Advertisement
ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳ ಹಿಂದೆ ಕೆಇಬಿ ಅಥವಾ ಬೆಸ್ಕಾಂ ಕಚೇರಿ, ನೌಕರರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದ ಲಕ್ಷಾಂತರ ರೂ. ಮೌಲ್ಯದ ಜಾಗ ಅನಾಥವಾಗಿದ್ದು, ಕಟ್ಟಡ ಪಾಳುಬಿದ್ದಿದ್ದು, ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ.
Related Articles
Advertisement
ಗ್ರಾಮ ಪಂಚಾಯಿತಿ ಕೇಂದ್ರದ ಸಮೀಪ ಮತ್ತು ಊರಿನ ಮಧ್ಯೆ ಭಾಗದಲ್ಲಿರುವ ಕೆಇಬಿ ಕಚೇರಿ ಮತ್ತು ವಸತಿಗೃಹಗಳು ಯಾರಿಗೂ ಬೇಡವಾದ ಸ್ಥಿತಿಗೆ ತಲುಪಿದೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿಯುವ ಹಂತಕ್ಕೆ ತಲುಪಿದೆ.
ಗ್ರಾಪಂಗೆ ಬರುವ ಗ್ರಾಮಸ್ಥರು ಕೆಇಬಿ ಹಳೆ ಕಚೇರಿ ಮತ್ತು ವಸತಿಗೃಹಗಳನ್ನು ನೋಡಿ ಭೂತಬಂಗಲೆಯಂತಿರುವ ಕಟ್ಟಡಗಳನ್ನು ಯಾರು ನಿರ್ವಹಣೆ ಮಾಡುತ್ತಿಲ್ಲವೇ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಕಚೇರಿಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಉತ್ಸಾಹ ತೋರಿಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಸ್ತಿತ್ವದಲ್ಲಿರುವ ಹಳೆ ಕಚೇರಿಯ ಕಟ್ಟಡಗಳ ಸ್ಥಿತಿಗತಿ ಮತ್ತು ವಸತಿಗೃಹಗಳ ಪರಿಸ್ಥಿತಿಯನ್ನು ಅವಲೋಕಿಸಲು ಮುಂದಾಗಬೇಕಾಗಿದೆ. ಹೊಸದು ನಿರ್ಮಾಣವಾದ ಮೇಲೆ ಹಳೆ ಕಚೇರಿಗಳನ್ನು ಕಡೆಗಣಿಸುವ ನೀತಿ ಬದಲಾಗದಿದ್ದರೆ ಸರ್ಕಾರದ ಮೂಲ ಉದ್ದೇಶಗಳಿಗೆ ಬೆಲೆ ಇಲ್ಲದಂತಾಗುತ್ತದೆ.
ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಶಿಥಿಲಾವಸ್ಥೆಯಲ್ಲಿರುವ ಕೆಇಬಿ ಹಳೆ ಕಚೇರಿ ಮತ್ತು ವಸತಿಗೃಹಗಳ ಕಾಯಕಲ್ಪಕ್ಕೆ ಮುಂದಾಗಬೇಕಿದೆ.
● ಎಂ.ಎ.ತಮೀಮ್ ಪಾಷ