Advertisement

ದಶಕದ ಬಳಿಕ ವೀಳ್ಯದೆಲೆಗೆ ಚಿನ್ನದ ಬೆಲೆ

03:20 PM Jan 30, 2023 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ಬೆಲೆ ಗಗನಕ್ಕೆ ಜಿಗುತ್ತಲೇ ಇದ್ದು, ಒಂದು ಕಟ್ಟು ವೀಳ್ಯದೆಲೆ ಬೆಲೆ ಈಗ ಬರೋಬರಿ 200ರಿಂದ 250 ರೂ.ಗಡಿ ದಾಟಿದೆ. ದಶಕದ ಬಳಿಕ ಬೆಲೆ ಏರಿಕೆ ದಾಖಲೆ ಬರೆದಿದೆ.

Advertisement

ಹೌದು. ವೀಳ್ಯದೆಲೆ ಬೆಲೆ ಮಾರುಕಟ್ಟೆಯಲ್ಲಿ ಕಳೆದೊಂದು ತಿಂಗಳಿನಿಂದ ಏರಿಕೆ ಆಗುತ್ತಿದೆ. ಇಂದು ಒಂದು ಕಟ್ಟು ವೀಳ್ಯದೆಲೆ ಬೆಲೆ ಜಿಲ್ಲಾದ್ಯಂತ ಎರಡು

ನೂರು ರೂಪಾಯಿಯ ಗಡಿ ದಾಟಿದ್ದು, ಗ್ರಾಹಕರು ಕಂಗಾಲು ಆಗುವಂತೆ ಮಾಡಿದೆ. ಜಿಲ್ಲೆಯಲ್ಲಿ ವೀಳ್ಯದೆಲೆ ಬೆಲೆ ಏನು ದುಬಾರಿ ಆಗಿ ಒಂದು ದಿನ ಇದ್ದ ದರ ಇನ್ನೊಂದು ದಿನ ಇರಲ್ಲ. ಆದರೆ, ದುಬಾರಿಯಾದರೂಮಾರುಕಟ್ಟೆಯಲ್ಲಿ ಗುಣಮಟ್ಟದ ವೀಳ್ಯದೆಲೆ ಸಿಗುತ್ತಿಲ್ಲ ಎಂಬ ಕೊರಗು ಈಗ ಗ್ರಾಹಕರಿಂದ ಕೇಳಿ ಬರುತ್ತಿದೆ. ಇಡೀ ಜಿಲ್ಲೆಗೆ ತುಮಕೂರಿನ ಪಾವಗಡದಿಂದ ವೀಳ್ಯದೆಲೆ ಸರಬರಾಜು ಆಗುತ್ತಿದೆ. ದಟ್ಟ ಮಂಜುಬೀಳುತ್ತಿರುವ ಕಾರಣ ವೀಳ್ಯದೆಲೆ ಸರಿಯಾಗಿ ಬರುತ್ತಿಲ್ಲ. ಫೆಬ್ರವರಿ ಕಳೆಯುವವರೆಗೂ ಬೆಲೆ ಏರಿಕೆ ತಪ್ಪಿದ್ದಲ್ಲ ಎನ್ನುತ್ತಾರೆ ವೀಳೇದೆಲೆ ಮಾರಾಟಗಾರರು.

ಗ್ರಾಹಕರಿಗೆ ಹೊರೆ: ಒಂದು ವಾರದಲ್ಲಿ ಒಂದು ಕಟ್ಟಿನ ಬೆಲೆ 50ರಿಂದ 60 ರೂ. ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ. ಒಂದು ಕಟ್ಟಿಗೆ ಒಟ್ಟು 100 ವೀಳ್ಯದೆಲೆ ಇರುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರೂ.ಗೆ ಮಾರಾಟ ಆಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯ ರಿಂದ ವೀಳ್ಯದೆಲೆಗೆ ಸಾಕಷ್ಟು ಬೇಡಿಕೆ ಇದೆ.

ಆದರೆ, ಜಿಲ್ಲೆಯಲ್ಲಿ ಸತತ ಎರಡು ಮೂರು ವರ್ಷಗಳಿಂದ ವೀಳ್ಯದೆಲೆಬೆಲೆ ಗಗನಕ್ಕಿರುವುದು ಗ್ರಾಹಕರ ಕೈ ಕಚ್ಚುವಂತೆ ಮಾಡಿದೆ.

Advertisement

ವೀಳ್ಯದೆಲೆಗೆ ಬಂಗಾರದ ಬೆಲೆ: ವೀಳ್ಯದೆಲೆಗೆ ಈಗ ಬಂಗಾರದ ಬೆಲೆ ಬಂದಿದ್ದು, ಬೆಲೆ ಏರಿಕೆ ಪರಿ ನೋಡಿ ಗ್ರಾಹಕರು ಗಾಬರಿಗೊಳ್ಳುವಂತೆ ಮಾಡಿದೆ. ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಲ್ಲಿ ಗಗನ ಕುಸುಮವಾಗಿದೆ. ಟ್ರಾನ್ಸ್‌ಪೊàರ್ಟ್‌ ಹೆಚ್ಚಳ, ತರಕಾರಿ ವಿಪರೀತವಾಗಿ ಏರಿಕೆಕಂಡಿದೆ. ಇದರ ನಡುವೆ ಈಗ ಬೆಲೆ ಏರಿಕೆ ಸರದಿ ವೀಳ್ಯದೆಲೆಯದ್ದಾಗಿದ್ದು, ವೀಳ್ಯದೆಲೆ ಜಿಗಿಯುವ ಬಾಯಿ ಸುಡುವಂತೆ ಬೆಲೆ ದುಪ್ಪಟ್ಟುಗೊಂಡಿದೆ.

ಶುಭ, ಸಮಾರಂಭದಲ್ಲಿ ಬಹುಬೇಡಿಕೆ :  ಯಾವುದೇ ಧಾರ್ಮಿಕ ಪೂಜಾ ಕಾರ್ಯಗಳು, ಶುಭ, ಸಮಾರಂಭಗಳು, ಮದುವೆ,ನಡೆಯಬೇಕಾದರೂ ವೀಳ್ಯದೆಲೆ ಖಾಯಂಆಗಿದೆ. ಎಲೆ ಅಡಕೆ ಜಿಗಿಯುವವರ ಪಾಲಿಗೂ ವೀಳ್ಯದೆಲೆ ಇರಬೇಕು. ಕಳೆದಒಂದು ತಿಂಗಳಿನಿಂದ ವೀಳ್ಯದೆಲೆ ಬೆಲೆಬರೋಬ್ಬರಿ ಮೂರು ಪಟ್ಟು ಹೆಚ್ಚಳ ಆಗಿದ್ದು, ಬೆಲೆ ಏರಿಕೆಯ ತಾಪ ಗ್ರಾಹಕರಮುಟ್ಟಿದೆ. ಜಿಲ್ಲೆಯಲ್ಲಿ ಕೆಲವು ಮನೆಗಳ ಹತ್ತಿರ ಪೂಜೆಗೆ ಮತ್ತು ಬಳಸಲು ವೀಳ್ಯದೆಲೆಯನ್ನು ಪಾಟ್‌ ಮತ್ತು ಖಾಲಿ ಜಾಗದಲ್ಲಿ ಹಾಕಿರುವುದು ಕಂಡುಬರುತ್ತಿದ್ದು, ಜಿಲ್ಲೆಯಲ್ಲಿ ವೀಳ್ಯದೆಲೆತೋಟಗಳು ಇರುವುದು ಅಪರೂಪ.

ಅಕಾಲಿಕ ಮಳೆಗೆ ನೆಲಕಚ್ಚಿದ ತೋಟ:

ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದ ವೀಳ್ಯದೆಲೆ ತೋಟಗಳು ನೆಲಕಚ್ಚಿವೆ. ಜಿಲ್ಲೆಗೆ ಪೂರೈಕೆ ಆಗುತ್ತಿರುವ ಪಾವಗಡ, ತುಮಕೂರು, ಹಾವೇರಿ ಮತ್ತಿತರ ಕಡೆ ವೀಳ್ಯದೆಲೆ ತೋಟಗಳಿಗೂ ವರುಣನ ಆರ್ಭಟ ಅಪ್ಪಳಿಸಿದ ಪರಿಣಾಮ ವೀಳ್ಯದೆಲೆ ಜಿಲ್ಲೆಗೆ ಪೂರೈಕೆಯಾಗದೆ ಬೆಲೆ ಹೆಚ್ಚಳ ಕಂಡಿದೆ ಎನ್ನುವ ಮಾತು ವ್ಯಾಪಾರಸ್ಥರಿಂದ ಕೇಳಿಬರುತ್ತಿದೆ.

 

ಔಷಧಗುಣವುಳ್ಳ ಎಲೆ ಬಳಕೆ ಹೆಚ್ಚು :  ಔಷಧ ಗುಣವುಳ್ಳ ವೀಳ್ಯದೆಲೆಯನ್ನು ಹೆಚ್ಚಾಗಿ ಬಳಕೆ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರುಅಡಕೆಯೊಂದಿಗೆ ವೀಳ್ಯದೆಲೆಯನ್ನು ಬೆರೆಸಿಕೊಂಡು ಜಿಗಿದರೆ ಅತ್ತ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಪಾನ್‌ ಮಸಾಲ ಪ್ರಿಯರು ತಂಬಾಕುಉತ್ಪನ್ನಗಳ ಜೊತೆಗೆ ವೀಳ್ಯದೆಲೆಬೆರೆಸಿ ಕೊಂಡು ಜಿಗಿಯುತ್ತಾರೆ.ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಹಿಡಿದು ದೊಡ್ಡ ಹಬ್ಬಹರಿದಿನ ಬಂದರೆ ಅಥವಾ ಮದುವೆ,ನಾಮಕರಣ, ಬಾಡೂಟ ಕಾರ್ಯಕ್ರಮ ಗಳಿಗೆ ಖಾಯಂ ಸ್ಥಾನ ಇದೆ.

ವೀಳ್ಯದೆಲೆ ಮಾರಾಟವನ್ನು ನಮ್ಮ ತಾತ ಕಾಲದಿಂದಲೂ ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಈಗಲೂ ಸಹಮುಂದುವರಿಸಿಕೊಂಡು ಬಂದಿದ್ದೇವೆ. ಇಷ್ಟು ದುಬಾರಿಯಾಗಿದ್ದು ನಾವುಕಂಡಿರಲಿಲ್ಲ. ತುಮಕೂರು, ಪಾವಗಡ, ಹಾವೇರಿ ಇತರೆ ಕಡೆಗಳಿಂದ ವೀಳ್ಯದೆಲೆ ತರಿಸಲಾಗುತ್ತಿದೆ. ವೈ.ಆರ್‌.ರುದ್ರೇಶ್‌, ವೀಳ್ಯದೆಲೆ ವ್ಯಾಪಾರಿ

ವೀಳ್ಯದೆಲೆ ಬೆಳೆಯನ್ನು ನಮ್ಮ ಮನೆಗೆ ಪೂಜೆಗೆ ಮತ್ತು ಹಾಕಲು ಮನೆಯ ಆವರಣದಲ್ಲೇ ಬೆಳೆಸುತ್ತಿದ್ದೇವೆ. ವೀಳ್ಯದೆಲೆ ಬೆಳೆಯಲು ಸಾಕಷ್ಟು ನಿಯಮಗಳಿವೆ. ಅದನ್ನು ಮೀರಿದರೆ ಗಿಡವು ಬರುವುದಿಲ್ಲ. ದೀಪಾವಳಿ ಸಮಯದಲ್ಲಿ ವೀಳ್ಯದೆಲೆ ಗಿಡದ ಮುಂದೆ ನೋಮುವ ಪದ್ಧತಿಯಿದೆ. ಎಸ್‌.ಆರ್‌. ವಿಜಯಕುಮಾರ್‌, ಪ್ರಗತಿಪರ ರೈತ.

ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next