Advertisement

ನಿಮಗ್ಯಾವ ಆಸ್ಪತ್ರೆ ಬೆಸ್ಟ್‌? ಮೊದಲೇ ತಿಳಿಯಿರಿ ಎಲ್ಲ ಮಾಹಿತಿ

03:50 AM Mar 26, 2017 | |

ಚೆನ್ನೈ: ಪ್ಯಾರಿಸ್‌ನಲ್ಲೋ, ಸಿಂಗಾಪುರದಲ್ಲೋ ಪ್ರವಾಸ ಮಾಡಬೇಕೆಂದರೆ ಎಷ್ಟು ವೆಚ್ಚವಾಗುತ್ತದೆ, ಅಗ್ಗದ ದರದಲ್ಲಿ ಹೋಟೆಲ್‌ ಎಲ್ಲಿ ಸಿಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಟ್ರಿಪ್‌ ಅಡ್ವೆ„ಸರ್‌ ಅಥವಾ ಮೇಕ್‌ವೆು ಟ್ರಿಪ್‌ನಲ್ಲಿ ಬುಕ್‌ ಮಾಡುವ ಮೂಲಕ ಪಡೆಯುತ್ತೀರಿ ಅಲ್ಲವೇ? ಅಂತೆಯೇ ಆಸ್ಪತ್ರೆಗೆ ದಾಖಲಾಧಿಗುವಾಗ ಅಥವಾ ಯಾವುದೋ ಪರೀಕ್ಷೆ ಮಾಡಿಸಬೇಕೆಂದಾಗ ಇದೇ ರೀತಿ ಆಸ್ಪತ್ರೆಗಳ ವೆಚ್ಚಗಳ ಹೋಲಿಕೆ ಮಾಡುವ ಅವಕಾಶ ಸಿಕ್ಕರೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?

Advertisement

ಮೆಡಿ ಅಸಿಸ್ಟ್‌ ಮತ್ತು ವಿಸ್ತಾರಾ ಹೆಲ್ತ್‌ನಂಥ ಸ್ಟಾರ್ಟ್‌ಅಪ್‌ಗ್ಳು ಇದೀಗ ಇಂತಹುದೊಂದು ಪ್ರಯತ್ನಕ್ಕೆ ಕೈಹಾಕಿವೆ. ಇವುಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಆಯಾ ನಗರಗಳ ಆಸ್ಪತ್ರೆಗಳ ಮಾಹಿತಿ, ಅಲ್ಲಾಗುವ ವೆಚ್ಚಗಳು, ರೂಂ ಬಾಡಿಗೆ, ವೈದ್ಯರ ಶುಲ್ಕ, ಪ್ಯಾಕೇಜ್‌ಗಳು… ಹೀಗೆ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತವೆ. ಈ ಮೂಲಕ ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾದ ಹಾಗೂ ಗುಣಮಟ್ಟದ ಆಸ್ಪತ್ರೆಗಳನ್ನು ಕುಳಿತಲ್ಲಿಯೇ ಆಯ್ಕೆ ಮಾಡುವ ಅವಕಾಶ ಕಲ್ಪಿಸಿವೆ. ಯಾವ ಆಸ್ಪತ್ರೆಗೆ ಹೋದರೆ ಎಷ್ಟು ವೆಚ್ಚವಾಗುತ್ತದೆ ಎಂಬುದು ಮೊದಲೇ ತಿಳಿದರೆ, ಗ್ರಾಹಕರು ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿಯೇ ಹೋಗಬಹುದು ಅಥವಾ ಬೇರೆ ಆಸ್ಪತ್ರೆಗಳತ್ತ ಮುಖಮಾಡಬಹುದು ಎನ್ನುತ್ತಾರೆ ಮೆಡಿ ಅಸಿಸ್ಟ್‌ನ ಮುಖ್ಯಸ್ಥ ಪ್ರಶಾಂತ್‌ ಜವೇರಿ. 

ಇಂತಹ ಪಾರದರ್ಶಕತೆಯು ವೈದ್ಯಕೀಯ ಹಣದುಬ್ಬರದ ಹೆಚ್ಚಳವನ್ನೂ ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು. ಜತೆಗೆ, ಗ್ರಾಹಕರಿಗೂ ಹಲವು ಆಯ್ಕೆಗಳು ತೆರೆದುಕೊಳ್ಳುತ್ತವೆ ಎನ್ನುವುದು ಜವೇರಿ ಅವರ ವಾದ.

Advertisement

Udayavani is now on Telegram. Click here to join our channel and stay updated with the latest news.

Next