Advertisement

ಇನ್ ಕಮ್ ಫಂಡ್, ಒಂದೊಳ್ಳೆ ಮ್ಯೂಚುವಲ್ ಫಂಡ್ ಯೋಜನೆ

03:45 AM Apr 24, 2017 | Harsha Rao |

ಇನ್ಕಂ ಫ‌ಂಡ್‌ ಎಂಬ ದೀರ್ಘ‌ಕಾಲಿಕ ಡೆಟ್‌ ಫ‌ಂಡುಗಳಲ್ಲಿಅತ್ಯಂತ ಜನಪ್ರಿಯವಾದ ಒಂದು ಡೆಟ್‌ ಫ‌ಂಡ್‌ ಪ್ರಕಾರ. ಮೂಲತಃ 1 ವರ್ಷ ಮೀರಿದ ವಾಯ್ದೆ ಇರುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಈ ಫ‌ಂಡು ಸರಕಾರದ ಬಾಂಡುಗಳು, ಸರಕಾರಿ ಉದ್ದಿಮೆಯ ಬಾಂಡುಗಳು, ಖಾಸಗಿ ಕಂಪೆನಿಗಳ ಡಿಬೆಂಚರುಗಳಲ್ಲಿ ಹೂಡಿಕೆ ನಡೆಸುತ್ತವೆ. ಹೆಸರೇ ಸೂಚಿಸುವಂತೆ ಈ ಫ‌ಂಡುಗಳ ಮೂಲ ಉದ್ದೇಶ ಹೂಡಿಕೆದಾರರಿಗೆ ಉತ್ತಮವಾದಆದಾಯ ನೀಡುವಂತದ್ದು. 

Advertisement

ಗ್ರೋಥ್‌/ಡಿವಿಡೆಂಡ್‌:
ಎÇÉಾ ಫ‌ಂಡುಗಳಂತೆ ಈ ಫ‌ಂಡುಗಳಲ್ಲೂ ಗ್ರೋಥ್‌ ಮತ್ತುಡಿವಿಡೆಂಡ್‌ ಆಯ್ಕೆಗಳಿರುತ್ತವೆ. ವಾಷಿ`ಠಿ³ ಆದಾಯ ಬೇಕಾದವರು ಡಿವಿಡೆಂಡ್‌ ಆಯ್ಕೆಯನೂ °ದೀರ್ಘ‌ಕಾಲಿಕ ಬೆಳವಣಿಗೆ ಬೇಕಾದವರುಗ್ರೋಥ್‌ಆಯ್ಕೆಯನ್ನೂ ಆಯ್ದುಕೊಳ್ಳಬಹುದು. ಆದರೆ ಈ ಎರಡು ಆಯ್ಕೆಗಳಿಗೆ ಕರನೀತಿಯಲ್ಲಿ ವ್ಯತ್ಯಾಸವಿದೆ. ಅದನ್ನು ನೋಡಿಕೊಂಡು ಆಯ್ದುಕೊಳ್ಳುವುದು ಉತ್ತಮ. 

ಓಪನ್‌ಎಂಡೆಡ್‌
ಇವು ಓಪನ್‌ಎಂಡೆಡ್‌ಅಥವಒಂದು ನಿಗದಿತಅಂತ್ಯವಿಲ್ಲದ ನಿರಂತರ ಫ‌ಂಡುಗಳು. ಫ‌ಂಡ್‌ ಸೇರಲುಇಚ್ಚಿಸುವವರು ಪ್ರಚಲಿತ ಮಾರುಕಟ್ಟೆ ಮೌಲ್ಯಅಥವಾ ನೆಟ್‌ಅಸೆಟ್‌ ವಾಲ್ಯೂ (ಎನ್‌ಎವಿ) ಬೆಲೆಗೆ ಫ‌ಂಡಿನಲ್ಲಿಯುನಿಟ್ಸ್‌ ಕೊಳ್ಳಬೇಕು ಹಾಗೂ ಹೊರಬರಲಿಚ್ಚಿಸುವವರು ಪ್ರಚಲಿತಎನ್‌ಎವಿ ಬೆಲೆಗೆ ಯುನಿಟ್ಸ್‌ಅನ್ನು ಫ‌ಂಡ್‌ ಹೌಸಿಗೇ ಮಾರಿ (ರಿಡೆಂಪ್ಷನ್‌) ಹೊರಬರಬಹುದು. ಫ‌ಂಡು ಮಾತ್ರ ನಿರಂತರ.

ಪೆನಾಲ್ಟಿ: ರಿಸ್ಕ್
ಇನ್ಕಂ ಫ‌ಂಡುಗಳಲ್ಲಿ 1 ವರ್ಷದ ಕನಿಷ್ಠ ಹೂಡಿಕಾ ಅವಧಿಯ ನಿಯಮವಿದೆ. ಆ ಮೊದಲು ಹೊರಬರಲುಇಚ್ಚಿಸುವವರು ಆ ಮೌಲ್ಯದ 1% ತಪ್ಪುದಂಡ/ಪೆನಾಲ್ಟಿ ಕಟ್ಟಿ ಹೊರಬರಬೇಕು.   ಇನ್ಕಂ ಮ್ಯೂಚುವಲ್‌ ಫ‌ಂಡುಗಳಲ್ಲಿ ಎರಡು ಬಗೆಯ ರಿಸ್ಕಾಗಳಿವೆ. 

ಮಾರುಕಟ್ಟೆಯಲ್ಲಿ ಬಡ್ಡಿದರದ ಏರಿಕೆಯಾದಲ್ಲಿ ಫ‌ಂಡುಗಳು ಹೂಡಿರುವ ಹಳೆಯ ಕಡಿಮೆ ಬಡ್ಡಿದರಗಳ ಪತ್ರಗಳು ಬೆಲೆಕಳೆದುಕೊಳ್ಳುತ್ತವೆ. ಇದರಿಂದ ಫ‌ಂಡಿನ ಮಾರುಕಟ್ಟೆಯ ಬೆಲೆ (ಎನ್‌ಎವಿ) ಕಡಿಮೆಯಾಗುತ್ತದೆ. ಬಡ್ಡಿದರ ಇಳಿಕೆಯ ಸಮಯದಲ್ಲಿ ಇದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ಲಾಭದಾಯಕವೂ ಆಗುತ್ತದೆ. ಇದನ್ನುಇಂಟರೆಸ್ಟ್‌ ರೇಟ್‌ ರಿಸ್ಕ್ ಎನುತ್ತಾರೆ. ಎಷ್ಟೇ ಭದ್ರವಾದ ಸಾಲಪತ್ರಗಳಲ್ಲಿ ಹೂಡಿದರೂ ಈ ರಿಸ್ಕ್ಇದ್ದೇ ಇದೆ. ಸರಕಾರಿ ಪತ್ರಗಳಲ್ಲಿ ಮಾತ್ರ ಹೂಡುವ ಬಾಂಡ್‌ ಫ‌ಂಡುಗಳೂ ಕೂಡಾ ಈ ಏರಿಳಿತಕ್ಕೆ ಹೊರತಾಗಿಲ್ಲ.   

Advertisement

ಹೂಡಿಕೆಯರಿಸ್ಕ್: ಸರಕಾರಿ ಪತ್ರಗಳು ಹೂಡಿಕೆಯ ಕ್ಯಾಪಿಟಲ್‌ ಬಗ್ಗೆ ಭದ್ರ. ಆದರೆ ಖಾಸಗಿ ಡಿಬೆಂಚರ್‌ಗಳಲ್ಲಿ ಹೂಡುವ ಫ‌ಂಡುಗಳಿಗೆ ಸ್ವಲ್ಪ ಮಟ್ಟಿನ  ಕ್ಯಾಪಿಟಲ್‌ರಿಸ್ಕ್ ಇರುತ್ತದೆ. ಅದಕ್ಕಾಗಿ ಉತ್ತಮ ಆಡಳಿತವುಳ್ಳ ಫ‌ಂಡುಗಳನ್ನುಆಯ್ಕೆ ಮಾಡಿಕೊಳ್ಳಬೇಕು. ಕ್ರೆಡಿಟ್‌ರೇಟಿಂಗ್‌ಅನುಸಾರ ಖಾತ್ರಿಯಾದ ಕಂಪೆನಿಗಳ ಡಿಬೆಂಚರುಗಳಲ್ಲಿ ಮಾತ್ರ ಹೂಡಿರುವುದು ಅಗತ್ಯ. ಫ‌ಂಡುಗಳ ಹೂಡಿಕಾ ಪಟ್ಟಿ (ಪೋರ್ಟ್‌ಫೋಲಿಯೋ) ಯನ್ನು ನಾವೇ ಸ್ವಯಂ ಪರಿಶೀಲಿಸುವುದು ಉತ್ತಮ.   

ಪ್ರತಿಫ‌ಲ
ಮೇಲೆ ತಿಳಿಸಿದ ಇಂಟರೆಸ್ಟ್‌ರೇಟ್‌ರಿಸ್ಕ್ ಅನ್ನು ಅರ್ಥಮಾಡಿಕೊಂಡವರಿಗೆ ಇದರ ಪ್ರತಿಫ‌ಲ ಸುಲಭದಲ್ಲಿ
ಅರ್ಥವಾದೀತು. ಬಡ್ಡಿದರಗಳು ಇಳಿಕೆಯ ಸಂದರ್ಭದಲ್ಲಿ ಇಂತಹ ಫ‌ಂಡುಗಳ ಮಾರುಕಟ್ಟೆ ಮೌಲ್ಯ ಅಥವಾ ಎನ್‌ಎವಿ ಏರುತ್ತದೆ ಹಾಗೂ ಬಡ್ಡಿದರಗಳ ಏರಿಕೆಯ ಸಂದರ್ಭದಲ್ಲಿ ಇವುಗಳ ಎನ್‌ಎವಿ ಇಳಿಯುತ್ತದೆ. ಆದುದರಿಂದ ಇನ್ಕಂ ಫ‌ಂಡುಗಳ ಪ್ರತಿಫ‌ಲ ಬಡ್ಡಿದರದ ಏರಿಳಿತಗಳನ್ನು ಹೊಂದಿಕೊಂಡು ಇರುತ್ತದೆ. ಉತ್ತಮ ಪ್ರತಿಫ‌ಲ ಬಯಸುವವರು ಬಡ್ಡಿದರಗಳು ಇಳಿಯುವ ಹಂತದಲ್ಲಿ ಈ ಫ‌ಂಡುಗಳಲ್ಲಿ ಹೂಡಬೇಕು. ಬಡ್ಡಿದರಗಳು ಏರುವಾಗ ಈ ಫ‌ಂಡುಗಳಲ್ಲಿ ಹೂಡಬಾರದು; ನಷ್ಟ ಸಂಭವಿಸೀತು. ಬಹುತೇಕರು ಈ ಸೂಕ್ಷ್ಮವನ್ನು ಗಮನದಲ್ಲಿ ಇಟ್ಟುಕೊಳ್ಳದೆ ಕಳೆದ ವರ್ಷಗಳ ಸಾಧನಾ ಪಟ್ಟಿಯನ್ನು ನೋಡಿ ತಪ್ಪು ಸಮಯದಲ್ಲಿ ಫ‌ಂಡನ್ನು ಪ್ರವೇಶಿಸಿ ಕೈ ಸುಟ್ಟುಕೊಳ್ಳುತ್ತಾರೆ. 
 
ಆದಾಯತೆರಿಗೆ
ಇನ್ಕಂ ಫ‌ಂಡುಗಳಲ್ಲಿ ಎರಡು ರೀತಿಯ ಹೂಡಿಕಾ ಅಯ್ಕೆಗಳಿವೆ. ಡಿವಿಡೆಂಡ್‌ಆಯ್ಕೆಯಲ್ಲಿ ಅಗಾಗ್ಗೆ ಕೈಗೆ ಸಿಗುವ ಡಿವಿಡೆಂಡ್‌ ಮತ್ತು ಅಂತಿಮವಾಗಿ ಸಿಗುವ ಮೌಲ್ಯವೃದ್ಧಿಅಥವಾ ಕ್ಯಾಪಿಟಲ್‌ ಗೈನ್‌ ಇರುತ್ತದೆ. ಗ್ರೋಥ್‌ಆಯ್ಕೆಯಲ್ಲಿ ಡಿವಿಡೆಂಡ್‌ ಇರದೆ ಲಾಭಾಂಶವು ಫ‌ಂಡಿನೊಳಗೆ ಬೆಳೆಯುತ್ತಾ ಹೋಗಿ ಅಂತಿಮವಾದ ಕ್ಯಾಪಿಟಲ್‌ಗೈನ್‌ ಮಾತ್ರ ಇರುತ್ತದೆ. ಹೂಡುವ ಸಂದರ್ಭದಲ್ಲಿ ಡಿವಿಡೆಂಡ್‌ಅಥವಾ ಗ್ರೋಥ್‌ ಆಯ್ಕೆಗಳನ್ನು ಮಾಡಿಕೊಳ್ಳಬೇಕು.

ಈ ಆದಾಯವನ್ನು ಅನುಸರಿಸಿ ಇನ್ಕಂ ಫ‌ಂಡುಗಳಿಗೆ ಕರ ಲೆಕ್ಕ ಹಾಕಲಾಗುತ್ತದೆ. ಡೆಟ್‌ ಫ‌ಂಡುಗಳಿಂದ ಬರುವ 
ನಿಯತ ಕಾಲಿಕ ಆದಾಯ (ಡಿವಿಡೆಂಡ್‌), ಡಿವಿಡೆಂಡ್‌ ಡಿಸ್ಟ್ರಿಬ್ಯೂಷನ್‌ ಟ್ಯಾಕ್ಸ್‌ (ಡಿಡಿಟಿ) ತೆತ್ತು ಬರುವ ಕಾರಣ ಅದು ಹೂಡಿಕೆದಾರರ ಕೈಯಲ್ಲಿ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಆದರೂ ಇಂತಹ ಆಯ್ಕೆಯಲ್ಲಿ ಶೇ. 28.84% ಡಿಡಿಟಿ (ಶೇ.25+12 ಸರ್ಚಾರ್ಜ್‌+3 ಸೆಸ್‌) ಗುಪ್ತವಾಗಿ ಇರುವುದನ್ನು ಗಮನಿಸಬಹುದು.

ಇನ್ಕಂ ಫ‌ಂಡ್‌ ಅನ್ನು ಅಂತಿಮವಾಗಿ ಮಾರುವಾಗ ಸಿಗುವ ದೀರ್ಘ‌ಕಾಲಿಕ (3 ವರ್ಷಕ್ಕೆ ಮೀರಿದರೆ) ಧನವೃದ್ಧಿ
ಅಥವಾ ಕ್ಯಾಪಿಟಲ್‌ ಗೈನ್ಸ್‌ ಟಾಕ್ಸ್‌ಕೂಡಾ ಶೇ.20 (ಇಂಡೇಕ್ಸೇಶನ್‌ ಬಳಿಕ) ಅನ್ವಯವಾಗುತ್ತದೆ.  ಇದು ಎಫ್ಡಿ/ಎಸ್‌ಬಿಗಳಿಗಿಂತ ಭಿನ್ನವಾಗಿರುತ್ತದೆ. ಇಂಡೆಕ್ಸೇಶನ್‌ ಪದ್ಧತಿಯಲ್ಲಿ ಮೂಲ ಹೂಡಿಕೆಯನ್ನು ಬೆಲೆಯೇರಿಕೆಯ ಪ್ರಮಾಣಕ್ಕೆ ಹಿಗ್ಗಿಸಿ ನೈಜವಾದ ಮೌಲ್ಯವೃದ್ಧಿಯ ಮೇಲೆ ಮಾತ್ರ ಕರ ಸಂದಾಯವಾಗುವಂತೆ ಇರುತ್ತದೆ.  ಎಫ್ಡಿಗಳಲ್ಲಿ ಬರುವಆದಾಯವನ್ನು ನೇರವಾಗಿ ನಿಮ್ಮಆದಾಯಕ್ಕೆ ಸೇರಿಸಿ ಅದರ ಮೇಲೆ ನಿಮ್ಮ ಸ್ಲಾಬ್‌ ಅನ್ವಯಕರ ಕಟ್ಟಬೇಕಾಗುತ್ತದೆ. 

ಉದಾ: 2010-11 ರಲ್ಲಿರೂ 1,00000 ಅನ್ನು ಇನ್ಕಂ ಫ‌ಂಡಿನಲ್ಲಿ ಹೂಡಿದರೆ ಮತ್ತು 3 ವರ್ಷಗಳ ಬಳಿಕ ಅಂದರೆ 2013-14 ರಲ್ಲಿ ಮಾರಿದಾಗರೂ 1,30,000 ಸಿಗುತ್ತದೆ ಎಂದಿಟ್ಟುಕೊಳ್ಳಿ. ಆವಾಗ ಮೂಲ ಹೂಡಿಕೆಯನ್ನು 2010-11 ರ ಬೆಲೆಯೇರಿಕೆ ಇಂಡೆಕ್ಸ್‌ 711 ಮತ್ತು 2013-14 ರ ಬೆಲೆಯೇರಿಕೆ ಇಂಡೆಕ್ಸ್‌ (ಸರಕಾರಿ ಪ್ರಕಟಿತ) 939 ಬಳಸಿ ಏರಿಸಿಕೊಳ್ಳಬೇಕು.  ಇದುರೂ 100000*(939/711) = 132068 ಆಗುತ್ತದೆ. ಈಗ ಬರುವುದು ಲಾಭವಲ್ಲ, ನಷ್ಟ. ಅಂದರೆ, ರೂ 130000-132068= ರೂ (2068) ನಷ್ಟ. ಲಾಭ ಇದ್ದಿದ್ದರೆ ಅದರ ಶೇ.20ರಷ್ಟು ಕರಕಟ್ಟ ಬೇಕಾಗುತ್ತಿತ್ತು. ಲಾಭವಿಲ್ಲದಕಾರಣ ಈ ಹೂಡಿಕೆಯ ಮೇಲೆ ಕರ ಇರುವುದಿಲ್ಲ. ಅಷ್ಟೇ ಏಕೆ? ಬೇರೆ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಇದ್ದರೆ ಅದರಿಂದ ಈ ನಷ್ಟವನ್ನು ಕಳೆಯಬಹುದು (ಸೆಟ್‌-ಆಫ್) ಆ ತೆರಿಗೆಯಲ್ಲೂ ರಿಯಾಯಿತಿ ಸಿಗಲಿದೆ. 

3 ವರ್ಷಕ್ಕಿಂತ ಕೆಳಗಿನ ಅಲ್ಪಕಾಲಿಕ ಹೂಡಿಕೆಯ ಸಂದರ್ಭದಲ್ಲಿ ಕ್ಯಾಪಿಟಲ್‌ಗೈನ್ಸ್‌ ಮೊತ್ತವನ್ನು ನೇರವಾಗಿ ಆ ವರ್ಷದ ಆದಾಯಕ್ಕೆ ಸೇರಿಸಿ ಅದರ ಮೇಲೆ ಸ್ಲಾéಬ್‌ಅನುಸಾರ ತೆರಿಗೆ ಕಟ್ಟಬೇಕಾಗುತ್ತದೆ. 
ಹಾಗಾಗಿ ಇನ್ಕಂ ಫ‌ಂಡುಗಳಲ್ಲಿ ಕನಿಷ್ಠ 3 ವರ್ಷಕಾಯುವುದುಉತ್ತಮ. 

ಇದೇಆದಾಯ ಎಫ್ಡಿಯಲ್ಲಿ ಬಂದಿರುತ್ತಿದ್ದರೆರೂ 32,068 ಆದಾಯವನ್ನು ನೇರವಾಗಿ ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ಅದರ ಮೇಲೆ ಶೇ.10, ಶೇ.20 ಅಥವಾ ಶೇ.30 – ನಿಮಗೆ ಅನ್ವಯವಾಗುವಂತೆ ಕರಕಟ್ಟ ಬೇಕಾಗುತ್ತಿತ್ತು. 

ಮೇಲಿನ ಟೇಬಲ್‌, ಐದು ಮುಖ್ಯ ಇನ್ಕಂ ಫ‌ಂಡುಗಳ ಸಾಧನೆಯನ್ನು ತೋರಿಸುತ್ತವೆ. ಪ್ರತಿಫ‌ಲ ಆಕರ್ಷಕವಾಗಿದೆ. ಆದರೆ ನೆನಪಿಡಿ, ಹಿಂದಿನ ಸಾಧನೆ ಮುಂದಿನ ಪ್ರತಿಫ‌ಲದ ಸಂಕೇತವಲ್ಲ. ಇನ್ಕಂ ಫ‌ಂಡುಗಳಲ್ಲಿ ಇಂಟರೆಸ್ಟ್‌ರೇಟ್‌ರಿಸ್ಕ್ಇರುತ್ತದೆ. ಅದನ್ನು ಬಲ್ಲವರು ಮಾತ್ರಇದರಲ್ಲಿ ಹೂಡಿಕೆ ಮಾಡಬಹುದು. 
 
ಡಿವಿಡೆಂಡ್‌ ಸ್ಟ್ರಿಪ್ಪಿಂಗ್‌
ಒಂದು ಮ್ಯೂಚುವಲ್‌ ಫ‌ಂಡ್‌ಅನ್ನು ಅದು ಡಿವಿಡೆಂಡ್‌ ನೀಡುವ ಸ್ವಲ್ಪ ಮೊದಲು ಖರೀದಿಸಿ ಡಿವಿಡೆಂಡ್‌ ಪಡೆದ ಕೂಡಲೇ ಮಾರಿಬಿಟ್ಟರೆ ಒಂದು ವರ್ಷದೊಳಗಿನ ಅdzಕಾಲಿಕ ಕ್ಯಾಪಿಟಲ್‌ ಲಾಸ್‌ ಉಂಟಾಗುತ್ತದೆ. 

ಅದು ಹೇಗೆಂದರೆ ಡಿವಿಡೆಂಡ್‌ ನೀಡಿದಾಕ್ಷಣ ಆ ಫ‌ಂಡಿನ ಆಂತರಿಕ ಮೌಲ್ಯ ಅಥವಾ ಎನ್‌.ಎ.ವಿಕೊಟ್ಟ ಡಿವಿಡೆಂಡಿ ನಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ. ಪಡೆದ ಡಿವಿಡೆಂಡಿಗೆ ಈ ಕೊಟ್ಟ ಕಾರಣ ಹೇಗೂ ಟಾಕ್ಸ್‌ಇಲ್ಲ;  ಸಾಲದ್ದಕ್ಕೆ ಕಾಪಿಟಲ್‌ ಲಾಸ್‌ ತೋರಿಸಿ ಬೇರೆಡೆ ಕಾಪಿಟಲ್‌ ಗೈನ್ಸ್‌ಅನ್ನು ಸೆಟ್‌ಆಫ್ ಮಾಡಿ ನೀಡಬೇಕಾದ ಒಟ್ಟು ಕರದಲ್ಲಿ ಉಳಿತಾಯವಾಗುತ್ತದೆ. ಈ ರೀತಿ ಡಿವಿಡೆಂಡ್‌ ಕಸಿದುಕೊಂಡ ಬಳಿಕ ಶೇರು/ಮ್ಯುಚುವಲ್‌ ಫ‌ಂಡ್‌ ಮಾರಿ ಬೇರೆಡೆ ಕಾಪಿಟಲ್‌ ಲಾಸ್‌ ತೋರಿಸುವುದಕೆ Rಡಿವಿಡೆಂಡ್‌ ಸ್ಟ್ರಿಪ್ಪಿಂಗ್‌ ಎಂದು ಹೆಸರು. ಇದರಿಂದ ಭಾರೀಕರ ಉಳಿತಾಯವಾಗುತ್ತದೆ. ಈ ಟೆಕ್ನಿಕ್‌ಅನ್ನು ಭಾರೀ ಉದ್ಯೋಗಪತಿಗಳು, ಅತಿ ಶ್ರೀಮಂತ ಹೂಡಿಕೆದಾರರೂ ನಿರಾಯಾಸವಾಗಿ ಮಾರುಕಟ್ಟೆಯಲ್ಲಿ ಮಾಡುತ್ತಾ ಇರುತ್ತಾರೆ. ಸಂದರ್ಭ ಬಂದಾಗ ನೀವೂ ಮಾಡಬಹುದು.

 ಉದಾಹರಣೆಗೆ, ನೀವು ಈ ವರ್ಷಕೊಂಡು ಆ ಮೇಲೆ ಕೊಟ್ಟ ಒಂದು ಕಂಪೆನಿಯ ಶೇರು ನಿಮಗೆ 1,000 ರೂಪಾಯಿಗಳ ಕ್ಯಾಪಿಟಲ್‌ ಗೈನ್ಸ್‌ ನೀಡಿದೆ ಎಂದಿಟ್ಟುಕೊಳ್ಳಿ.  ಕರನೀತಿ ಪ್ರಕಾರ ನೀವಿದನ್ನು ನಿಮ್ಮ ಈ  ವರ್ಷದ ಆದಾಯಕ್ಕೆ ಸೇರಿಸಿ ನಿಮ್ಮ ಅನ್ವಯ ದರದಲ್ಲಿ ತೆರಿಗೆ ಕಟ್ಟತಕ್ಕದ್ದು. ಅದು ಶೇ.30ರಷ್ಟು ಎಂದಿಟ್ಟು ಕೊಳ್ಳಿ. ಅಂದರೆ ರೂ300. ಇದನ್ನುತಪ್ಪಿಸಲು ನೀವೀಗ ಸುಮಾರು 300 ರೂ. ಡಿವಿಡೆಂಡ್‌ ಬರುವ ಇನ್ನೊಂದು ಶೇರು ಅಥವಾ ಮ್ಯೂಚುವಲ್‌ ಫ‌ಂಡನ್ನು ಡಿವಿಡೆಂಡ್‌ಘೋಷಣೆಆದ ಕೂಡಲೇ ಖರೀದಿಸಿ. ರೆಕಾರ್ಡ್‌ಡೇಟ್‌ ಆದ ಕೂಡಲೇ ಅದನ್ನು ಮಾರಿಬಿಡಿ. ಆಗ 300 ರೂ.ಗಳಷ್ಟು ಮಾರುಕಟ್ಟೆ ಇಳಿದಿರುತ್ತದೆ. ಆವಾಗ ನಿಮಗೆ 300 ರೂ. ಟ್ಯಾಕ್ಸ್‌ ರಹಿತ ಡಿವಿಡೆಂಡ್‌ ಸಿಗುತ್ತದೆ.  ಅಲ್ಲದೆ 300 ರೂಗಳ ಕ್ಯಾಪಿಟಲ್‌ ಲಾಸ್‌ ತೋರಿಸುತ್ತೀರಿ. ಈ ಲಾಸ್‌ನಿಂದಾಗಿ ಮೊದಲನೆಯ ವ್ಯವಹಾರದಲ್ಲಿ ಗಳಿಸಿದ 300 ರೂ.ಗಳ ಗೈನ್‌ ಮೆಲೆ ಟಾಕ್ಸ್‌ ನೀಡಬೇಕಾಗಿಲ್ಲ.

ಹೀಗೆ ತುಸು ಜಾಣ್ಮೆಯ ವ್ಯವಹಾರ ನಡೆಸಿದರೆ ಕ್ಯಾಪಿಟಲ್‌ ಗೈನ್ಸ್‌ಟಾಕ್ಸ್‌ನಿಂದ ಸುಲಭವಾಗಿ ನುಣುಚಿಕೊಳ್ಳಬಹುದು. ಇದುವೇ ಡಿವಿಡೆಂಡ್‌ ಸ್ಟ್ರಿಪ್ಪಿಂಗ್‌.

– ಜಯದೇವಪ್ರಸಾದ್‌ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next