Advertisement
ಹೌದು. ಇಂದಿನ ಆಧುನಿಕ-ಅನಾರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿಯಿಂದ ಅದೆಷ್ಟೋ ಮಹಿಳೆಯರು ಮದುವೆಯಾದರೂ ಮಕ್ಕಳಾಗುವ ಸೌಭಾಗ್ಯದಿಂದ ವಂಚಿತರಾಗುತ್ತಾರೆ. ಆರಂಭದಲ್ಲಿ ಪಿಸಿಓಡಿ, ಪಿಸಿಓಎಸ್ ಸಮಸ್ಯೆಯನ್ನು ನಿರ್ಲಕ್ಷಿಸಿ, ತಾಯ್ತನ ಪಡೆಯಲಾಗದ ಸ್ಥಿತಿಗೆ ಬರುತ್ತಾರೆ. ಅಂತಹ ಮಹಿಳೆಯರ ಪಾಲಿಗೆ, ಬಾಗಲಕೋಟೆಯ ಮಾನೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಲೈಫ್‌ನ್ಯೂ ಬಂಜೆತನ ನಿವಾರಣೆ ಹಾಗೂ ಪ್ರಣಾಳಶಿಶು ಕೇಂದ್ರ(ಉತ್ತರ ಕನಾಟಕದ ಪ್ರಥಮ ಐವಿಎಫ್ ಸೆಂಟರ್), ಬಂಜೆ ಎಂಬ ಮಹಿಳೆಯರ ಬರ ನೀಗಿಸುವ ವೈದ್ಯಕೀಯ ದೇಗುಲವಾಗಿ ಹೊರ ಹೊಮ್ಮಿದೆ ಎಂದರೆ ತಪ್ಪಲ್ಲ.
Related Articles
ಬಡವರಿಗೂ ಕೈಗೆಟಕುವ ದರದಲ್ಲೇ ಅತ್ಯಾಧುನಿಕ ಐಸಿಎಸ್‌ಐ ತಂತ್ರಜ್ಞಾನ ಚಿಕಿತ್ಸೆ ಸೇರಿದಂತೆ ಬಂಜೆತನ ನಿವಾರಣೆಗೆ ಎಲ್ಲ ಚಿಕಿತ್ಸೆಗಳೂ ದೊರೆಯುತ್ತಿವೆ. ಇದರಿಂದ ಕೊಪ್ಪಳ, ಗದಗ, ವಿಜಯಪುರ, ಬೆಳಗಾವಿ ಹೀಗೆ ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಐವಿಎಫ್ ಚಿಕಿತ್ಸೆ ಪಡೆಯಲು ಮಹಾನಗರಗಳಿಗೆ ತೆರಳುತ್ತಿದ್ದ ಜನ ಬಾಗಲಕೋಟೆಯ ಡಾ|ಮಾನೆ ಆಸ್ಪತ್ರೆಗೆ ಬರುತ್ತಿದ್ದಾರೆ. ಅಷ್ಟೇ ಏಕೆ ಡಾ| ವೈಶಾಲಿ ಅವರ ಬಳಿ ಬೆಂಗಳೂರಿನಿಂದಲೂ ದಂಪತಿ ಬಂದು ಚಿಕಿತ್ಸೆ ಪಡೆಯುವ ಸಂತಾನ ಪಡೆದ ಉದಾಹರಣೆಗಳಿವೆ.
Advertisement
ಇತ್ತೀಚೆಗೆ 34 ವರ್ಷದ ಮಹಿಳೆಯೊಬ್ಬರು ಮಾನೆ ಆಸ್ಪತ್ರೆಗೆ ಆಗಮಿಸಿದ್ದರು. 103 ಕೆಜಿ ತೂಕ ಹೊಂದಿದ್ದ ಮಹಿಳೆ ರಕ್ತದೊತ್ತಡ, ಮಧುಮೇಹ ಹಾಗೂ ಥೈರಾಯ್ಡ ಸಮಸ್ಯೆ ಹೊಂದಿದ್ದರು. ಅಂಡಾಣು ಉತ್ಪತ್ತಿಯಲ್ಲೂ ತೊಂದರೆ ಅನುಭವಿಸುತ್ತಿದ್ದ ಮಹಿಳೆಯ ಆರೋಗ್ಯದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ ಡಾ|ವೈಶಾಲಿ, ಬಂಜೆತನ ನಿವಾರಣೆಗೆ ಸೂಕ್ತ ಚಿಕಿತ್ಸೆ ನೀಡಿದರು. ಸದ್ಯ ಮಹಿಳೆ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಹಿಳೆಯೀಗ ತಾಯ್ತನ ಎಂಬ ಸಾರ್ಥಕ ಬದುಕು ಅನುಭವಿಸುತ್ತಿದ್ದಾಳೆ.
ಲಿಂಗಸಗೂರಿನಿಂದ ಬಂದಿದ್ದ ಇನ್ನೋರ್ವ ಮಹಿಳೆ ಎರಡು ಮಕ್ಕಳ ತಾಯಿಯಾಗಿದ್ದರು. ಈ ಮಹಿಳೆ ಸಂತಾನವಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಅನಾರೋಗ್ಯ ಕಾರಣದಿಂದ ಒಂದು ಮಗು ಅಸು ನೀಗಿತ್ತು. ಇನ್ನೊಂದು ಮಗುವಿನ ಅಪೇಕ್ಷೆಯಿಂದ ಮಾನೆ ಆಸ್ಪತ್ರೆಗೆ ಬಂದಿದ್ದ ಈ ಮಹಿಳೆಗೆ ಫೆಲೊಪಿನ್‌ಟ್ಯೂಬ್ ಜೋಡಿಸಿ ಐವಿಎಫ್ ಚಿಕಿತ್ಸೆ ನೀಡಿದ ನಂತರ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ.
ಬಡವರ ಕಷ್ಟಕ್ಕೆ ಮಿಡಿಯುವ ವೈದ್ಯ ದಂಪತಿ: ಗರ್ಭಕೋಶ ತೆಗೆಸಿಕೊಳ್ಳುವಂತೆ ಸಲಹೆ ನೀಡಲಾಗಿದ್ದ ಮಹಿಳೆಗೂ ಡಾ|ವೈಶಾಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಬಂಜೆತನ ನಿವಾರಿಸಿದ್ದಾರೆ. ಒಂಬತ್ತು ಬಾರಿ ಗರ್ಭಪಾತವಾಗಿದ್ದ ಬಡ ಮಹಿಳೆಗೆ ಚಿಕಿತ್ಸೆ ನೀಡಿ ಎಂಟು ತಿಂಗಳವರೆಗೆ ಆಕೆಯನ್ನು ಉಚಿತವಾಗಿ ಆಸ್ಪತ್ರೆಯಲ್ಲೇ ಇಟ್ಟುಕೊಂಡು ಆರೈಕೆ ಮಾಡಿದ್ದಾರೆ. ಗರ್ಭ ಚೀಲದಲ್ಲೇ ಎರಡು ಬಾರಿ ಮಗು ತೀರಿಕೊಂಡಿದ್ದ ಮಹಿಳೆಯನ್ನು ಡಾ|ವೈಶಾಲಿ ಮತ್ತು ಡಾ|ಶೇಖರ ಮಾನೆ ಇವರು ಐದಾರು ತಿಂಗಳು ಉಚಿತವಾಗಿ ಆಸ್ಪತ್ರೆಯಲ್ಲಿಟ್ಟುಕೊಂಡು ಯಶಸ್ವಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಒಬ್ಬ ಮಹಿಳೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೂ ಮಾನೆ ಆಸ್ಪತ್ರೆಯಲ್ಲಿ ನಡೆದಿದೆ. ಅದೆಷ್ಟೋ ಪ್ರಕರಣಗಳಲ್ಲಿ ಬೇರೆ ಆಸ್ಪತ್ರೆಯಲ್ಲಿ ಐವಿಎಫ್ ಚಿಕಿತ್ಸೆ ಪಡೆದರೂ ಯಶಸ್ವಿಯಾಗದ ಮಹಿಳೆಯರು ಮಾನೆ ಆಸ್ಪತ್ರೆಗೆ ಬಂದು ಕೇವಲ ಐಯುಐ ಚಿಕಿತ್ಸೆ ಮೂಲಕ ಸಂತಾನ ಭಾಗ್ಯ ಪಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂತಾನವಿಲ್ಲದ 300ಕ್ಕೂ ಹೆಚ್ಚು ಮಹಿಳೆಯರಿಗೆ ಐವಿಎಫ್ ಚಿಕಿತ್ಸೆ ಮೂಲಕ ಬಂಜೆಯರೆಂಬಬದುಕಿನ ಬರ ದೂರ ಮಾಡಿದ್ದಾರೆ. ಇಲ್ಲಿ ಹೆರಿಗೆಯಾದ ನವಜಾತ ಶಿಶುಗಳಿಗೆ ಚಿಕ್ಕಮಕ್ಕಳ ತಜ್ಞ ಡಾ|ಶೇಖರ ಮಾನೆ ಹಾಗೂ ತಂಡದವರು ಎನ್‌ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಾರೆ. ಅವಧಿ ಪೂರ್ವ ಜನಿಸಿದ ಕೇವಲ ಒಂದು ಕೆ.ಜಿ ತೂಕವಿರುವ ಶಿಶುಗಳ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. ದಂಪತಿಗಳಿಗೆ ಕೌನ್ಸೆಲಿಂಗ್ ಮೂಲಕ ತಿಳಿ ಹೇಳಿ ಅದನ್ನು ಬಗೆಹರಿಸಿ ಗಂಭೀರ ಸಮಸ್ಯೆಗಳನ್ನು ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ಬಗೆಹರಿಸಿದ ನಂತರ ಅಗತ್ಯಕ್ಕೆ ಅನುಗುಣವಾಗಿ ಐಯುಐ, ಐವಿಎಫ್ ಚಿಕಿತ್ಸೆ ನೀಡಲಾಗುತ್ತಿದೆ. ಇದು ಬಾಗಲಕೋಟೆ ಮಾನೆ ಆಸ್ಪತ್ರೆಯ ಹೆಮ್ಮೆಯ ಕಾರ್ಯ ಎಂದರೆ ತಪ್ಪಲ್ಲ. ಬಂಜೆತನಕ್ಕೆ ಕಾರಣಗಳೇನು?
ಯುವ ದಂಪತಿಗಳು ಪ್ರಸೂತಿ ತಜ್ಞರನ್ನು ಭೇಟಿಯಾಗಿ ಮುಂದಿನ ನಿರ್ಧಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಇದರಿಂದ ಗಂಡು ಅಥವಾ ಹೆಣ್ಣಿನ ಕುಟುಂಬದಲ್ಲಿ ಯಾವುದೇ ಅನುವಂಶಿಕ ಸಮಸ್ಯೆಗಳಿದ್ದರೆ ಪಿಜಿಟಿಯಂಥ ಪರೀಕ್ಷೆ ಮೂಲಕ ಸಂತಾನ ಪಡೆಯುವ ಮೊದಲೇ ಪರಿಹರಿಸಲು ಸಾಧ್ಯವಾಗುತ್ತದೆ. ವಿಟಮಿನ್ ಬಿ 12, ಫಾಲಿಕ್ ಎಸಿಡ್ ಕೊರತೆ ಎದುರಿಸುತ್ತಿದ್ದ ಮಹಿಳೆ, ಗರ್ಭ ಧರಿಸಿದರೆ ಮಗುವಿನ ಮೆದುಳು ಅಥವಾ ಬೆನ್ನುಹುರಿ ಸರಿಯಾಗಿ ಬೆಳೆಯದಿರುವ ಸಾಧ್ಯತೆ ಇರುತ್ತವೆ. ವೈದ್ಯರ ಸಲಹೆಯಿಂದ ಗರ್ಭಿಣಿಯಾಗುವ 3 ತಿಂಗಳು ಮೊದಲಿನಿಂದಲೇ ಫಾಲಿಕ್ ಎಸಿಡ್ ಮಾತ್ರೆ ಪಡೆದರೆ ಈ ಸಮಸ್ಯೆ ಸಣ್ಣದಿರುವಾಗಲೇ ಸರಿಪಡಿಸಿ ಆರೋಗ್ಯಕರ ಮಗುವಿಗೆ ಜ®¾ ನೀಡಲು ಸಾಧ್ಯ. ಮೊಬೈಲ್ ಬಳಕೆ ಅಥವಾ ಡಿಜಿಟಲ್ ಎಡಿಕÒನ್ ಹೆಚ್ಚಾಗಿದ್ದರಿಂದ ಗಂಡು-ಹೆಣ್ಣಿನ ನಡುವೆ ಸಂಬಂಧಗಳು ಸರಿಯಾಗಿ ನಡೆಯುತ್ತಿಲ್ಲ. ಇದರೊಂದಿಗೆ ಸತÌರಹಿತ ಆಹಾರ, ವ್ಯಾಯಾಮ ರಹಿತ ಜೀವನಶೈಲಿ, ಒತ್ತಡ, ಅಧ್ಯಾತ್ಮದಿಂದ ದೂರ ಉಳಿಯುವುದು ಕೂಡ ಬಂಜೆತನಕ್ಕೆ ಕಾರಣವಾಗುತ್ತಿದೆ. ಐವಿಎಫ್ ಬಗ್ಗೆ ಬಹುತೇಕರಿಗೆ ತಪ್ಪು ತಿಳಿವಳಿಕೆ ಇದೆ. ಗೂಗಲ್ ನೋಡಿ ಆಸ್ಪತ್ರೆಗೆ ಬರುವ ಇಂದಿನ ಅನೇಕ ದಂಪತಿಗಳು ಸಹಜವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಿದ್ದರೂ ಐವಿಎಫ್ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಹೇಳುತ್ತಾರೆ. ಚಿಕಿತ್ಸೆಗಳ ಬಗ್ಗೆದಂಪತಿ ನಿರ್ಧರಿಸಬಾರದು. ವೈದ್ಯರು ನಿರ್ಧರಿಸಬೇಕು. ಅನುವಂಶಿಕ ಸಮಸ್ಯೆಗಳಿದ್ದಾಗ ಐವಿಎಫ್ ಚಿಕಿತ್ಸೆಯಲ್ಲಿ ಡೋನರ್‌ನಿಂದ ಅಂಡಾಣು ಅಥವಾ ವೀರ್ಯಾಣು ಪಡೆಯಲಾಗುತ್ತದೆ. ಈ ಬಗ್ಗೆ ಕುಟುಂಬದವರೊಂದಿಗೆ ಮೊದಲೇ ಚರ್ಚಿಸಲಾಗುತ್ತದೆ. ಸಾಮಾನ್ಯ ಹೆರಿಗೆಯಲ್ಲಿ ಜನಿಸುವ ಮಗು ಮತ್ತು ಐವಿಎಫ್ ಮೂಲಕ ಜನಿಸುವ ಮಗುವಿನ ನಡುವೆ ಯಾವುದೇ ವ್ಯತ್ಯಾಸವೂ ಇರಲ್ಲ. ಮಾದರಿ ವೈದ್ಯ ದಂಪತಿ
ಡಾ|ಶೇಖರ ಮಾನೆ ಮತ್ತು ಡಾ|ವೈಶಾಲಿ ಮಾನೆ ಅವರನ್ನು ಮಾದರಿ ವೈದ್ಯ ದಂಪತಿ ಎಂದರೂ ತಪ್ಪಲ್ಲ. ಡಾ|ಶೇಖರ ಅವರು, ಚಿಕ್ಕಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನವಜಾತ ಶಿಶು ತೀವ್ರ ನಿಗಾಘಟಕ(ಎನ್‌ಐಸಿಯು)ವಿದೆ. 37 ವಾರಗಳಿಗಿಂತ ಮೊದಲೇ ಜನಿಸುವ ಅಥವಾ ಎರಡು ಕೆಜಿಗಿಂತ ಕಡಿಮೆ ತೂಕವಿರುವ ನಾಜೂಕು ಹಸುಳೆಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಿದ ಅನುಭವ ಹೊಂದಿರುವ ಡಾ|ಶೇಖರ, ಕಳೆದ 12 ವರ್ಷಗಳಿಂದ ಪ್ರತಿದಿನ ಮಧ್ಯಾಹ್ನ 2ರಿಂದ 3ರವರೆಗೆ ಎಲ್ಲ ವರ್ಗದ ಮಕ್ಕಳಿಗೆ ಉಚಿತ ತಪಾಸಣೆ ನಡೆಸುತ್ತಿದ್ದಾರೆ. ಅನೇಕ ಜವಾಬ್ದಾರಿಗಳೊಂದಿಗೆ ಮೂಲಕ ಸಾಮಾಜಿಕ, ರಾಜಕೀಯ, ಸಂಘಟನಾತ್ಮಕ ಸೇವೆಗಳಲ್ಲೂ ಗುರುತಿಸಿಕೊಂಡಿದ್ದಾರೆ.