Advertisement

ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಗಳು

12:07 PM Nov 03, 2015 | mahesh |

ಉಳಿತಾಯ ಮಾಡುವ ಆಲೋಚನೆ ಬಹಳ ಚಿಕ್ಕ ವಯಸ್ಸಿನಿಂದ ಆರಂಭಿಸುವುದು ತುಂಬ ಒಳ್ಳೆಯದು. ಐವತ್ತು- ನೂರು ರೂಪಾಯಿಗಳೇ ಆಗಲಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವಾಗಿ ಪರಿವರ್ತನೆ ಆಗುತ್ತದೆ. ಅಷ್ಟೇ ಅಲ್ಲದೆ ನಮ್ಮಲ್ಲಿ ಹೂಡಿಕೆ ಮನೋಭಾವವನ್ನು ಬೆಳೆಸುತ್ತದೆ. ಆದರೆ ಯಾವ ಉಳಿತಾಯ ಯೋಜನೆಯಲ್ಲಿ ಏನೆಲ್ಲ ಅಪಾಯಗಳು ಇವೆಯೋ ಏನೋ? ಎಂಬ ಆತಂಕ ನಿಮ್ಮನ್ನು ಕಾಡಬಹುದು. ಆದ್ದರಿಂದ ಅಪಾಯ ಇಲ್ಲದ ಮತ್ತು ಸರಳವಾದ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಲುಮುಖ್ಯ.

Advertisement

ಆರಂಭಿಕ ಹಂತದ ಹೂಡಿಕೆದಾರರಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅತ್ಯುತ್ತಮ, ಸರಳ ಮತ್ತು ಸುರಕ್ಷಿತ ಯೋಜನೆಯಾಗಿದೆ. ಇದು ಪ್ರತಿ ತಿಂಗಳು ನಿರಂತರವಾಗಿ ಆದಾಯ ಪಡೆಯಲು ಸುರಕ್ಷಿತವಾಗಿರುವ ಉತ್ತಮ ಆಯ್ಕೆ. ನೌಕರರು, ನಿವೃತ್ತ ನೌಕರರು/ಹಿರಿಯ ನಾಗರಿಕರಿಗೆ ಹೇಳಿ ಮಾಡಿಸಿದಂತಿರುವ ಯೋಜನೆಯಾಗಿದ್ದು, ಪ್ರತೀ ತಿಂಗಳು ಸುಭದ್ರ ಆದಾಯ ಪಡೆಯಲು ಸಾಧ್ಯವಾಗುತ್ತದೆ. 5 ವರ್ಷಗಳ ಮೆಚ್ಯುರಿಟಿ ಅವಧಿ ಇದ್ದು, ಪ್ರಸ್ತುತ ಶೇ. 7.80ರಷ್ಟು ವಾರ್ಷಿಕ ಬಡ್ಡಿ ದರದ ಸೌಲಭ್ಯವೂ ಇದೆ. ಅದನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಈ ಮೇಲಿನ ಯೋಜನೆ ನಿಮ್ಮ ಅಂಚೆ ಕಚೇರಿ ಉಳಿತಾಯ ಬ್ಯಾಂಕ್‌ ಖಾತೆಗೆ ಸ್ವಯಂಚಾಲಿತ ಕ್ರೆಡಿಟ್‌ ಖಾತ್ರಿಗೊಳಿಸುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ಆದಾಯ ತೆರಿಗೆ ಮೌಲ್ಯಮಾಪನಕ್ಕೆ ಒಳಪಡುವ ಸರಕಾರಿ ನೌಕರರು, ಉದ್ಯಮಿಗಳು ಮತ್ತು ಇತರ ಸಂಬಳದಾರರಿಗಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ಎಷ್ಟು ಬೇಕಾದರೂ ಮೊತ್ತ ಹೂಡಿಕೆ ಮಾಡಬಹುದು ಹಾಗೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.

ಪ್ರಮಾಣ ಪತ್ರಗಳನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮೇಲಾಧಾರ ಭದ್ರತೆಯಾಗಿ ಇರಿಸಬಹುದು. ಆದಾಯ ತೆರಿಗೆ ಕಾಯಿದೆ ಪ್ರಕಾರ 80ಇ ಸೆಕ್ಷನ್‌ ಅಡಿಯಲ್ಲಿ ರೂ. 1,50,000ಗಳ ವಾರ್ಷಿಕ ಹೂಡಿಕೆ ಮೇಲೆ ರಿಯಾಯಿತಿ ಪಡೆಯಬಹುದು. ಶೇ. 8.1ರಷ್ಟು ಬಡ್ಡಿದರವಿದ್ದು, ಮೆಚ್ಯುರಿಟಿ ಬಳಿಕವಷ್ಟೆ ಪಾವತಿಸಲಾಗುತ್ತದೆ.

ಸೂಚನೆ: NSC VIII, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆ ಮಾಡಬೇಕಾದರೆ ಮೆಚ್ಯುರಿಟಿ ಅವಧಿಯ ಒಳಗಾಗಿ ಒಮ್ಮೆ ಮಾತ್ರ ವರ್ಗಾಯಿಸಬಹುದು.

Advertisement

ಕನಿಷ್ಠ ಮತ್ತು ಗರಿಷ್ಠ ಹೂಡಿಕೆ
– ಸಿಂಗಲ್‌ ಖಾತೆಯಾಗಿದ್ದರೆ ಕನಿಷ್ಠ ಹೂಡಿಕೆ ಮೊತ್ತ 1,500 ರೂ. ಗಳಾಗಿದ್ದರೆ ಗರಿಷ್ಠ ಹೂಡಿಕೆ ಮೊತ್ತ 4.5 ಲಕ್ಷ ರೂ.
– ಜಂಟಿ ಖಾತೆಯಾ ಗಿದ್ದರೆ ಕನಿಷ್ಠ ಹೂಡಿಕೆ ಮೊತ್ತ 1,500 ರೂ. ಮತ್ತು ಗರಿಷ್ಠ ಹೂಡಿಕೆ ಮೊತ್ತ 9 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next