Advertisement
ಆ.10ರಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಜಲಾಶಯದಲ್ಲಿ ಪ್ರಸ್ತುತ 166 ಅಡಿ (ಗರಿಷ್ಠ 186 ಅಡಿ) ನೀರಿದ್ದು ನೀರು ಬಿಡುತ್ತಾರೆಯೇ ಇಲ್ಲವೇ ಎಂಬುದರ ಬಗ್ಗೆ ಗೊಂದಲ ಮೂಡಿತ್ತು. ಅಂತಿಮವಾಗಿ ಇಲಾಖೆ ನೀರು ಬಿಡುವ ದಿನಾಂಕ ಘೋಷಿಸಿದೆ.ಆ.10ರಿಂದ ನೂರು ದಿನಗಳ ಕಾಲ ಎಡದಂಡೆ ಕಾಲುವೆಗೆ 380 ಕ್ಯೂಸೆಕ್ಸ್, ಬಲದಂಡೆ ಕಾಲುವೆಗೆ 2650 ಕ್ಯೂಸೆಕ್ಸ್ ಹರಿಸಲಾಗುವುದು. ನೀರಿನ ಲಭ್ಯತೆ, ಒಳಹರಿವಿನ ಆಧಾರದ ಮೇಲೆ ನೀರು ಹರಿಸಲಾಗುತ್ತಿದೆ. ನೀರಿನ ಕೊರತೆಯಿಂದ ಬೆಳೆ ನಷ್ಟವಾದಲ್ಲಿ ಅದಕ್ಕೆ ಇಲಾಖೆ ಹೊಣೆಯಲ್ಲ. ಭದ್ರಾ ಜಲಾಶಯ ವ್ಯಾಪ್ತಿಯ 1.07 ಲಕ್ಷ ಹೆಕ್ಟೇರ್ನಲ್ಲಿ ಪ್ರಕಟಿತ ಮುಂಗಾರು ಬೆಳೆ ಬೆಳೆಯಲು ಅವಕಾಶವಿದ್ದು ನಿಗದಿತ ವಿಸ್ತೀರ್ಣದಲ್ಲಿ ಬೆಳೆ ಬೆಳೆದು ರೈತರು ಸಹಕರಿಸಬೇಕು.