Advertisement

BGT 2025: ಶುಕ್ರವಾರದಿಂದ ಟೆಸ್ಟ್‌ ಸರಣಿ ಆರಂಭ: ಇಲ್ಲಿದೆ‌ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ

11:17 AM Nov 21, 2024 | Team Udayavani |

ಪರ್ತ್:‌ ಬಹುನಿರೀಕ್ಷಿತ ಬಾರ್ಡರ್-ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಶುಕ್ರವಾರ (ನ.22) ಬೆಳಗ್ಗೆ ಆರಂಭವಾಗಲಿದೆ. ಗುರುವಾರ ಎರಡೂ ತಂಡದ ನಾಯಕರು ಟ್ರೋಫಿ ಎದುರು ಪೋಸ್‌ ಕೊಟ್ಟಿದ್ದಾರೆ. ಎರಡು ಬಲಾಢ್ಯ ತಂಡಗಳ ಟೆಸ್ಟ್‌ ಸರಣಿಯನ್ನು ಕ್ರಿಕೆಟ್‌ ವಿಶ್ವ ಎದುರು ನೋಡುತ್ತಿದೆ.

Advertisement

2024-25ರ ಬಾರ್ಡರ್-ಗಾವಸ್ಕರ್‌ ಟ್ರೋಫಿ ಸರಣಿಯು ನವೆಂಬರ್‌ 22 2024ರಿಂದ 2025ರ ಜನವರಿ 7ರವರೆಗೆ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿದೆ. 1991-92ರ ಬಳಿಕ ಮೊದಲ ಬಾರಿಗೆ ನಾಲ್ಕು ಪಂದ್ಯಗಳ ಸರಣಿಯ ಬದಲು ಐದು ಪಂದ್ಯಗಳು ನಡೆಯಲಿದೆ.

ತವರಿನ ಟೆಸ್ಟ್‌ ಸರಣಿಯಲ್ಲಿ ಸೋಲು ಕಂಡಿರುವ ಭಾರತಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ತಲುಪಲು ಇದು ಅತ್ಯಂತ ಪ್ರಮುಖ ಸರಣಿ. ಫೈನಲ್‌ ನಲ್ಲಿ ಖಚಿತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, ಭಾರತ ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಸೋಲಿಸಬೇಕಾಗಿದೆ; 3-2 ಗೆಲುವು ಕೂಡ ಅವರ ಫೈನಲ್‌ ತಲುಪಲು ಸಹಾಯ ಮಾಡಬಹುದು.

ಆಸ್ಟ್ರೇಲಿಯಾದಲ್ಲಿ, ಭಾರತವು 52 ಟೆಸ್ಟ್‌ಗಳನ್ನು ಆಡಿದೆ, ಕೇವಲ ಒಂಬತ್ತು ಗೆದ್ದಿದ್ದು, 30 ರಲ್ಲಿ ಸೋತಿದೆ. ವಿಶೇಷವೆಂದರೆ ಆ ಒಂಬತ್ತು ಜಯಗಳಲ್ಲಿ ನಾಲ್ಕು ಅವರ ಕೊನೆಯ ಎರಡು ಪ್ರವಾಸಗಳಲ್ಲಿ ಬಂದಿವೆ.

ಬಾರ್ಡರ್-ಗಾವಸ್ಕರ್‌ ಸರಣಿ ವೇಳಾಪಟ್ಟಿ

Advertisement

1 ನೇ ಟೆಸ್ಟ್: ಆಪ್ಟಸ್ ಸ್ಟೇಡಿಯಂ, ಪರ್ತ್

ದಿನಾಂಕ: 22-26 ನವೆಂಬರ್

ಸಮಯ: 10:20 AM ಸ್ಥಳೀಯ / 7:50 AM IST

2ನೇ ಟೆಸ್ಟ್: ಅಡಿಲೇಡ್ ಓವಲ್ (ಹಗಲು-ರಾತ್ರಿ)

ದಿನಾಂಕಗಳು: ಡಿಸೆಂಬರ್ 6-10

ಸಮಯ: 2:30 PM ಸ್ಥಳೀಯ / 9:30 AM IST

3ನೇ ಟೆಸ್ಟ್: ಗಬ್ಬಾ, ಬ್ರಿಸ್ಬೇನ್

ದಿನಾಂಕಗಳು: ಡಿಸೆಂಬರ್ 14-18

ಸಮಯ: 10:20 AM ಸ್ಥಳೀಯ / 5:50 AM IST

4 ನೇ ಟೆಸ್ಟ್: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಬಾಕ್ಸಿಂಗ್ ಡೇ ಟೆಸ್ಟ್)

ದಿನಾಂಕ: 26-30 ಡಿಸೆಂಬರ್

ಸಮಯ: 10:30 AM ಸ್ಥಳೀಯ / 5:00 AM IST

5 ನೇ ಟೆಸ್ಟ್: ಸಿಡ್ನಿ ಕ್ರಿಕೆಟ್ ಮೈದಾನ

ದಿನಾಂಕ: 3-7 ಜನವರಿ

ಸಮಯ: 10:30 AM ಸ್ಥಳೀಯ / 5:00 AM IST

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ಸ್ಟಾರ್

Advertisement

Udayavani is now on Telegram. Click here to join our channel and stay updated with the latest news.

Next