Advertisement

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

03:48 PM Nov 22, 2024 | Team Udayavani |

ಪರ್ತ್:‌ ಟೀಂ ಇಂಡಿಯಾದ ಹಂಗಾಮಿ ನಾಯಕ, ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ದಾಳಿಗೆ ನಲುಗಿದ ಆಸ್ಟ್ರೇಲಿಯಾ ಬ್ಯಾಟರ್‌ ಗಳು ತವರಿನಲ್ಲಿ ಬ್ಯಾಟಿಂಗ್‌ ನಡೆಸಲು ಪರದಾಡಿದ್ದಾರೆ. ಭಾರತೀಯ ವೇಗಿಗಳ ಉರಿ ದಾಳಿಗೆ ಸಿಲುಕಿದ ಆಸೀಸ್‌ 67 ರನ್‌ ಗಳಿಗೆ ಏಳು ವಿಕೆಟ್‌ ಕಳೆದುಕೊಂಡಿದೆ.

Advertisement

ಬಾರ್ಡರ್‌ ಗಾವಸ್ಕರ್‌ ಟ್ರೋಫಿಯ ಮೊದಲ ಪಂದ್ಯವಾದ ಪರ್ತ್‌ ಟೆಸ್ಟ್‌ ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 150 ರನ್‌ ಗಳಿಗೆ ಆಲೌಟಾದರೆ, ಆಸೀಸ್‌ ಇನ್ನೂ 83 ರನ್‌ ಹಿನ್ನಡೆಯಲ್ಲಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯಶಸ್ವಿ ಜೈಸ್ವಾಲ್‌ ಮತ್ತು ದೇವದತ್ತ ಪಡಿಕ್ಕಲ್‌ ಶೂನ್ಯ ಸುತ್ತಿದರು. ಕೊಹ್ಲಿ ಕೂಡಾ ಐದು ರನ್‌ ಗೆ ಔಟಾದರು. ಉತ್ತಮ ಲಯದಲ್ಲಿದ್ದ ಕೆಎಲ್‌ ರಾಹುಲ್‌ 26 ರನ್‌ ಗಳಿಸಿದ್ದ ವೇಳೆ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.

ಬಳಿಕ ರಿಷಭ್‌ ಪಂತ್‌ ಮತ್ತು ಮೊದಲ ಪಂದ್ಯವಾಡುತ್ತಿರುವ ನಿತೀಶ್‌ ರೆಡ್ಡಿ ತಂಡವನ್ನು ತಕ್ಕಮಟ್ಟಿಗೆ ಆಧರಿಸಿದರು. ಪಂತ್‌ 37 ರನ್‌ ಗಳಿಸಿದರೆ, ನಿತೀಶ್‌ 41 ರನ್‌ ಮಾಡಿದರು. ಭಾರತ 150 ರನ್‌ ಗೆ ಆಲೌಟಾದರು. ಆಸೀಸ್‌ ಪರ ಜೋಸ್‌ ಹೇಜಲ್‌ ವುಡ್‌ ನಾಲ್ಕು ವಿಕೆಟ್‌ ಕಿತ್ತರೆ, ಸ್ಟಾರ್ಕ್‌, ಕಮಿನ್ಸ್‌ ಮತ್ತು ಮಿಚೆಲ್‌ ಮಾರ್ಶ್‌ ತಲಾ ಎರಡು ವಿಕೆಟ್‌ ಪಡೆದರು.

Advertisement

ಬ್ಯಾಟಿಂಗ್‌ ಆರಂಭಿಸಿದ ಆಸೀಸ್‌ ಗೆ ಆರಂಭದಲ್ಲಿಯೇ ಬುಮ್ರಾ ಆಘಾತ ನೀಡಿದರು. ಮೊದಲ ಪಂದ್ಯವಾಡುತ್ತಿರುವ ನಾಥನ್‌ ಮೆಕ್‌ ಸ್ವೀನಿ 10 ರನ್‌ ಗಳಿಸಿ ಮೊದಲಿಗರಾಗಿ ಆಟಾದರು. ಖವಾಜಾ 8 ರನ್‌ ಮಾಡಿದರೆ ಸ್ಮಿತ್‌ ಮೊದಲ ಎಸೆತಕ್ಕೆ ಔಟಾದರು. 52 ಎಸೆತ ಎದುರಿಸಿದ ಮಾರ್ನಸ್‌ ಲಬುಶೇನ್‌ ಕೇವಲ ಎರಡು ರನ್‌ ಮಾಡಿ ಸಿರಾಜ್‌ ಬಲೆಗೆ ಬಿದ್ದರು. ಸದ್ಯ ಅಲೆಕ್ಸ್‌ ಕ್ಯಾರಿ 19 ರನ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಆರು ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಭಾರತದ ಪರ ನಾಯಕ ಜಸ್ಪ್ರೀತ್‌ ಬುಮ್ರಾ ನಾಲ್ಕು ವಿಕೆಟ್‌ ಪಡೆದರೆ, ಸಿರಾಜ್‌ ಎರಡು ಮತ್ತು ಹರ್ಷಿತ್‌ ರಾಣಾ ಒಂದು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next