Advertisement
ಇನ್ನೇನು ಕಾಲೇಜು ಮುಗಿಯುವ ದಿನಗಳು ಹತ್ತಿರ ಬಂದಿದ್ದವು. ಆದರೂ ಸುತ್ತುವ ಆಸೆ ಮುಗಿದಿರಲಿಲ್ಲ. ತರಗತಿಯವರೆಲ್ಲ ಸೇರಿಕೊಂಡು ಎಲ್ಲಾದರೂ ಚಾರಣಕ್ಕೆ ಹೋಗುವ ಯೋಜನೆ ಕೈ ಕೊಟ್ಟಿತ್ತು. ಅದರ ಅಸಮಾಧಾನದಲ್ಲಿಯೇ ಮನೆಗೆ ತೆರಳಿದಾಗ ಸಂಜೆ ನಾವು ನಾಲ್ಕು ಜನ ಇರುವ ವಾಟ್ಸಾಪ್ ಗುಂಪಿನಲ್ಲಿ ಮತ್ತೆ ಚರ್ಚೆ ಶುರುವಾಗಿತ್ತು. ಎಲ್ಲದರೂ ಹೋಗಿಯೇ ಇನ್ನೂ ಕಾಲೇಜಿಗೆ ಹೋಗಬೇಕೆಂದು ನಮ್ಮ ನಿರ್ಧಾರವಾಗಿತ್ತು. ಇಂಟರ್‌ನೆಟ್‌ನಲ್ಲಿ ಹುಡುಕಾಡುವಾಗ ನಮ್ಮ ಕಣ್ಣಿಗೆ ಬಿದ್ದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಬಳಿಯ ಯಾಣ. ಮರುದಿನವೇ ನಾವು ಹೊರಟೆವು. ನಮ್ಮ ಪ್ರಯಾಣ ಯಾಣದತ್ತ ಸಾಗಿತ್ತು.
Related Articles
ಸ್ಕಂದ ಪುರಾಣದಲ್ಲೂ ಯಾಣದ ಇತಿಹಾಸ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನೇ ಸುಡುವುದಾಗಿ ಅಟ್ಟಿಸಿಕೊಂಡು ಬಂದಾಗ ಭೈರವೇಶ್ವರನ ರಕ್ಷಣೆಗೆ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿಕೊಂಡು ಅವನ ಹಸ್ತವನ್ನೇ ಅವನ ತಲೆಯಮೇಲೆ ಇರಿಸಿಕೊಳ್ಳುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವೆಂದು ಪ್ರತೀತಿ ಇದೆ. ಅದೇ ಕಾರಣದಿಂದ ಯಾಣದಲ್ಲಿ ಮಣ್ಣು ಸುಟ್ಟ ಬಣ್ಣದಲ್ಲಿ ಇದೆ ಎಂದು ಹೇಳುತ್ತಾರೆ.
Advertisement
ಶಿವರಾತ್ರಿಯ ದಿನ ಇಲ್ಲಿ ಭೈರವೇಶ್ವರನಿಗೆ ವಿಶೇಷ ಪೂಜೆ ಇರುತ್ತದೆ, ಜತೆಗೆ ದೂರ-ದೂರದ ಊರಿನಂದ ಭಕ್ತರು ಆಗಮಿಸುತ್ತಾರೆ. ಈ ಶಿವರಾತ್ರಿಯ ದಿನ ಭೈರವೇಶ್ವರನಿಗೆ ಪೂಜೆ ಸಲ್ಲಿಸಿ ದಂಡಿ ತೀರ್ಥದ ನೀರನ್ನು ಕೊಂಡೊಯ್ದು ಗೋಕರ್ಣದ ಮಾಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.
ಹೀಗೆ ಯಾಣದಲ್ಲಿ ಸುತ್ತಾಡಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಂಡು, ಗ್ಯಾಲರಿ ತುಂಬುವಷ್ಟು ಫೋಟೊ ಕ್ಲಿಕ್ಕಿಸಿಕೊಂಡು ನೆನಪಿನ ಬುತ್ತಿಗೆ ಮತ್ತೂಂದು ಹೊಸ ಜಾಗವನ್ನು ಸೇರಿಸಿಕೊಂಡು ವಾಪಸಾಗಿದ್ದೆವು.
ಭೈರವೇಶ್ವರ, ಮೋಹಿನಿ ಶಿಖರಯಾಣದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಈ ಎರಡೂ ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಸುತ್ತಲಿನ ಹಸುರು ಪ್ರಕೃತಿಯ ನಡುವಿನ ಶಿಖರಗಳು ಬಾನೆತ್ತರದಿಂದ ಕೈಬೀಸಿ ಕರೆಯುವಂತೆ ತೋರುತ್ತವೆ. ಭೈರವೇಶ್ವರ ಶಿಖರವು 120ಮೀ. ಎತ್ತರ ಹಾಗೂ ಮೋಹಿನಿ ಶಿಖರವು 90 ಮೀ. ಎತ್ತರವಿದೆಯಂತೆ. - ಪವಿತ್ರಾ ಭಟ್, ಪುತ್ತೂರು