Advertisement
ಬರ್ಮೂಡ ಟ್ರೈಯಾಂಗಲ್ ಈ ಹೆಸರನ್ನು ಕೇಳದವರು ಬಹುಶಃ ಜಗತ್ತಿನಲ್ಲಿ ಯಾರೂ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಈ ಸ್ಥಳದ ಬಗ್ಗೆ ಅನೇಕ ಲೇಖನಗಳು. ಕಿರು ಚಿತ್ರಗಳು. ಚಲನಚಿತ್ರಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರು ವೀಕ್ಷೀಸಿರುತ್ತಾರೆ ಹಾಗೂ ಈ ಸ್ಥಳದ ಬಗ್ಗೆ ಭಯವನ್ನು ಸಹ ಹೊಂದಿರುತ್ತಾರೆ.ಅಂದ ಹಾಗೆ ಬರ್ಮೂಡ ಟ್ರೈಯಾಂಗಲ್ ಪ್ರದೇಶವು ಉತ್ತರ ಅಟ್ಲಾಂಟಿಕ್ ಸಮುದ್ರದ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ. ಈ ಸ್ಥಳಕ್ಕೆ ಡೆವಿಲ್ ಟ್ರೈಯಾಂಗಲ್ ಅಥವಾ ಹರಿಕೇನ್ ಅಲೇ ಎಂದೂ ಸಹ ಕರೆಯಲಾಗುತ್ತದೆ.
Related Articles
Advertisement
ಬರ್ಮೂಡ ಟ್ರೈಯಾಂಗಲ್ ಪ್ರದೇಶದ ಸುತ್ತಳತೆ ಕೆಲವು ಸಂಶೋಧಕರು ಮತ್ತು ಬರಹಗಾರರ ಪ್ರಕಾರ ಸುಮಾರು 1,300,000 ದಿಂದ 3,900,000 (500,000 ದಿಂದ 1,510,000 ಚದರ ಮೈಲಿ) ಕಿಲೋ ಮೀಟರ್ ಎಂದೂ ಅಂದಾಜಿಸಲಾಗಿದೆ ಹಾಗೂ ಈ ಭಾಗದ ಪ್ರಮುಖ ಪ್ರದೇಶಗಳೆಂದರೆ ಮಿಯಾಮಿ, ಸಾನೂjನಾ, ಪ್ಯೂರಿಟೋ ರಿಕೋ .
ಮಾಹಿತಿಯ ಪ್ರಕಾರ ಸುಮಾರು 50ಹಡಗುಗಳು ಮತ್ತು 20ವಿಮಾನಗಳು ನಾಪತ್ತೆಯಾಗಿರುವುದೆಂದೂ ಹೇಳಲಾಗಿದೆ. ಬರ್ಮೂಡ ಟ್ರೈಯಾಂಗಲ್ನ ಕುರಿತು ಮೊದಲ ಬಾರಿಗೆ ಎಡ್ವರ್ ವ್ಯಾನ್ ವಿಂಕಲ್ ಜೋನ್ಸ್ ಅವರು ಸೆ. 17,1950ರಲ್ಲಿ ದ ಮಿಯಾಮಿ ಹೆರಾಲ್ಡ… ಅಂಕಣವನ್ನು ಪ್ರಕಟಿಸಿದ್ದಾರೆ. ಬರ್ಮೂಡ ಟ್ರೈಯಾಂಗಲ್‌ನ ಕುರಿತ ಇತರ ಅಂಕಣಗಳೆಂದರೆ ಪೇಟ್ ಮ್ಯಾಗಜಿನ್ ಪ್ರಕಟಿಸಿದ ಸೀ ಮಿಸ್ಟರಿ ಅಟ್ ಅವರ್ ಬ್ಯಾಕ್ ಡೋರ್ ಮತ್ತು ಜಾರ್ಜ್ ಸ್ಯಾಂಡ್ ಬರೆದ ಫ್ಲೈಟ್19 ಹಾಗೂ ಫೆಬ್ರವರಿ 1964 ರಲ್ಲಿ ವಿನ್ಸೆಂಟ್ ಗಡ್ಡಿಸ್ ಬರೆದ ದ ಡೆಡ್ಲಿ ಬರ್ಮೂಡ ಟ್ರೈಯಾಂಗಲ್ ಪ್ರಮುಖವಾಗಿವೆ.
ಈ ಪ್ರದೇಶದಲ್ಲಿ ನಾಪತ್ತೆಯಾದ ನೌಕೆಗಳು ಮತ್ತು ವಿಮಾನಗಳೆಂದರೆ:
ಏಲೇನಾ ಆಸ್ಟಿನ್ ಎಂಬ ಹಡಗು 1881ರಲ್ಲಿ ಈ ಪ್ರದೇಶದಲ್ಲಿ ಸಂಚರಿಸುವಾಗ ನಾಪತ್ತೆಯಾಗಿತ್ತು.ಯು.ಎಸ್ ಸೈಕ್ಲೋಸ್ ಎಂಬ ಅಮೆರಿಕಾದ ನೌಕೆ ಮ್ಯಾಗಂನೀಸ್
ಅದಿರನ್ನುಕೊಂಡೊಯ್ಯುವಾಗನಾಪತ್ತೆಯಾಗಿತ್ತು.ಯು.ಎಸ್.ಎಫ್. -19 ಯುದ್ಧವಿಮಾನ 1945ರಲ್ಲಿ ನಾಪತ್ತೆಯಾಗಿತ್ತು.
ಈ ಭಾಗದಲ್ಲಿ ಸಂಚರಿಸುವ ಹಡಗು ಮತ್ತು ವಿಮಾನಗಳಿಗೆ ವಾತಾವರಣದ ಬದಲಾವಣೆಯಿಂದಾಗಿ ದಿಕ್ಸೂಚಿಯಲ್ಲಿನ ವ್ಯತ್ಯಾಸ ಮತ್ತು ನೀರಿನ ಆಳದಲ್ಲಿನ ಕಂಪನಗಳಿಂದಾಗಿ ಅವಘಡ ಸಂಭವಿಸುತ್ತದೆ ಎಂದೂ ವಿಜ್ಞಾನಿಗಳ ಅಭಿಪ್ರಾಯಪಡುತ್ತಾರೆ.
ಬರ್ಮುಡಾ ಟ್ರಯಾಂಗಲ್ ಸಮುದ್ರದಲ್ಲಿನ ಅಯಸ್ಕಾಂತೀಯ ಗುಣವೇ ಹಡಗು ಮತ್ತು ವಿಮಾನಗಳ ಪತನಕ್ಕೆ ಕಾರಣವೆಂದರೆ ಕೆಲವು ತಜ್ಞರ ಅಭಿಪ್ರಾಯವಾದರೆ ಇನ್ನೂ ಕೆಲವರ ಪ್ರಕಾರ ಇಲ್ಲಿನ ಸಮುದ್ರದಲ್ಲಿ ಒಳಗಿನ ಮಿಥೇನ್ ಅನಿಲಗಳಿಂದಾಗಿ ದೊಡ್ಡ ಗಾತ್ರದ ನೀರಿನ ಗುಳ್ಳೆಗಳು ಉಂಟಾಗಿ ಒಂದೆ ಸಾರಿ ಆ ಗುಳ್ಳೆಗಳು ಒಡೆದುಕೊಂಡಾಗ ದೊಡ್ಡ ಗಾತ್ರದ ನೀರಿ ಹಡಗನ್ನು ಮುಳುಗಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರಸ್ತುತ ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ ಬರ್ಮುಡಾ ಟ್ರಯಾಂಗಲ್‌ನ ರಹಸ್ಯವನ್ನು ಬಗೆಹರಿಸಲು ಸಾಧ್ಯವಾಗದಿರುವುದು ಅಚ್ಚರಿಯಾಗಿದೆ.
- ರಾಸುಮ ಭಟ್
ಕುವೆಂಪು ವಿವಿ