Advertisement

ಬೆಟ್ಟಬೆಣಜೇನಹಳ್ಳಿ ಶಾಲೆ ಶಿಥಿಲ

01:22 PM Dec 07, 2019 | Team Udayavani |

ಕೋಲಾರ: ತಾಲೂಕಿನ ವಕ್ಕಲೇರಿಹೋಬಳಿ ಬೆಟ್ಟಬೆಣಜೇನಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಶಿಥಿಲವಾಗಿದ್ದು, ನೂತನ ಶಾಲಾ ಕಟ್ಟಡ ನಿರ್ಮಿಸಿಕೊಡುವುದಾಗಿ ಜಿಪಂ ಸದಸ್ಯ ಸಿ.ಎನ್‌.ಅರುಣ್‌ ಪ್ರಸಾದ್‌ ಭರವಸೆ ನೀಡಿದರು.

Advertisement

ಶಾಲೆಗೆ ಭೇಟಿ ನೀಡಿದ ಸಿ.ಎನ್‌. ಅರುಣ್‌ ಪ್ರಸಾದ್‌, ಶಿಥಿಲವಾದ ಶಾಲಾ ಕಟ್ಟಡ, ಕಾಂಪೌಂಡ್‌, ಶೌಚಾಲಯ, ಗೋಡೆ ಬಿರುಕು, ಉದುರಿದ್ದ ಕಾಂಕ್ರೀಟ್‌ ಛಾವಣಿ, ಅಡುಗೆ ಕೋಣೆ ಪರಿಶೀಲಿಸಿ ಮಾತನಾಡಿ, ಸರ್ಕಾರಿ ಶಾಲೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು, ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಬೇಕು. ಇದಕ್ಕೆ ಬೇಕಾದ ಮೂಲ ಸೌಕರ್ಯವನ್ನು ಜಿಪಂನಿಂದ ನೀಡುವುದಾಗಿ ತಿಳಿಸಿದ ಅವರು, ಸಂಬಂಧ ಪಟ್ಟ ಅಧಿ ಕಾರಿಗಳೊಂದಿಗೆ ಚರ್ಚಿಸಿ ನೂತನ ಶಾಲಾ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದರು.

ಸರ್ಕಾರಿ ಉರ್ದು ಶಾಲೆಯಲ್ಲಿ 15 ಮಕ್ಕಳು, ಕನ್ನಡ ಶಾಲೆಯಲ್ಲಿ 12 ಮಕ್ಕಳು ಓದುತ್ತಿದ್ದು, ಶಾಲೆಗೆ ಮಕ್ಕಳನ್ನು ಕಳುಹಿ  ಸಲು ಪೋಷಕರು ಆತಂಕ ಪಡಬಾರದು. ನೂತನ ಕಟ್ಟಡ ನಿರ್ಮಿಸುವವರೆಗೂಬೇರೆ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸುವಂತೆ ಶಿಕ್ಷಕರಿಗೆ ಸೂಚಿಸುವುದಾಗಿ ತಿಳಿಸಿದರು. ಬೆಟ್ಟಬೆಣಜೇನಹಳ್ಳಿ ಗ್ರಾಮದ ಮುಖಂಡರಾದ ಜಹೀರ್‌, ಖದೀರ್‌, ಹನುಮಂತಪ್ಪ, ಗೋಪಾಲಣ್ಣ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಯುಬ್‌ವುನೀಸಾ, ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸ್ವರ್ಣಲತಾ, ಸಹಶಿಕ್ಷಕರಾದ ನಂಜುಂಡಪ್ಪ, ನಾರಾಯಣಸ್ವಾಮಿ, ನಾಜಿಮಾ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next