Advertisement

ಎಸಿಬಿ ಬಲೆಗೆ ಬಿಇಓ ಕಚೇರಿ ಎಫ್ ಡಿಎ

11:23 PM Jun 03, 2021 | Team Udayavani |

ಕಲಬುರಗಿ: ನಿವೃತ್ತಿ ನೌಕರನ ಹಕ್ಕಿನ ರಜೆಯ ಐದು ತಿಂಗಳಿನ ವೇತನ ಬಿಲ್ ಮಾಡಲು 20 ಸಾವಿರ ಲಂಚ ಪಡೆಯುತ್ತಿದ್ದಾಗ ಜಿಲ್ಲೆಯ ಆಳಂದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಕಚೇರಿಯ ಎಫ್ ಡಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಎಫ್ ಡಿಎ ಹುಸೇನ್ ಭಾಷಾ ಎನ್ನುವರೇ 20 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕು ಬಿದ್ದಿದ್ದಾರೆ.

ನಿವೃತ್ತಿ ನೌಕರ ಸಂಗಪ್ಪ ದೇವಣಿ ಅವರ ಐದು ತಿಂಗಳಿನ ಹಕ್ಕಿನ ರಜೆಯ ವೇತನ ಮಂಜೂರಾತಿ ಮಾಡಲು ಎಫ್ಡಿಎ ಹುಸೇನ್ ಭಾಷಾ ಲಂಚ ಕೇಳಿದ್ದರು.   ಗುರುವಾರ ಜೂ. 3ರಂದು ಸಂಜೆ  ಕಲಬುರಗಿ ನಗರದ ಖಾಸಗಿ ಹೊಟೇಲ್ ಬಳಿ ಸಂಗಪ್ಪ ಅವರ ಪುತ್ರ ದತ್ತುಕುಮಾರ ಎನ್ನುವರಿಂದ  ಇಪ್ಪತ್ತು ಸಾವಿರ ಲಂಚ ಪಡೆಯುತ್ತಿರುವಾಗ  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ನಡೆಸಿದ್ದಾರೆ.

ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ ಮಾರ್ಗದರ್ಶನದಲ್ಲಿ ಎಸಿಬಿ ಡಿಎಸ್ಪಿ ವಿರೇಶ ಕರಡಿಗುಡ್ಡ ನೇತೃತ್ವದಲ್ಲಿ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next