Advertisement
ಹೌದು! ಮಳೆಗಾಲದಲ್ಲಿ ಆಹಾರಕ್ಕಾಗಿ ಕರಡಿಗಳು ಹೆಚ್ಚಾಗಿ ಗ್ರಾಮದ ಹೊಲ-ಗದ್ದೆಗಳಿಗೆ ಪ್ರವೇಶ ಮಾಡುವ ಸಾಧ್ಯತೆ ಇರುವುದರಿಂದ ಅರಣ್ಯದಂಚಿನ ಗ್ರಾಮಗಳ ಗ್ರಾಮಸ್ಥರು, ಕರಡಿಗಳ ಚಲನವಲನಗಳ ಬಗ್ಗೆ ಎಚ್ಚರವಹಿಸಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಕೂಡ ವನ್ಯ ಜೀವಿಗಳ ಕುರಿತು ಜಾಗೃತಿ ಮೂಡಿಸಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.
ಕಲ್ಲು ಬಂಡೆಗಳಿಂದ ಕೂಡಿದ ಕುರುಚಲು ಕಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಕರಡಿಗಳನ್ನು ಭಾರತೀಯ ವನ್ನಜೀವಿ ಕಾಯ್ದೆ, 1972ರ ಅಡಿಯಲ್ಲಿ ಶೆಡ್ಯೂಲ್-1 ಎಂದು ವರ್ಗಿಕರಿಸಿ, ಸುರಕ್ಷಿತ ಸ್ಥಾನಮಾನ ನೀಡಲಾಗಿದೆ. ಇವು ಹಗಲೆಲ್ಲಾ ಬಂಡೆಗಳು ಗುಹೆಯೊಳಗೆ, ಪೊದೆಯೊಳಗೆ ನಿದ್ರಿಸಿ, ಸಂಜೆ ವೇಳೆ ಹೊರ ಬರುತ್ತವೆ ರಾತ್ರಿಯಲ್ಲಿ ಆಹಾರ ಹುಟಕಾಟ ನಡೆಸುತ್ತವೆ. ಇರುವೆ. ಸಗಣಿ ಹುಳು, ಕಾಡು ಹಣ್ಣು ಇತರೆ ಪದಾರ್ಥ ಸೇವಿಸಿ, ಮತ್ತೆ ಮರಳಿ ಗುಹೆ-ಪೊದೆಗಳನ್ನು ಸೇರುವುತ್ತವೆ. ಅದರಲ್ಲಿಯೂ ಹೆಚ್ಚಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಇರುವೆ, ಗೆದ್ದಲು ಕಾಣ ಸಿಗುವುದರಿಂದ ಹೊಲ-ಗದ್ದೆಗಳಿಗೆ ಕಡೆಗೆ ದಾವಿಸಿ ಬರುತ್ತವೆ. ಇದೇ ವೇಳೆ ಹೊಲಗಳಲ್ಲಿ ರೈತರು ಬೆಳೆದ ಶೇಂಗಾ, ಮೆಕ್ಕೆಜೋಳ, ಪಪ್ಪಾಯಿ, ಹಲಸು, ಸಪೋಟಾ ಇತರೆ ಸಿಹಿ ಹಣ್ಣುಗಳು ಕಣ್ಣಿಗೆ ಬಿದ್ದರೆ, ಅವು ತಿನ್ನದೇ ಮರಳುವುದಿಲ್ಲ. ಇತಂಹ ಸಮಯದಲ್ಲಿ ಹೆಚ್ಚಾಗಿ ಪ್ರಾಣಿ-ಮಾನವ ಸಂಘರ್ಷಗಳು ನಡೆದಿರುವ ಬಗ್ಗೆ ವರದಿಯಾಗಿವೆ.
Related Articles
ಕೂಡ್ಲಿಗಿ ತಾಲ್ಲೂಕಿನ ಕಡೆಕೊಳ್ಳ, ನೆಲಬೊಮ್ಮನಹಳ್ಳಿ, ಮಾಕನಡಕು, ಸಿದ್ದಾಪುರ, ಖಾನ ಹೊಸಳ್ಳಿ, ಚಿಕ್ಕ ಜೋಗಿಹಳ್ಳಿ ಹಗರಿಬೊಮ್ಮಹನಹಳ್ಳಿ ತಾಲ್ಲೂಕಿನ ಅನೇಕಲ್ಲು ತಾಂಡ, ಚಿಲಕನಹಟ್ಟಿ ಮಧ್ಯ ಪ್ರದೇಶ.ಹೊಸಪೇಟೆ ತಾಲ್ಲೂಕಿನ ಗಾದಿಗನೂರು, ಕೊಟಗಿನಾಳ್, ಕಾಕುಬಾಳು, ಜೋಗ, ಗುಂಡ್ಲವದ್ದಿಗೇರಿ ಹಾಗೂ ಕಂಪ್ಲಿ ತಾಲ್ಲೂಕಿನ ಮೆಟ್ರಿ, ದೇವಲಾಪುರ, ದರೋಜಿ, ಚಿನ್ನಾಪುರ, ಕಣವಿ ತಿಮ್ಮಲಾಪುರ, ಬುಕ್ಕಸಾಗರ, ರಾಮಸಾಗರ ಗ್ರಾಮಗಳಲ್ಲಿ ಕರಡಿ ದಾಳಿ ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
ಕಳೆದ 2016-17 ನೇ ಸಾಲಿನಲ್ಲಿ ಕೂಡ್ಲಿಗಿಯಲ್ಲಿ ನೆಲಬೊಮ್ಮನಹಳ್ಳಿ ಗ್ರಾಮದ ಪೂಜಾರಿ ನಿಂಗಪ್ಪ ಎನ್ನುವವರ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿತ್ತು. ಅವರ ಮುಖವನ್ನು ಕಿತ್ತು ಕಣ್ಣುಗುಡ್ಡೆಯೇ ಹೊರ ಬಂದಿದ್ದನ್ನು ಸ್ಮರಿಸಬಹುದು.
ಪರಿಹಾರಕ್ಕೆ ಆಗ್ರಹಕರಡಿ ದಾಳಿಗೆ ಒಳಗಾಗಿ ಮೃತಪಟ್ಟವರಿಗೆ ನೀಡಿದ ಪರಿಹಾರ ಹೊರತು ಪಡಿಸಿ, ಗಾಯಗೊಂಡ ಬೆರಳಣಿಕೆ ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಇತಂಹ ಪ್ರಕರಣಗಳಲ್ಲಿ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಕಡಿವಾಣ
ಕಾಡಂಚಿನ ಗ್ರಾಮಗಳಿಗೆ ನಸುಕಿನಲ್ಲಿ ಹಾಗೂ ಸಂಜೆ ವೇಳೆಯಲ್ಲಿ ಕರಡಿಗಳು ಪೊದೆಯಿಂದ ಹೊರ ಬಂದು ಹೊಲ-ಗದ್ದೆಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಮಾಡಬೇಕಿದೆ. ರೈತರು ನಸುಕಿನಲ್ಲಿ ಮತ್ತು ಇಳಿ ಹೊತ್ತಿನಲ್ಲಿ ಹೊಲಗಳತ್ತ ತೆರಳುವುದಿಲ್ಲ. ಇದರಿಂದ ಕರಡಿ ದಾಳಿ ಪ್ರಕರಣಗಳು ಕಡಿಮೆಯಾಗಬಹುದು ಎಂಬುದು ವನ್ಯಜೀವಿ ಸಂಶೋಧಕ ಡಾ,ಸಮದ್ ಕೊಟ್ಟೂರು ಅವರ ಅಭಿಪ್ರಾಯ. ವರದಿ:ಪಿ.ಸತ್ಯನಾರಾಯಣ