ಭದ್ರಾ ಜಲಾಶಯ ನಾಲ್ಕು ವರ್ಷಗಳ ನಂತರ ಭರ್ತಿಯಾಗುವ ಹಂತ ತಲುಪಿದ್ದು, ಭರ್ತಿಗೆ ಒಂದೆರಡು ಅಡಿ ಮಾತ್ರ ಬಾಕಿಯಿದೆ. (ಗರಿಷ್ಠ; 186 ಅಡಿ, ಪ್ರಸ್ತುತ 183.3 ಅಡಿ). ಈ ಹಿನ್ನೆಲೆಯಲ್ಲಿ ಮಂಗಳವಾರ ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ 6,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ನದಿತೀರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮಧ್ಯೆ, ಕಳೆದ ಶುಕ್ರವಾರ ಸಿರುಗುಪ್ಪ ಬಳಿ ತುಂಗಭದ್ರಾ ನದಿಯಲ್ಲಿ ಮರಳು ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿಹೋಗಿದ್ದ ತಂದೆ, ಮಗ ಇಬ್ಬರಲ್ಲಿ ಮಗನ ಶವ ಪತ್ತೆಯಾಗಿದೆ. ಬಾಲಕ ಇಸಾಕ್‌ನ ಶವ ಚಿಕ್ಕಬಳ್ಳಾರಿ ಸಮೀಪ ಪತ್ತೆಯಾಗಿದೆ. ಈತನ ತಂದೆ ರಫಿಕ್ ಶವ ಇನ್ನೂ ಪತ್ತೆಯಾಗಿಲ್ಲ.
Advertisement
ಶಿವಮೊಗ್ಗ ಜಿಲ್ಲೆ ಭದ್ರಾ ಜಲಾಶಯ ನಾಲ್ಕು ವರ್ಷಗಳ ನಂತರ ಭರ್ತಿಯಾಗುವ ಹಂತ ತಲುಪಿದ್ದು, ಭರ್ತಿಗೆ ಒಂದೆರಡು ಅಡಿ ಮಾತ್ರ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ 4 ಕ್ರಸ್ಟ್‌ಗೇಟ್‌ಗಳ ಮೂಲಕ 6,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.