Advertisement

ಕೆಂಪೇಗೌಡ ಪ್ರಶಸ್ತಿಗೆ ಅತ್ಯುತ್ತಮರ ಆಯ್ಕೆ: ಮೇಯರ್‌

01:05 AM Jul 02, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿಯನ್ನು ಈ ಬಾರಿ ಯಾರ ಒತ್ತಡಕ್ಕೂ ಮಣಿಯದೇ ಅತ್ಯುತ್ತಮರನ್ನು ಆಯ್ಕೆ ಮಾಡಲಾಗುವುದು ಎಂದು ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದರು.

Advertisement

ಜನಸೇವಾ ಸಂಸ್ಥೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 510ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾತನಾಡಿದ ಅವರು, ಕಳೆದ ವರ್ಷ ಬಿಬಿಎಂಪಿ ಕೊಡುಮಾಡುವ ಕೆಂಪೇಗೌಡ ಪ್ರಶಸ್ತಿ ಪಟ್ಟಿಯು ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಆದರೆ, ಈ ಬಾರಿ ಯಾರ ಒತ್ತಡಕ್ಕೂ ಮಣಿಯದೆ ಉತ್ತಮರಲ್ಲಿ ಅತ್ಯುತ್ತಮರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ದಯವಿಟ್ಟು ಯಾರು ಪ್ರಶಸ್ತಿ ವಿಚಾರದಲ್ಲಿ ಅನ್ಯರ್ಥ ಭಾವಿಸಬಾದು ಎಂದು ವಿನಂತಿಸಿದರು.

ನಾಡಪ್ರಭು ಕೆಂಪೇಗೌಡರು ಸಾಮಾನ್ಯ ಹಳ್ಳಿಯಂತಿದ್ದ ನಗರವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಮಹಾನ್‌ ವ್ಯಕ್ತಿಯಾಗಿದ್ದಾರೆ. ತಮ್ಮ ದೂರದೃಷ್ಟಿವುಳ್ಳ ಯೋಜನೆಗಳಿಂದಲೇ ಕೆರೆಕಟ್ಟೆಗಳು, ಕೋಟೆ, ಮಾರುಕಟ್ಟೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಇಂದು ಬೆಂಗಳೂರು ಉದ್ಯೋಗಗಳನ್ನು ಅರಿಸಿಕೊಂಡು ಬರುವವರಿಗೆ ಆಶ್ರಯ ನೀಡಿ ಬದುಕು ನಿರ್ಮಿಸಿಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಜ್ಯದ ನಾನಾ ಭಾಗಗಳ 20 ಸಾಧಕರಿಗೆ ಜನಸೇವಾ ಸಂಸ್ಥೆಯು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕಿ ಕುಸುಮಾ ಶಿವಳ್ಳಿ, ಜನಸೇವಾ ಸಂಸ್ಥೆಯ ಅಧ್ಯಕ್ಷ ಡಾ.ಎಚ್‌.ಬಿ. ರಾಜೇಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next