ಬೆಂಗಳೂರು: ಇಂದು ಮಹಾ ಶಿವರಾತ್ರಿ. ಈ ಶುಭದಿನಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯದ ಗಣ್ಯರು ಜನತೆಗೆ ಶುಭ ಕೋರಿದ್ದಾರೆ.
ನಾಡಿನ ಸಮಸ್ತ ಮಹಾಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಸಂಕಷ್ಟಗಳೆಲ್ಲವನ್ನೂ ಪರಿಹರಿಸಿ, ಆ ಮಹಾಮಹೀಶ್ವರ ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡಲೆಂದು ವಿಶೇಷವಾಗಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.
Related Articles
– Basavaraj Bommai (@bsbommai) 1 Mar 2022
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಈ ಶುಭ ದಿನವು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಸುಖ-ಶಾಂತಿ, ಆರೋಗ್ಯ, ಸಕರಾತ್ಮಕತೆಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ಹರ ಹರ ಮಹಾದೇವ! ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಶುಭಾಶಯ ತಿಳಿಸಿದ್ದಾರೆ.
ಸಮಸ್ತ ಜನತೆಗೆ ಮಹಾಶಿವರಾತ್ರಿಯ ಪಾವನಪರ್ವದ ಭಕ್ತಿಪೂರ್ವಕ ಶುಭ ಕಾಮನೆಗಳು. ಜಗದ್ರಕ್ಷಕನಾದ ಉಮಾಪತಿಯು ಎಲ್ಲರ ಬಾಳಿನ ಅಂಧಕಾರವನ್ನು ಕಳೆದು ಉಜ್ವಲ ಭವಿಷ್ಯದ ಜ್ಯೋತಿ ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
– Araga Jnanendra (@aragajnanendra) 1 Mar 2022
ಎಲ್ಲ ಆಡಂಬರಗಳಿಂದ ಮುಕ್ತರಾಗಿ ಸರಳ ಮನಸ್ಸಿನಿಂದ ಪರಶಿವನನ್ನು ನೆನೆದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ. ರಾಜ್ಯದ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ತಿಳಿಸಿದ್ದಾರೆ.
ಎಲ್ಲರಿಗೂ ಪರಮೇಶ್ವರನನ್ನು ಆರಾಧಿಸುವ ಮಹಾಶಿವರಾತ್ರಿಯ ಭಕ್ತಿಪೂರ್ವಕ ಶುಭಾಶಯಗಳು. ಗಂಗಾಧರನು ಎಲ್ಲರ ಕಷ್ಟ ಕೋಟಲೆಗಳನ್ನು ತೊಡೆದು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಕೆ. ಗೋಪಾಲಯ್ಯ ಕೂ ಮಾಡಿದ್ದಾರೆ.
– ಕೆ ಗೋಪಾಲಯ್ಯ (@kgopaliahbjp) 1 Mar 2022
ಈ ಮಹಾಶಿವರಾತ್ರಿಯಂದು ಶಿವನು ನಿಮ್ಮ ಎಲ್ಲಾ ದುಃಖವನ್ನು ನಾಶ ಮಾಡಲಿ ಮತ್ತು ಸಂತೋಷದಾಯಕ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲಿ. ಓಂ ನಮಃ ಶಿವಾಯ. ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.