Advertisement

ಆ ಕರಾಳ ರಾತ್ರಿ ಅತ್ಯುತ್ತಮ ಚಿತ್ರ

10:11 AM Jan 12, 2020 | mahesh |

ಬೆಂಗಳೂರು: ರಾಜ್ಯ ಚಲನಚಿತ್ರ ಪ್ರಶಸ್ತಿ (2018ನೇ ಸಾಲಿನ) ಪ್ರಕಟಗೊಂಡಿದ್ದು, ದಯಾಳ್‌ ಪದ್ಮನಾಭನ್‌ ನಿರ್ದೇಶನದ ಡಿ ಪಿಕ್ಚರ್ ನಿರ್ಮಾಣದ “ಆ ಕರಾಳ ರಾತ್ರಿ’ ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

Advertisement

“ರಾಮನ ಸವಾರಿ’ಗೆ ಎರಡನೆಯ ಹಾಗೂ “ಒಂದಲ್ಲಾ ಎರಡಲ್ಲಾ’ಗೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗಳು ಲಭಿಸಿವೆ. ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. “ಅಮ್ಮನ ಮನೆ’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಈ ಗೌರವ ಸಂದಿದೆ. “ಇರುವುದೆಲ್ಲವ ಬಿಟ್ಟು’ ಚಿತ್ರದ ಅಭಿನಯಕ್ಕಾಗಿ ಮೇಘನಾ ರಾಜ್‌ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಜೀವಮಾನ ಸಾಧನೆಗಾಗಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ ಡಾ| ರಾಜ್‌ಕುಮಾರ್‌ ಪ್ರಶಸ್ತಿ, ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಹಾಗೂ ಹಿರಿಯ ಛಾಯಾಗ್ರಾಹಕ ಬಿ.ಎಸ್‌. ಬಸವರಾಜು ಅವರಿಗೆ ಡಾ| ವಿಷ್ಣುವರ್ಧನ್‌ ಪ್ರಶಸ್ತಿ ಲಭಿಸಿದೆ. ಇದಲ್ಲದೆ, ಪ್ರಶಸ್ತಿಗಳಲ್ಲಿ 20ಕ್ಕೂ ಹೆಚ್ಚು ಪ್ರಕಾರಗಳಿದ್ದು, “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ಗೆ ಅತ್ಯುತ್ತಮ ಮನೋರಂಜನಾ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ.

“ದೇಯಿ ಬೈದೆತಿ’ಗೆ ಮೂರು ಪ್ರಶಸ್ತಿ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು “ದೇಯಿ ಬೈದೆತಿ’ ಪಡೆದಿದ್ದು, ಸಿನೆಮಾದ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಅವರಿಗೆ ಅತ್ಯುತ್ತಮ ನಿರ್ದೇ ಶಕ ಪ್ರಶಸ್ತಿಯೂ ಲಭಿಸಿದೆ. ಇದೇ ಸಿನೆಮಾದಲ್ಲಿ “ಆಂಟ್ರೆ ಆಂಟ್ರೆ ಮಜಲ್‌ಡ್‌ ಪಾಂತೆ ರಾವುಂಡು… ಗೆಜ್ಜೆಗಿರಿಟ್‌ ದೇಯಿನ ದಂಡಿಗೆ ಪಿದಾಡ್‌ಂಡ್‌’ ಹಾಡು ಹಾಡಿದ ಕಲಾವತಿ ದಯಾನಂದ್‌ ಅವರಿಗೂ ಪ್ರಶಸ್ತಿ ಪ್ರಕಟವಾಗಿದೆ.

ತುಳುನಾಡಿನ ಐತಿಹಾಸಿಕ ಕಥೆ ಆಧಾರಿತವಾಗಿ ಮೂಡಿಬಂದಿರುವ ಸಿನೆಮಾಕ್ಕೆ ಮೂರು ಪ್ರಶಸ್ತಿ ದೊರೆತಿರುವುದರಿಂದ ಸಂತಸವಾಗಿದೆ. ಐತಿಹಾಸಿಕ ಕಥೆಯನ್ನು ಪಾಡªನ ರೂಪದಲ್ಲಿ ಮತ್ತು ಆರಾಧನೆಯ ಮೂಲಕ ಕಾಪಿಡುತ್ತ ಬಂದಿರುವ ತುಳುನಾಡಿನ ಎಲ್ಲ ಹಿರಿಯರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ.
– ಸೂರ್ಯೋದಯ ಪೆರಂಪಳ್ಳಿ, ನಿರ್ದೇಶಕರು, “ದೇಯಿ ಬೈದೆತಿ’ ಸಿನೆಮಾ

Advertisement

“ಕಾಸರಗೋಡು ಸರಕಾರಿ ಶಾಲೆ’ಗೆ ರಾಷ್ಟ್ರ ಪ್ರಶಸ್ತಿಯ ಜತೆಗೆ ಈಗ ರಾಜ್ಯ ಪ್ರಶಸ್ತಿ ಕೂಡ ದೊರೆತಿರುವುದು ಸಂತಸ ತಂದಿದೆ. ಸಾಮಾಜಿಕ ಕಳಕಳಿಯಿಂದ ಮಾಡಿದ ಸಿನೆಮಾಕ್ಕೆ ಗೌರವ ಸಂದ ಕಾರಣದಿಂದ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಹೊಸ ಯೋಚನೆಗಳಿಗೆ ಪ್ರಶಸ್ತಿಯು ವೇದಿಕೆ ಒದಗಿಸಿದೆ.
– ರಿಷಬ್‌ ಶೆಟ್ಟಿ , ನಿರ್ದೇಶಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ

Advertisement

Udayavani is now on Telegram. Click here to join our channel and stay updated with the latest news.

Next