Advertisement

ನೈಜ ಘಟನೆ ಸುತ್ತ ಬೆಸ್ಟ್‌ ಫ್ರೆಂಡ್ಸ್‌ 

06:00 AM Dec 28, 2018 | |

“ಸಲಿಂಗ ಕಾಮಿಗಳು ಹಾಗೂ ಲೈಂಗಿಕ ಕಾರ್ಯಕರ್ತರ ಬಗ್ಗೆ ಸಮಾಜ ಅಸಹ್ಯವಾಗಿ ನೋಡುತ್ತಿದೆ. ಆ ವರ್ಗದವರನ್ನು ಸಮಾಜ ದೂಷಿಸದೆ ಅವರಿಗೊಂದು ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು. ಆ ನಿಟ್ಟಿನಲ್ಲಿ ಅರಿವು ಮೂಡಿಸುವಂತಹ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಾಗಿದೆ…’

Advertisement

– ಹೀಗೆ ಹೇಳುವ ಮೂಲಕ ತಮ್ಮ ಚಿತ್ರದೊಳಗಿರುವ ಅಂಶವನ್ನು ಹೇಳುತ್ತಾ ಹೋದರು ನಿರ್ದೇಶಕ ಟೇ.ಶಿ.ವೆಂಕಟೇಶ್‌. ಅವರು ಹೇಳಿದ್ದು, “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದ ಬಗ್ಗೆ. ಚಿತ್ರ ಜನವರಿ 4 ರಂದು ತೆರೆಗೆ ಬರುತ್ತಿದೆ. ಈ ಬಾರಿ ನೈಜ ಘಟನೆ ಇಟ್ಟುಕೊಂಡು ಮನಮಿಡಿಯುವ ಕಥೆ ಹೆಣೆಯುವ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕರು. ಎಲ್ಲಾ ಸರಿ, ಈ ಫ್ರೆಂಡ್ಸ್‌ ಕಥೆ ಏನು? ಈ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕ ಟೇ.ಶಿ. ವೆಂಕಟೇಶ್‌, “ಇದು 2012 ರಲ್ಲಿ ಹಾಸನದಲ್ಲಿ ನಡೆದ ಘಟನೆ. ಇಬ್ಬರು ಗೆಳತಿಯರ ನಡುವೆ ಮನಸ್ತಾಪ ಮೂಡಿ, ಒಬ್ಟಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಲ್ಲಿದ್ದಾಳೆ. ಆ ಘಟನೆ ಇಟ್ಟುಕೊಂಡು “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರ ಮಾಡಿದ್ದೇನೆ. ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರ ಮಾಡುವ ಮುನ್ನ, ವಕೀಲರು, ಸಂಬಂಧಿಸಿದ ಕೆಲವರನ್ನು ಸಂಪರ್ಕಿಸಿ, ವಿಷಯ ಕಲೆಹಾಕಿ ಅದಕ್ಕೊಂದು ಕಥೆ ಹೆಣೆದು ಚಿತ್ರ ಮಾಡಿದ್ದು ಈಗ ಖುಷಿ ಕೊಟ್ಟಿದೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಶೇ.50 ರಷ್ಟು ನೈಜತೆ ಇಲ್ಲಿದೆ. ಉಳಿದದ್ದು ಕಾಲ್ಪನಿಕ. ಚಿತ್ರದಲ್ಲಿ ಶೋಷಿತ ವರ್ಗದವರ ಬದುಕು ಮತ್ತು ಅವರ ಭಾವನೆಗಳನ್ನು ಹೊರಹಾಕುವ ಪ್ರಯತ್ನ ಮಾಡಲಾಗಿದೆ. ಇಬ್ಬರು ಹೆಣ್ಣುಮಕ್ಕಳು ಸಲಿಂಗಿಗಳಾಗಿ ಬದುಕುತ್ತಿರುವ ಸತ್ಯ ಘಟನೆ ಆಧರಿಸಿ ಮಾಡಿರುವ ಚಿತ್ರದಲ್ಲಿ ಮನಕಲಕುವ ಕೆಲ ಅಂಶಗಳಿವೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ನಿರ್ದೇಶಕರ ಮಾತು.

ಚಿತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯ ಶೆಟ್ಟಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಶಾ, ಸುಮತಿ ಪಾಟೀಲ್‌ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಲಯನ್‌ ಎಸ್‌.ವೆಂಕಟೇಶ್‌ ಅವರು ನಿರ್ಮಾಪಕರಾಗಿದ್ದಾರೆ. ಹೊಸ ವರ್ಷದ ಮೊದಲ ವಾರದಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next