮತ್ತು ಮಲ್ಲಿಕಾಂಬ ಪ್ರಾರ್ಥಿಸಿದರು. ಬಸನಗೌಡ ಮಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕತ್ತಲಗೆರೆ ತಿಮ್ಮಪ್ಪ ವಂದಿಸಿದರು. ಅಣ್ಣಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next