Advertisement
ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಅಲ್ಲಲ್ಲಿ ಘಟಕ ನಿರ್ಮಾಣ ಕಾರ್ಯ ಇನ್ನೂ ಅಂತಿಮ ಹಂತದಲ್ಲಿರುವುದೇ ಇದಕ್ಕೆ ಕಾರಣ. ಕೆಆರ್‌ಡಿಐಎಲ್ ವತಿಯಿಂದ ಉಭಯ ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಬಹುತೇಕ ಘಟಕಗಳು ಪೂರ್ಣಗೊಂಡರೂ ಕಾರ್ಯಾರಂಭದ ಹಂತದಲ್ಲಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿ ಯಲ್ಲಿ ಖಾಸಗಿ ನೇತೃತ್ವದಲ್ಲಿ ನಡೆಯುವ ಘಟಕಗಳು ಇನ್ನೂ ನೆಲಮಟ್ಟದಿಂದ ಮೇಲೇರಿಲ್ಲ. ಆದರೆ ಕಾಮಗಾರಿಯನ್ನು ತ್ವರಿತಗೊಳಿಸಿದರೆ ಅಂತಿಮ ಹಂತದಲ್ಲಿರುವ ಘಟಕಗಳನ್ನು ಸೇವೆಗೆ ಬಳಸಲು ಸಾಧ್ಯವಿದೆ.
2015-16ನೇ ಸಾಲಿನಲ್ಲಿ ಸರಕಾರ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲುಸ್ತು ವಾರಿಯಲ್ಲಿ ಖಾಸಗಿ ಮತ್ತು ಸರಕಾರಿ ಸಹ ಭಾಗಿತ್ವದಲ್ಲಿ ಶುದ್ಧ ನೀರು ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಗ್ರಾ.ಪಂ. ವ್ಯಾಪ್ತಿಯ ಜನಸಂದಣಿ ಪ್ರದೇಶದಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಯೋಜನೆ ಇದಾಗಿತ್ತು. ಕಳೆದ ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು.
Related Articles
Advertisement
ಗುತ್ತಿಗೆದಾರರಿಗೆ ನೋಟಿಸ್ಪುತ್ತೂರಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ 16 ಘಟಕಗಳ ನಿರ್ಮಾಣಕ್ಕೆ ಎಪ್ರಿಲ್‌ನಲ್ಲಿ ಟೆಂಡರ್ ಆಗಿತ್ತು. ಬೆಂಗಳೂರು ಮೂಲದ ಪಾನೀಶಿಯ ವರ್ಡ್ ವೈಯ್ಡ ಕಂಪೆನಿ ಗುತ್ತಿಗೆ ಪಡೆದಿತ್ತು. 16ರಲ್ಲಿ ಎರಡು ಪೂರ್ಣಗೊಂಡಿದ್ದು, ಉಳಿದವು ಅಡಿಪಾಯದ ಹಂತದಲ್ಲೇ ಇವೆ. ಹೀಗಾಗಿ ವಿಳಂಬದ ಕುರಿತಂತೆ ಸಂಬಂಧಿಸಿದ ಗುತ್ತಿಗೆ ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿ ಸುರೇಶ್. ಖಾಸಗಿ, ಸರಕಾರಿ ಸಹಭಾಗಿತ್ವ
ಪುತ್ತೂರು ಮತ್ತು ಸುಳ್ಯದಲ್ಲಿ ಒಟ್ಟು 96 ಘಟಕ ನಿರ್ಮಾಣದ ಗುರಿ ನಿಗದಿಪಡಿಸ ಲಾಗಿತ್ತು. ಪ್ರತಿ ಘಟಕಕ್ಕೆ ಹತ್ತು ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿತ್ತು. ಉಭಯ ತಾಲೂಕಿನಲ್ಲಿ ಕೆಆರ್‌ಡಿಐಎಲ್, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮೇಲುಸ್ತುವಾರಿಯಲ್ಲಿ ಪ್ರತ್ಯೇಕವಾಗಿ ಘಟಕ ನಿರ್ಮಾಣ ಕಾರ್ಯ ನಡೆದಿತ್ತು. ವಿದ್ಯುತ್, ನೀರಿನ ಸಮಸ್ಯೆ!
ಕಾರ್ಯಾರಂಭಕ್ಕೆ ವಿದ್ಯುತ್ ಲೋಡ್‌ಶೆಡ್ಡಿಂಗ್ ಅಡ್ಡಿಯಾದರೆ, ಇತ್ತ ನೀರಿನ ಮೂಲ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಅನ್ನುವುದು ಖಚಿತವಿಲ್ಲ. ಹಾಗಾಗಿ ಘಟಕ ಪೂರ್ಣಗೊಂಡರೂ ಪ್ರಯೋಜನಕ್ಕೆ ಸಿಗು ವುದು ಕಷ್ಟ. ಈಗ ಪ್ರಾರಂಭದ ವಿಳಂಬಕ್ಕೂ ವಿದ್ಯುತ್, ನೀರಿನ ಸಮಸ್ಯೆ ಕಾರಣ ಆಗಿದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯ. ಪುತ್ತೂರು, ಸುಳ್ಯ ತಾಲೂಕುಗಳ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಸರಕಾರ ನಿರ್ಮಿಸುತ್ತಿರುವ ಶುದ್ಧ ನೀರಿನ ಘಟಕಗಳು ಬಹುತೇಕ ಪೂರ್ಣಗೊಂಡಿದೆ. ಆದರೆ ಕಾರ್ಯಾರಂಭದ ಹಂತ ತಲುಪದ ಕಾರಣ, ಈ ಬಾರಿ ಬೇಸಗೆಯಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆ ವಿರಳ. ಕಾರ್ಯಾರಂಭ ಹೇಗೆ !
ಘಟಕದ ಯಂತ್ರಕ್ಕೆ ಒಂದು ರೂ. ನಾಣ್ಯ ಹಾಕಿದರೆ ಶುದ್ಧೀಕೃತ ಆರೇಳು ಲೀ. ನೀರು ಸಿಗುತ್ತದೆ. ಪ್ರತಿ ಲೀಟರಿಗೆ 15 ಪೈಸೆ ಖರ್ಚು ಬೀಳುತ್ತದೆ. ಎರಡು ವರ್ಷದ ಅನಂತರ ದರ ಪರಿಷ್ಕರಣೆ ಆಗುತ್ತದೆ. ಘಟಕ ನಿರ್ಮಾಣಕ್ಕೆ ಮಾನದಂಡವೇನೆಂದರೆ, ಗ್ರಾ.ಪಂ ನಲ್ಲಿ ನೀರಿನ ಮೂಲ ಇರಬೇಕು ಮತ್ತು 30×30 ಅಡಿ ಸ್ಥಳವನ್ನು 15 ವರ್ಷ ಖಾಸಗಿ ಕಂಪೆನಿಗೆ ಲೀಸ್ ನೀಡಬೇಕು ಎಂಬಿತ್ಯಾದಿ ಷರತ್ತು ವಿಧಿಸಲಾಗಿತ್ತು. ಬೇಸಗೆ ಕಾಲದಲ್ಲಿ ಇದು ಪ್ರಯೋಜನಕಾರಿಯೆಂದೂ ಭಾವಿಸಲಾಗಿತ್ತು.