Advertisement

ಸಮಾಜಮುಖಿ  ಕಾರ್ಯದಿಂದ ಬದುಕು ಸಾರ್ಥಕ: ಬಣಕಾರ 

05:38 PM Jul 23, 2018 | Team Udayavani |

ಹಿರೇಕೆರೂರ: ಹುಟ್ಟು ಸಾವಿನ ಮಧ್ಯ ಸಾರ್ಥಕತೆಯ ಜೀವನ ಸಾಗಿಸಬೇಕು. ಅಂತಹ ಸಾರ್ಥಕ ಜೀವನ ಸಾಗಿಸಿದ ವಿಧಾನಸಭಾ ಮಾಜಿ ಅಧ್ಯಕ್ಷ ಬಿ.ಜಿ.ಬಣಕಾರ ಅವರ ಆದರ್ಶಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು. ಪಟ್ಟಣದ ತರಳಬಾಳು ಸಾಂಸ್ಕೃತಿಕ ಕೇಂದ್ರದಲ್ಲಿ ವಿಧಾನಸಭಾ ಮಾಜಿ ಅಧ್ಯಕ್ಷ ದಿ| ಬಿ.ಜಿ.ಬಣಕಾರ ಅವರ 92 ನೇ ಜನ್ಮದಿನ ಮತ್ತು ದಿ| ಲೀಲಾವತಿ ಬಿ. ಬಣಕಾರ ಅವರ ಪುಣ್ಯಸ್ಮರಣೆ ನಿಮಿತ್ತ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕಿನ 2017-18 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ 10 ವಿದ್ಯಾರ್ಥಿಗಳಿಗೆ ಹಾಗೂ ಶೇ. ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಯ ಮುಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

Advertisement

ದಿ| ಬಿ.ಜಿ.ಬಣಕಾರ ಸಂಸ್ಥೆ ಮೂಲಕ ತಾವು ಕಲಿತ ಶಾಲೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಪ್ರತಿ ವರ್ಷ ಗುರುತಿಸಿ ಸನ್ಮಾನ ಮಾಡುವ ರೂಢಿಯನ್ನು ಬೆಳಸಿಕೊಂಡು ಬಂದಿದ್ದರು. ಇಂದು ಅವರ ಜನ್ಮ ದಿನ ಸಾರ್ಥಕವಾಗಲಿ ಎಂಬ ಉದ್ದೇಶದಿಂದ ಈ ಮಹತ್ತ ಕಾರ್ಯ ಕೈಗೊಳ್ಳಲಾಗಿದೆ. ಸಾಧನೆಗೈದವರನ್ನು ಪ್ರೋತ್ಸಾಹಿಸುವ ಮೂಲಕ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿವ ಮೂಲಕ ಬಿ.ಜಿ.ಬಣಕಾರ ಅವರ ಆದರ್ಶಗಳನ್ನು ನೆನೆಯುತ್ತ ಅವರ ದಾರಿಯಲ್ಲಿ ಸಾಗಬೇಕು ಎಂದರು.

ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ಮಾತನಾಡಿ, ಮಾಜಿ ಸ್ಪೀಕರ್‌ ಬಿ.ಜಿ.ಬಣಕಾರ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಬೇಕು. ಆದರ್ಶ ರಾಜಕಾರಣಿ, ಸಾಹಿತಿ, ನ್ಯಾಯವಾದಿ, ಪ್ರಜ್ಞಾವಂತರಾಗಿ ಸಾಮಾಜಿಕ ಜೀವನದಲ್ಲಿ ಬಹುಮುಖ ವ್ಯಕ್ತಿತ್ವ ಹೊಂದಿದ ಅವರು ಸಹಕಾರಿ ರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಸಮಾಜವಾದಿ ತತ್ವವನ್ನು ರೂಢಿಸಿಕೊಂಡು ಆ ತತ್ವಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಯತ್ನಿಸಿದರು ಎಂದರು.

ಸಿ.ಡಿ.ತಂಬಾಕದ, ಹೊಳಬಸಮ್ಮ ಬಣಕಾರ, ಟಿಎಪಿಎಂಎಸ್‌ ಅಧ್ಯಕ್ಷ ಎಸ್‌. ಎಸ್‌.ಪಾಟೀಲ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ತಂಬಾಕದ, ಎಸ್‌.ಆರ್‌. ಅಂಗಡಿ, ಸಿದ್ದಣ್ಣ ಕೆಂಚಪ್ಪಳವರ, ಮಹೇಶ ಗುಬ್ಬಿ, ಮಲ್ಲಿಕಾರ್ಜುನ ಬುರಡೀಕಟ್ಟಿ, ಎಂ.ವಿ.ಹೊಂಬರಡಿ, ನಿಂಗಪ್ಪ ಚಳಗೇರಿ, ಡಾ| ಚಂದ್ರಕಾಂತ ಪಾಟೀಲ, ಮೃತ್ಯಂಜಯ ಬಣಕಾರ, ರೇಣುಕಾಪ್ರಸಾದ ಬಣಕಾರ, ವಿಜಯರೂಪಾ ತಂಬಾಕದ, ಅನ್ನಪೂರ್ಣ ಬಣಕಾರ, ಪುಷ್ಪಲತಾ ಬಣಕಾರ ಚನ್ನಬಸಪ್ಪ, ಬಣಕಾರ ಕುಟುಂಬದವರು ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next