Advertisement

ಮಣಿಪಾಲದ ವಿದ್ಯಾರ್ಥಿನಿಗೆ “ಬೆಸ್ಟ್‌ ಪೋಸ್ಟರ್‌ ಅವಾರ್ಡ್‌’

03:35 AM Jul 14, 2017 | Team Udayavani |

ಉಡುಪಿ:  ಮಣಿಪಾಲ ವಿಶ್ವವಿದ್ಯಾನಿಲಯದ ಮಣಿಪಾಲ ಕಾಲೇಜ್‌ ಆಫ್ ಫಾರ್ಮಾಸುಟಿಕಲ್‌ ಸೈನ್ಸ್‌ನ ವಿದ್ಯಾರ್ಥಿನಿ ಸಂಗೀತಾ ಅಯ್ಯರ್‌ ಅವರು ಸ್ವೀಡನ್‌ನಲ್ಲಿ ನಡೆದ ಯುರೋ ಹಾರ್ಟ್‌ ಕೇರ್‌ – 2017 ಸ್ಪರ್ಧೆಯಲ್ಲಿ  “ಬೆಸ್ಟ್‌ ಪೋಸ್ಟರ್‌ ಅವಾರ್ಡ್‌’ ಪಡೆದುಕೊಂಡಿದ್ದಾರೆ.

Advertisement

ಸಂಗೀತಾ ಅವರು ಭಾರತವನ್ನು ಪ್ರತಿನಿಧಿಸಿದ್ದು, ಇಂಗ್ಲೆಂಡ್‌, ಅಮೆರಿಕ, ಜಪಾನ್‌, ರಷ್ಯಾ, ನೆದರ್ಲೆಂಡ್‌, ಪೋರ್ಚುಗಲ್‌, ಸ್ಪೇನ್‌, ಟರ್ಕಿ ಸಹಿತ ಹತ್ತಕ್ಕೂ ಹೆಚ್ಚು ದೇಶಗಳು ಸ್ಪರ್ಧೆಯಲ್ಲಿ  ಪಾಲ್ಗೊಂಡಿದ್ದವು.ಅವರು ಹೃದ್ರೋಗ ಕಾಯಿಲೆ (ಪ್ರಿವೆಂಟಿವ್‌ ಕಾರ್ಡಿಯಾಲಜಿ) ಸಂಬಂಧ ಸಮು ದಾಯದಲ್ಲಿ ಮುಂಚಿತ ಪರಿ ಹಾರ ಮಾರ್ಗ ಕೈಗೊಳ್ಳುವ ಕುರಿತು ಅಧ್ಯಯನ ನಡೆಸಿದ್ದರು. ಅದಲ್ಲದೆ ಸಂಗೀತಾ ಅವರು ಸ್ವೀಡನ್‌ನಲ್ಲಿ ನಡೆದ 6ನೇ ಫಾರ್ಮಾಸುÂಟಿಕಲ್‌ ಸೈನ್ಸಸ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಭಾಗಿಯಾಗಿದ್ದು, ಅಲ್ಲಿ ಯುವ ವಿಜ್ಞಾನಿ ಟ್ರಾವೆಲ್‌ ಸ್ಕಾಲರ್‌ಶಿಪ್‌ ಪಡೆದಿದ್ದರು. ಭಾರತದ ಖ್ಯಾತ ಹೃದ್ರೋಗ ತಜ್ಞ  ಡಾ| ರಂಜನ್‌ ಶೆಟ್ಟಿ ಕೆ. ಅವರ ಪ್ರಾಜೆಕ್ಟನ್ನುಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಬಳಿಕ ಪ್ರತಿಕ್ರಿಯಿಸಿದ ಸಂಗೀತಾ ಅವರು ನನ್ನ ಸಾಧನೆಗೆ  ಹೆತ್ತವರು ಸದಾ ಸಹಕಾರ ನೀಡುತ್ತಿದ್ದು, ಸ್ನೇಹಿತರು, ಪ್ರಾಧ್ಯಾಪಕರು ಸಹಕರಿಸಿದ್ದಾರೆ. ವಿದ್ಯಾ ಸಂಸ್ಥೆಗಳು ಶಿಕ್ಷಣ ಹಾಗೂ ಸಂಶೋಧನೆಗೆ ಹೆಚ್ಚು ಮಹತ್ವ  ಕೊಡಬೇಕು. ಯುವ ವಿಜ್ಞಾನಿಗಳು ಬೇರೆಡೆ ಗಮನ ಕೇಂದ್ರೀಕರಿಸದೆ ಒಂದೇ ವಿಷಯದತ್ತ ಅಧ್ಯಯನಶೀಲ ರಾಗಿರಬೇಕು ಎಂದವರು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next