Advertisement
ಪಟ್ಟಣದ ಬಸ್ ನಿಲ್ಧಾಣದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಮಾತನಾಡಿದರು.
Related Articles
Advertisement
ಪ್ರಪ್ರಥಮವಾಗಿ ಕೆಜಿಎಫ್ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲವು ಸಾಧಿಸಿದ್ದು, ಇತಿಹಾಸ ಸೃಷ್ಠಿಯಾಗಿದೆ ಎಂದರು. ಎಲ್ಲಾ ನೂತನ ನಿರ್ದೇಶಕರಿಗೆ ಶುಭ ಹಾರೈಸಿದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಹೈಕಮಾಂಡ್ ಭಿ.ಪಾರಂ ನೀಡುವ ಅಭ್ಯರ್ಥಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.
ನೂತನ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಇದನ್ನು ಚದುರಿಸಲು ಯಾರಿಂದ ಸಾಧ್ಯವಿಲ್ಲ, ಪ್ರಥಮ ಬಾರಿಗೆ ಸಹಕಾರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಇದು ಇತಿಹಾಸ ಪುಟಗಳಲ್ಲಿ ಸೇರಲಿದೆ. ಮುಂದಿನ ದಿನಗಳಲ್ಲಿಯೂ ಸಹ ಬಿಜೆಪಿ ಹಿಡಿತ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್-ಬಿಜೆಪಿಗೆ ಮುಖಭಂಗ: ವೈ.ಸಂಪಂಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ಬಿ.ಟೀಂ ಬಿಜೆಪಿ ಪಕ್ಷದ ಅಧ್ಯಕ್ಷರು, ಕೆಲವು ಮುಖಂಡರು, ಕಾಂಗ್ರೆಸ್ ಶಾಸಕಿ ಎಂ.ರೂಪಕಲಾ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಪಣತೊಟ್ಟಿದ್ದರು ಆದರೆ ಮತದಾರ ಪ್ರಭುಗಳು ತಕ್ಕ ಶಾಸ್ತಿ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದರು. ಕಾಂಗ್ರೆಸ್ ಮುಲುಗುವ ದೋಣಿಯಾಗಿದೆ. ಬಿಜೆಪಿ ಬಲಿಷ್ಠವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಗಂಗಾವತಿ ಪೊಲೀಸರ ಭರ್ಜರಿ ಬೇಟೆ : 6 ತಿಂಗಳಲ್ಲಿ 33 ಬೈಕ್ ಕದ್ದ ಆರೋಪಿಯ ಬಂಧನ
ಹೈಕೆಮಾಂಡ್ ಸೂಚನೆಯಂತೆ ವೈ.ಸಂಪಂಗಿ ನಡೆದುಕೊಂಡಿಲ್ಲ:ಜಯಪ್ರಕಾಶ್ಟಿಎಪಿಎಂಸಿಎಸ್ ನಿರ್ದೇಶಕರ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಲಾ 5 ಸ್ಥಾನಗಳನ್ನು ಹಂಚಿಕೊಳ್ಳಲು ಹೈಕೆಮಾಂಡ್ ತಮಗೆ ಹಾಗೂ ವೈ.ಸಂಪಂಗಿ ಅವರಿಗೆ ಸೂಚನೆ ನೀಡಿತ್ತು ಆದರೆ ವೈ.ಸಂಪಂಗಿ ಹೈಕೆಮಾಂಡ್ ಆದೇಶಕ್ಕೆ ಕ್ಯಾರೆ ಅನ್ನದೆ 10 ಮಂದಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಇದರಿಂದ ನಿಷ್ಠಾವಂತ ಕಾರ್ಯಕರ್ತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಕೆಜಿಎಫ್ ಗ್ರಾಮಾಂತರ ಮಂಡಲ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಪಿ.ಎನ್ ಪುರುಷೋತ್ತಮ್, ಮಂಜುನಾಥ, ಪ್ರವೀಣ್, ಗ್ರಾಪಂ ಅಧ್ಯಕ್ಷ ಸುನೀಲ್, ಮಾಜಿ ಅಧ್ಯಕ್ಷ ಹುಲ್ಕೂರು ಶ್ರೀನಿವಾಸ್, ಮುರಳಿ ಮೋಹನ್, ಹಿರಿಯ ಮುಖಂಡರಾದ ಡೇರಿ ವೆಂಕಟೇಶ್, ವಿಜಿ ಕುಮಾರ್, ಗ್ರಾಪಂ ಸದಸ್ಯ ಪ್ರಸಾದ್, ನಾರಾಯಣಸ್ವಾಮಿ, ಮಾರಸಂದ್ರ ಬಾಬು, ಧನುಷ್ ನಾಯ್ಡು, ವಿಜಯ್ ಭಾಸ್ಕರ್, ಶ್ರೀಪತಿ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.