Advertisement

ಬೆಟ್ಟಂಪಾಡಿ ಸಿಡಿಲು: 3 ಮನೆಗಳಿಗೆ ಹಾನಿ

12:37 PM May 29, 2018 | Team Udayavani |

ಬೆಟ್ಟಂಪಾಡಿ: ಇಲ್ಲಿನ ಗೋಳಿಪದವಿನಲ್ಲಿ ರವಿವಾರ ಸಂಜೆ ಸಿಡಿಲು ಬಡಿದು ಮೂರು ಮನೆಗಳಿಗೆ ಹಾನಿಯಾಗಿದೆ.
ಗೋಳಿಪದವಿನಲ್ಲಿ ಗಾಳಿಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಹಾನಿಗೊಂಡಿದೆ. ಹತ್ತಿರದಲ್ಲೇ ಇರುವ  ಸುಂದರ ಅವರ ಮನೆಯ ಗೋಡೆ ಮತ್ತು ನೆಲ ಬಿರುಕುಬಿಟ್ಟಿದ್ದು ವಿದ್ಯುತ್‌ ವಯರಿಂಗ್‌ ಮತ್ತು ಮೀಟರ್‌ ಸುಟ್ಟು ಹೋಗಿದೆ.

Advertisement

ಆ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ.

ಸಮೀಪದ ಸುಂದರ ಎಂ. ಅವರ ಮನೆಯ ಮಾಡು, ವಿದ್ಯುತ್‌ ಮೀಟರ್‌ ಮತ್ತು ವಯರಿಂಗ್‌ ಸುಟ್ಟು ಹೋಗಿದೆ.
ದಿ| ಗಣೇಶ ಅವರ ಪತ್ನಿ ಕುಸುಮಾ ಅವರ ಮನೆಗೂ ಸಿಡಿಲು ಬಡಿದಿದ್ದು ಮನೆಯ ಮಾಡು ಮತ್ತು ವಿದ್ಯುತ್‌ ಸಂಪರ್ಕಕ್ಕೆ ಹಾನಿಯಾಗಿದೆ. ಅಲ್ಲೇ ಹತ್ತಿರದ ವಿದ್ಯುತ್‌ ಕಂಬಗಳಿಗೂ ಹಾನಿಯಾಗಿದ್ದು ಬೀಳುವ ಸ್ಥಿತಿಯಲ್ಲಿವೆ. ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರಾದ ರಕ್ಷಣ್‌ ರೈ, ಪದ್ಮಾವತಿ ಡಿ., ಗ್ರಾಮ ಕರಣಿಕರು, ಗ್ರಾಮ ಸಹಾಯಕ ವಿಜಯ ಪಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next