Advertisement

ಮೂರು ಪಕ್ಷಗಳ ನಡುವೆ ಹಣಾಹಣಿ

06:35 AM Mar 18, 2019 | |

ಕ್ಷೇತ್ರದ ವಸ್ತುಸ್ಥಿತಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯವನ್ನು ಒಳಗೊಂಡ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಶೇ 90ರಷ್ಟು ಮಂದಿ ವಲಸಿಗರು ನೆಲೆಸಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ನಡೆದ 2 ವಿಧಾನಸಭಾ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಿದ್ದರು.

Advertisement

ಆದರೆ, 2018ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕೈ ಹಿಡಿದು ಅಚ್ಚರಿ ಫ‌ಲಿತಾಂಶಕ್ಕೆ ಕಾರಣರಾಗಿದ್ದರು. ಲೋಕಸಭಾ ಚುನಾವಣೆ ವಿಚಾರಕ್ಕೆ ಬಂದಾಗ ಈ ಪರಿಸ್ಥಿತಿಯಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯತ್ತ ಒಲವು ತೋರಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.59.7ರಷ್ಟು ಮತದಾತರು ಬಿಜೆಪಿ ಬೆಂಬಲಿಸಿದ್ದರು.

ಒಟ್ಟಾರೆ 1,99,476 ಮತಗಳು ಇಲ್ಲಿ ಚಲಾವಣೆಯಾಗಿದು,ªಆ ಪೈಕಿ 1,19,021 ಮತಗಳು ಕಮಲ ಪಕ್ಷದ ಅಭ್ಯರ್ಥಿಯಾಗಿದ್ದ ಕೇಂದ್ರ ಸಚಿವ ಸದಾನಂದಗೌಡ ಅವರ ಪಾಲಾಗಿದ್ದವು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದ ಸಿ.ನಾರಾಯಣಸ್ವಾಮಿ 54,782 ಮತ್ತು ಜೆಡಿಎಸ್‌ ನಿಂದ ಅಖಾಡಕ್ಕಿಳಿದಿದ್ದ ಅಬ್ದುಲ್‌ ಅಜೀಂ 20,727 ಮತಗಳನ್ನು ಪಡೆದಿದ್ದರು.

ಈ ಬಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಣಕ್ಕಿಳಿಯುವ ಸಾಧ್ಯತೆ ಇರುವುದರಿಂದ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮೇಲೆ ಜೆಡಿಎಸ್‌ ಹಿಡಿತ ಸಾಧಿಸಿದ್ದು,ಆದರೆ ಪಾಲಿಕೆ ವಿಚಾರದಲ್ಲಿ ಬಿಜೆಪಿ ಪ್ರಾಬಲ್ಯ ತೋರಿದೆ. ಎಂಟು ವಾರ್ಡ್‌ ಗಳ ಪೈಕಿ 5 ವಾರ್ಡ್‌ಗಳಲ್ಲಿ ಬಿಜೆಪಿ ವಿಜಯಿಯಾಗಿದೆ. ಹಾಗೆಯೇ ಕಾಂಗ್ರೆಸ್‌ 2 ಮತ್ತು ಜೆಡಿಎಸ್‌ 1ರಲ್ಲಿ ಗೆಲುವು ಸಾಧಿಸಿದೆ.

ಪ್ರಮುಖ ಕೊಡುಗೆಗಳು
-ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ ಫಾರಂಗೆ ಹೊರ ಪ್ರದೇಶಗಳ ಸಂಪರ್ಕ ಕಲ್ಪಿಸಲು ಫ‌ುಟ್‌ ಓವರ್‌ಬ್ರಿಜ್‌ ನಿರ್ಮಾಣ 
-ಸ್ತ್ರೀ ಶಕ್ತಿ ಭವನ ನಿರ್ಮಾಣ

Advertisement

ನಿರೀಕ್ಷೆ
-ಪೀಣ್ಯಾ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಆರ್ಥಿಕ ಅನುದಾನ         
-ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆ 

-ವಾರ್ಡ್‌ಗಳು -8
-5 ಬಿಜೆಪಿ 
-2 ಕಾಂಗ್ರೆಸ್‌
-1 ಜೆಡಿಎಸ್‌

-6,38,190 ಜನಸಂಖ್ಯೆ
-4,38,919 ಮತದಾರರ ಸಂಖ್ಯೆ
-2,36,956 ಪುರುಷರು
-2,29,820 ಮಹಿಳೆಯರು

2014ರ ಲೋಕಸಭಾ ಚುನಾವಣೆಯಲ್ಲಿ 
-1,99,476 (52.26%) ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು
-1,19,021 ಮತಗಳು(59.7%) ಬಿಜೆಪಿ ಪಡೆದ ಮತಗಳು
-54,782 ಮತಗಳು (27.5%) ಕಾಂಗ್ರೆಸ್‌ ಪಡೆದ ಮತಗಳು
-20,727 ಮತಗಳು (10.4%) ಜೆಡಿಎಸ್‌ ಪಡೆದ ಮತಗಳು

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಎಸ್‌. ಮುನಿರಾಜು, ಬಿಜೆಪಿ ಶಾಸಕ

ಪಾಲಿಕೆಯಲ್ಲಿ 
-ಬಿಜೆಪಿ -5
-ಜೆಡಿಎಸ್‌-0

Advertisement

Udayavani is now on Telegram. Click here to join our channel and stay updated with the latest news.

Next