Advertisement

ಕ್ಯಾನ್ಸರ್‌ಗೆ ಕಲಬುರಗಿಯಲ್ಲೇ ಉತ್ತಮ ಚಿಕಿತ್ಸೆ: ನಿಗ್ಗುಡಗಿ

10:29 AM Nov 27, 2017 | |

ಕಲಬುರಗಿ: ಜೀವಮಾರಕ ಕ್ಯಾನ್ಸರ್‌ ರೋಗದ ಚಿಕಿತ್ಸೆಗೆ ಇನ್ನು ಬೆಂಗಳೂರು, ಹೈದ್ರಾಬಾದ ಸೇರಿದಂತೆ ದೂರದ ಊರುಗಳಿಗೆ ಕಲಬುರಗಿ ಜನತೆ ಹೋಗುವ ಅಗತ್ಯವಿಲ್ಲ. ಎಚ್‌ಸಿಜಿ (ಹೆಲ್ತ್‌ ಕೇರ್‌ ಗ್ಲೋಬಲ್‌)ಆಸ್ಪತ್ರೆಯಲ್ಲೇ ಬ್ರಾಕಿ ಥೆರಪಿ ಯಂತ್ರ ಸ್ಥಾಪಿಸಲಾಗಿದೆ ಎಂದು ರೆಡಿಯೇಷನ್‌ ಆಂಕೊಲಾಜಿ ತಜ್ಞ ಡಾ| ಶಾಂತಲಿಂಗ ನಿಗ್ಗುಡಗಿ ಹೇಳಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಖೂಬಾಪ್ಲಾಟ್‌ನಲ್ಲಿರುವ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಬ್ರಾಕಿಥೆರಪಿ ಯಂತ್ರ ಅಳವಡಿಸಲಾಗಿದೆ. ಈ ಯಂತ್ರದಿಂದ ಕ್ಯಾನ್ಸರ್‌ ಯಾವ ಹಂತದಲ್ಲಿದೆ. ದೇಹದ ಯಾವ ಜಾಗೆಯಲ್ಲಿದೆ. ಅದಕ್ಕೆ ನಿಖರವಾಗಿ ವಿಕೀರಣ (ರೇಡಿಯೇಷನ್‌) ಚಿಕಿತ್ಸೆ ನೀಡುವ ಯಂತ್ರ ಇದಾಗಿದೆ. ಇದರಿಂದ ಇನ್ನು ಮುಂದೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು ಎಂದರು.

ಇಂತಹ ಯಂತ್ರ ಸುತ್ತಲಿನ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಸೊಲ್ಲಾಪುರದಲ್ಲೂ ಇಲ್ಲ. ಹುಬ್ಬಳ್ಳಿಯಲ್ಲಿ ಇದ್ದರೂ ನಮ್ಮ ಆಸ್ಪತ್ರೆಯಲ್ಲಿಲ್ಲ. ಬ್ರಾಕಿಥೆರಪಿಯನ್ನು ವಿಶೇಷವಾಗಿ ಪ್ರೊಸ್ಟೇಟ್‌, ತಲೆ ಕುತ್ತಿಗೆ, ನಾಲಿಗೆ, ಪಿತ್ತಕೋಶ, ಗರ್ಭಕೋಶ
ಮತ್ತು ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ. ಕ್ಯಾನ್ಸರ್‌ ಪೀಡಿತ ಭಾಗದ ಮೇಲೆ ನಿಖರವಾಗಿ ಮತ್ತು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ವಿಕಿರಣಗಳನ್ನು ಹಾಯಿಸಿ ಬ್ರಾಕಿ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ ಎಂದರು.

ಈ ಚಿಕಿತ್ಸೆಯನ್ನು ಮೊದಲು ಬೆಂಗಳೂರಿನಂತಹ ಮಹಾನಗರದಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಕಲಬುರಗಿ ನಗರದಲ್ಲಿ ಮೊದಲ ಬಾರಿಗೆ ಈ ಯಂತ್ರ ಅಳವಡಿಸಲಾಗಿದೆ. ಇದರಿಂದ ಕಲಬುರಗಿ ಸುತ್ತಲಿನ ಜಿಲ್ಲೆಗಳಲ್ಲಿನ ರೋಗಿಗಳು ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಅತಿ ಕಡಿಮೆ ಹಣದಲ್ಲಿ ಚಿಕಿತ್ಸೆ ದೊರೆಯಲಿದೆ. ಆರೇಳು ಸಾವಿರದಲ್ಲಿ ಒಂದು ಸಿಟಿಂಗ್‌ ಮಾಡಬಹುದು. ಇಂತಹ ಮೂರ್‍ನಾಲ್ಕು ಸಿಟಿಂಗ್‌ಗಳಿಂದ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದರು.

ಇದರಿಂದ ಬಡ ರೋಗಿಗಳ ಹಣ ಮತ್ತು ಸಮಯ ಉಳಿತಾಯವಾಗಲಿದೆ. ಎಚ್‌ಸಿಜಿ ಆಸ್ಪತ್ರೆಯಲ್ಲಿ ಸರಕಾರದ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಯೋಜನೆಗಳ ಲಾಭವನ್ನು ಫಲಾನುಭವಿಗಳು ಪಡೆಯಬಹುದಾಗಿದೆ
ಎಂದರು. 

Advertisement

ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಬ್ರಾಕಿ ಥೆರಪಿ ಯಂತ್ರ ಉದ್ಘಾಟಿಸಲಾಯಿತು. ಡಾ| ನಂದೀಶಕುಮಾರ ಜೀವಣಗಿ, ಡಾ| ಶರಣ ಹಟ್ಟಿ, ಡಾ| ಸುದರ್ಶನ ಲಾಖೆ, ಎಚ್‌ಸಿಜಿ ಸೆಂಟರ್‌ ಮುಖ್ಯಸ್ಥ ಡಾ| ಅಬ್ದುಲ್‌ ರಹೀಮ್‌ ಸೆಲ್ಸ್‌ ಮತ್ತು ಮಾರ್ಕೆಟಿಂಗ್‌ ಮುಖ್ಯಸ್ಥ ಮಹೇಶ ಎಸ್‌., ಮಾರ್ಕೆಟಿಂಗ್‌ ಮುಕೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next