ಅ್ಯಂಟಿಗುವಾ: ಭಾರತೀಯ ಮಹಿಳಾ ಏಕದಿನ ಕ್ರಿಕೆಟ್ ತಂಡದ ಉಪನಾಯಕಿ ಹರ್ಮನ್ ಪ್ರೀತ್ ಕೌರ್ ವೆಸ್ಟ್ ಇಂಡೀಸ್ ವಿರುದ್ಧ ಹಿಡಿದ ಅದ್ಭುತ ಕ್ಯಾಚ್ ಒಂದು ಈಗ ವೈರಲ್ ಆಗಿದೆ.
ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ತಡರಾತ್ರಿ ನಡೆದ ಏಕದಿನ ಪಂದ್ಯದಲ್ಲಿ ಹರ್ಮನ್ ಈ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ಕೌರ್ ಈ ಅದ್ಭುತ ಕ್ಯಾಚ್ ಹಿಡಿದರು.
ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದವರು ವಿಂಡೀಸ್ ನಾಯಕಿ ಸ್ಟೀಫಾನಿ ಟೇಲರ್. 94 ರನ್ ಗಳಿಸಿ ಆಡುತ್ತಿದ್ದರು. ಶತಕಕ್ಕೆ ಆರು ರನ್ ಅಗತ್ಯವಿತ್ತು. ಟೇಲರ್ ಬಾರಿಸಿದ ಸಿಕ್ಸರ್ ಬಾನೆತ್ತರ ಚಿಮ್ಮಿತ್ತು, ಲಾಂಗ್ ಅನ್ ನಲ್ಲಿ ಇನ್ನೇನು ಸಿಕ್ಸರ್ ಗೆರೆಯ ಆಚೆ ಹೋಗಿ ಚೆಂಡು ಬೀಳಬೇಕು ಎನ್ನುವಾಗ ಚಿಗರೆಯಂತೆ ಜಿಗಿದ ಹರ್ಮನ್ ಅದ್ಭುತವಾಗಿ ಚೆಂಡನ್ನು ಹಿಡಿದರು.
ಹರ್ಮನ್ ಕ್ಯಾಚ್ ಸಾಹಸದಿಂದ ವಿಂಡೀಸ್ ನಾಯಕಿ ಟೇಲರ್ 94 ರನ್ ಔಟ್ ಆದರು. ಆದರೂ ಭಾರತ ತಂಡ ಒಂದು ರನ್ ನಿಂದ ಸೋಲುನುಭವಿಸಿತು.