Advertisement
ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಸಕ್ತ ಸಾಲಿನ ಮಲೆನಾಡ ಗಾಂಧಿ ಎಚ್.ಜಿ. ಗೋವಿಂದಗೌಡರ ಹೆಸರಿನ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ದೇವನಹಳ್ಳಿಯ ಬೈಚಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ತುಮಕೂರಿನ ನಾಗವಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಆಯ್ಕೆ ಆಯ್ಕೆಮಾಡಲಾಗಿದೆ. ಸೆ.5ರಂದು ಬೆಂಗಳೂರಿನ ವಸಂತನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಗುರುಚೇತನ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದರು.
*ಸಹ ಶಿಕ್ಷಕ ಎಚ್.ಎಂ. ಕೊಟ್ರೇಶ-ರಾಯಚೂರು
*ಮುಖ್ಯ ಶಿಕ್ಷಕ ರಂಗಪ್ಪ ಮಲ್ಲಪ್ಪ ದಾದಿ-ಬಾಗಲಕೋಟೆ
*ಸಹ ಶಿಕ್ಷಕಿ ಯು. ಅಹಲ್ಯಾ- ಉಡುಪಿ
*ಸಹ ಶಿಕ್ಷಕಿ ಎಸ್. ಎಚ್. ಶಿವಲೀಲಾ-ಕಲಬುರಗಿ
* ಮುಖ್ಯಶಿಕ್ಷಕ ನರಸಪ್ಪ ಕವಿ-ಬೀದರ್
*ಸಹ ಶಿಕ್ಷಕ ಪಂಚಾಕ್ಷರಯ್ಯ. ಬಿ. ಮುಧೋಳಮಠ-ಗದಗ
*ಮುಖ್ಯಶಿಕ್ಷಕ ವಿಲ್ಸನ್ ಜೆ.ಮೈಲಿ-ಧಾರವಾಡ
*ಸಹ ಶಿಕ್ಷಕ ಎನ್. ಮಂಜು-ಮಂಡ್ಯ
* ಸಹಶಿಕ್ಷಕ ಮಧುಸೂಧನ-ಹೊಸಪೇಟೆ
* ಸಹ ಶಿಕ್ಷಕ ಅಶೋಕ ಭೀಮಪ್ಪಾ ಕೌಲಗುಡ-ಬೆಳಗಾವಿ
* ಮುಖ್ಯಶಿಕ್ಷಕಿ ವೇದಾಬಾಯಿ ಗಂ.ಬಾಲಕೃಷ್ಣ ದೇಸಾಯಿ-ಕೊಪ್ಪಳ
* ಮುಖ್ಯಶಿಕ್ಷಕ ನೂರಜಹಾಂ ಎಚ್. ಶೇಖ್-ಉತ್ತರಕನ್ನಡ
* ಮುಖ್ಯಶಿಕ್ಷಕ ಎಸ್. ಬಸಣ್ಣ-ಬೆಂ.ಗ್ರಾಮಾಂತರ
* ಮುಖ್ಯಶಿಕ್ಷಕ ಪಿ.ಎಂ. ತಟ್ಟಿಮನಿ-ಧಾರವಾಡ
* ಮುಖ್ಯಶಿಕ್ಷಕ ನೂರುಲ್ಲಾ ಸಾಹಿಬ್-ಚಿಕ್ಕಬಳ್ಳಾಪುರ
* ಸಹಶಿಕ್ಷಕ ಸಿದ್ದಲಿಂಗೇಗೌಡ-ಹಾಸನ
*ಸಹ ಶಿಕ್ಷಕಿ ಎಸ್.ಎಂ. ಲೀಲಾವತಿ- ಬೆಂ.ಗ್ರಾಮಾಂತರ
*ಮುಖ್ಯ ಶಿಕ್ಷಕಿ ಜೋಯಾÕ ಹೆನ್ರಿಟಾ-ದಕ್ಷಿಣ ಕನ್ನಡ
* ಮುಖ್ಯಶಿಕ್ಷಕಿ ಎ.ಎಸ್. ಶೈಲಜ- ಶಿವಮೊಗ್ಗ
*ಸಹಶಿಕ್ಷಕಿ ಎನ್.ಎಚ್.ಪದ್ಮಾವತಿ-ಮೈಸೂರು ಪ್ರೌಢಶಾಲಾ ವಿಭಾಗ
* ಸಹ ಶಿಕ್ಷಕ ಬಿ. ತಿಮ್ಮ ನಾಯ್ಕ-ಬ್ರಹ್ಮಾವರ
* ಸಹ ಶಿಕ್ಷಕ ರಿಜ್ವಾನ್ ಬಾಷಾ ಸಾಹೇಬ್-ತುಮಕೂರು
* ಸಹ ಶಿಕ್ಷಕ ಗಡಿಶಟ್ಟೆಪ್ಪ ಸುಂಕದ-ರಾಯಚೂರು
* ದೈಹಿಕ ಶಿಕ್ಷಕ ಆರ್. ಜೇಮ್ಸ್-ಕೆ.ಆರ್.ನಗರ
* ಮುಖ್ಯಶಿಕ್ಷಕ ಬಿ.ಕೆ.ಸುಂದರೇಶ-ಚಾಮರಾಜನಗರ
* ದೈಹಿಕ ಶಿಕ್ಷಕ ಡಾ.ರಮೇಶಪ್ಪ ಜಿ.-ದೇವನಹಳ್ಳಿ
* ಮುಖ್ಯಶಿಕ್ಷಕ ಎಸ್.ಆರ್.ಕಲಾದಗಿ- ಧಾರವಾಡ
* ಸಹ ಶಿಕ್ಷಕ ಟಿ. ಸದಾಶಿವಪ್ಪ-ಚಿಕ್ಕಬಳ್ಳಾಪುರ
*ಸಹ ಶಿಕ್ಷಕ ಡಾ. ಎಂ. ರವೀಂದ್ರ ರೆಡ್ಡಿ-ಸರ್ಜಾಪುರ
* ಸಹ ಶಿಕ್ಷಕ ರಮೇಶ ಎಂ.ಬಾಯಾರು ಬಂಟ್ವಾಳ
* ಚಿತ್ರಕಲಾ ಶಿಕ್ಷಕ ಸತೀಶ ವಿಶ್ವೇಶ್ವರ ಹೆಗಡೆ-ಶಿರಸಿ
Related Articles
ರಾಜೀವ್ ಗಾಂಧೀ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕರ ಪ್ರಶಸ್ತಿಯನ್ನು ಚಾಮರಾಜನಗರ ಜಿಲ್ಲೆಯ ಎನ್. ದಿವಾಕರ ಹಾಗೂ ಕಲಬುರಗಿಯ ಸುರೇಖಾ ಜಗನ್ನಾಥ, ವೈಜ್ಞಾನಿಕ ಕ್ಷೇತ್ರ ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ಬೆಂ.ಗ್ರಾಮಾಂತರ ಜಿಲ್ಲೆಯಕೆ. ಸೀತಾರಾಮಯ್ಯ, ಕೊಪ್ಪಳದ ಉಮೇಶ. ಎಸ್.ವಂಕಲಕುಂಟಿ, ದಾವಣಗೆರೆಯ ಜೆ.ಪಿ. ಲಿಂಗೇಶಮೂರ್ತಿ ಹಾಗೂ ಹಾವೇರಿಯ ಡಿ.ಎಚ್. ದಯಾನಂದ ಪಡೆದಿದ್ದಾರೆ. ಶೈಕ್ಷಣಿಕ ಕ್ಷೇತ್ರದ ವಿಶೇಷ ಪ್ರಶಸ್ತಿಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಂ.ಎಂ. ಉಷಾರಾಣಿ, ಬೆಳಗಾವಿಯ ಲಲಿತಾ ಮಹಾವೀರ ಕ್ಯಾಸನ್ವರ, ಕೋಲಾದ ಅನ್ವರುಲ್ಲಾ ಹಸನ್ ಹಾಗೂ ಚಿತ್ರದುರ್ಗದ ಟಿ.ಎಚ್. ಕುಮಾರ್ ಪಡೆದಿದ್ದಾರೆ. ಹಾಗೆಯೇ ಗಣನೀಯ ಸಾಧನೆ ತೋರಿದ ಸರ್ಕಾರಿ ಪಿಯು ಕಾಲೇಜಿನ 2 ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Advertisement
ಅತ್ಯುತ್ತಮ ಎಸ್‌ಡಿಎಂಸಿಗಳು:ಬಾಗಲಕೋಟೆಯ ತುಳಸಿಗೆರೆ ಸರ್ಕಾರಿ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲೆ, ಮೈಸೂರು ಜಿಲ್ಲೆಯ ಹೆಬ್ಟಾಳು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯದ ಪಾಂಡವಪುರದ ಫ್ರಂಚ್‌ರಾಕ್ಸ್ ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗದ ಹೊಳಲ್ಕೆರೆಯ ಸ.ಹಿ.ಪ್ರಾ.ಶಾಲೆ ಹಾಗೂ ರಾಯಚೂರಿನ ಸ.ಹಿ.ಪ್ರಾ.ಶಾಲೆಯು ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಪಡೆದಿದೆ.