ಭಾಲ್ಕಿ: ಕಣ್ಣು ದೇಹದ ಪ್ರಮುಖ ಅಂಗ. ಕಣ್ಣಿನ ದೃಷ್ಟಿ ಕ್ಷೀಣಿಸಿದರೆ ಜೀವನ ಕತ್ತಲಲ್ಲಿ ಕಳೆಯ ಬೇಕಾಗುತ್ತದೆ. ಕಾರಣ ಕಣ್ಣಿನ ದೃಷ್ಟಿ ಕ್ಷೀಣಿಸದಂತೆ ಎಚ್ಚರವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ಅಂಬಲಿ ಹೇಳಿದರು.
ಪಟ್ಟಣದ ಡಾ| ಜಾಧವ ಆಸ್ಪತ್ರೆ ಹತ್ತಿರ ಮತ್ತು ಪವನ ಆಪ್ಟಿಕಲ್ಸ್ ಮುಂಭಾಗದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್, ವ್ಹಿಜನ್ ಫೌಂಡೇ ಶನ್ ಆಫ್ ಇಂಡಿಯಾ ಹಾಗೂ ಉದಯಗಿರಿ ಲಾಯನ್ಸ್ ನೇತ್ರಾಲಯ ಉದಗಿರ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡ ಮೋತಿ ಬಿಂದು ಶಸ್ತ್ರಕ್ರಿಯೆ ಮತ್ತು ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಪೌಷ್ಟಿಕತೆಯಿಂದ ಬಾಲ್ಯದಲ್ಲೇ ಉಂಟಾ ಗುವ ದೃಷ್ಟಿದೋಷ ತಡೆಗೆ ಪರಿಹಾರ ಕ್ರಮ ಕಂಡುಕೊಳ್ಳಬೇಕು. ಕಣ್ಣಿನಲ್ಲಿ ನೋವು ಕಾಣಿಸಿ ಕೊಂಡರೆ ಚಿಕಿತ್ಸೆಗಾಗಿ ನಿರ್ಲಕ್ಷ್ಯ ಮಾಡುವುದು ಬೇಡ. ಇಂದಿನ ಒತ್ತಡದ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗುವ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರ ಬಡಜನರ ಪಾಲಿಗೆ ವರದಾನವಾಗಿವೆ ಎಂದು ಹೇಳಿ, ರೋಟರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ| ಅಮೀತ ಅಷ್ಟೂರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಕ್ಲಬ್ ಶೈಕ್ಷಣಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜೋಪಯೋಗಿ ಕಾರ್ಯಕ್ಕೆ ಸದಾ ಸಿದ್ಧವಿದೆ. ಉದಗೀರ ನೇತ್ರ ತಜ್ಞೆ ಡಾ| ಅಪೂರ್ವ ತೋಷ್ಣಿವಾಲ್ ಕಣ್ಣಿನ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ 151 ಜನರ ಕಣ್ಣಿನ ತಪಾಸಣೆ ನಡೆಸಿ, 45 ರೋಗಿಗಳನ್ನು ಶಸ್ತ್ರಕ್ರಿಯೆಗೆ ಆಯ್ಕೆ ಮಾಡಲಾಯಿತು. ರೋಟರಿ ತಾಲೂಕು ಅಧ್ಯಕ್ಷ ನ್ಯಾಯವಾದಿ ಸಂಜಯ ನಾಯಕ್, ಡಾ| ವಸಂತ ಪವಾರ, ಡಾ| ಯುವರಾಜ ಜಾಧವ, ಡಾ| ನಿತೀನ ಪಾಟೀಲ, ಡಾ| ಅನೀಲ ಸುಕಾಳೆ, ಡಾ| ಪ್ರಭು ಕೋಟೆ, ವೈಜಿನಾಥ ಕೋಟೆ, ಪವನ ಕೋಟೆ ಉಪಸ್ಥಿತರಿದ್ದರು. ನ್ಯಾಯವಾದಿ ಉಮಾಕಾಂತ ವಾರದ ಸ್ವಾಗತಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು. ನ್ಯಾಯವಾದಿ ಶಾಂತನು ಕುಲಕರ್ಣಿ ವಂದಿಸಿದರು.