Advertisement

ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ; ಹೊಸ ದಾಖಲೆ

01:46 PM Nov 06, 2020 | keerthan |

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಇದರೊಂದಿಗೆ ಮತ್ತೊಂದು ಬಾರಿ ಕಪ್ ಗೆಲ್ಲಲು ಫೈನಲ್ ತಲುಪಿದೆ. ಮುಂಬೈ ಬೌಲರ್ ಗಳ ಬಿಗು ದಾಳಿಗೆ ಡೆಲ್ಲಿ ಬ್ಯಾಟ್ಸಮನ್ ಗಳು ಚೆಲ್ಲಾಪಿಲ್ಲಿಯಾಗಿದ್ದು, ಭಾರಿ ಅಂತರದ ಸೋಲನುಭವಿಸಿತು.

Advertisement

ಡೆಲ್ಲಿ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಐಪಿಎಲ್ ಇತಿಹಾಸದಲ್ಲಿ ತನ್ನ ಸರ್ವಶ್ರೇಷ್ಠ ಪ್ರದರ್ಶನ ನೀಡಿದರು. ನಾಲ್ಕು ಓವರ್ ಬಾಲ್ ಹಾಕಿದ ಜಸ್ಪ್ರೀತ್ ಬುಮ್ರಾ ಕೇವಲ 14 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಅದರಲ್ಲೂ ಒಂದು ಓವರ್ ಮೇಡನ್ ಮಾಡಿದ್ದರು, ಆ ಮೇಡನ್ ಓವರ್ ನಲ್ಲಿ ಎರಡು ವಿಕೆಟ್ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್ ನ ಇನ್ ಫಾರ್ಮ್ ಆಟಗಾರರಾದ ಶಿಖರ್ ಧವನ್, ನಾಯಕ ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿನಸ್ ಮತ್ತು ಡೇನಿಯಲ್ ಸ್ಯಾಮ್ಸ್ ವಿಕೆಟ್ ಗಳನ್ನು ಬುಮ್ರಾ ಕಬಳಿಸಿದರು. ಮುಂಬೈ ಗೆ ದೊಡ್ಡ ಗೆಲುವು ತಂದುಕೊಂಡುವಲ್ಲಿ ಸಹಾಯಕವಾದರು.

ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಒಂದು ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆಯನ್ನು ಬುಮ್ರಾ ಡೆಲ್ಲಿ ವಿರುದ್ಧ ನೀಡಿದರು. ಈ ಹಿಂದೆ 20 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದು ಬುಮ್ರಾ ಅತ್ಯುತ್ತಮ ಸಾಧನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next