Advertisement

ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ರೂ. ಅವ್ಯವಹಾರ : ಕಳಪೆ ಪೀಠೊಪಕರಣ ಖರೀದಿ

12:49 PM Mar 10, 2022 | Team Udayavani |

ಬೈಂದೂರು : ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅಧಿಕಾರಿಗಳೇ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ಅವ್ಯವಹಾರ ತೊಡಗಿರುವುದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಕಂಡು ಬಂದಿದೆ.

Advertisement

ಏನಿದು ಪ್ರಕರಣ?
ಬೈಂದೂರು ವ್ಯಾಪ್ತಿಯಲ್ಲಿ ಸಂಸದರು, ಶಾಸಕರು ವಿಶೇಷ ಪ್ರಯತ್ನದಿಂದ ಶಿಕ್ಷಣ ಇಲಾಖೆಗೆ ಹತ್ತಾರು ಕೋ.ರೂ. ಅನುದಾನ ನೀಡಿದ್ದಾರೆ. ಆದರೆ ಅನು ದಾನ ಸಮ ರ್ಪಕ ಬಳ ಕೆ ಯಾ ಗದೆ ಪೀಠೊಪಕರಣ, ಕಂಪ್ಯೂಟರ್‌, ವಾಟರ್‌ ಫಿಲ್ಟರ್‌ ಖರೀದಿಯಲ್ಲಿ ಲಕ್ಷಾಂತರ ರೂ. ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ.

2020-21 ಹಾಗೂ 2022ನೇ ಸಾಲಿನಲ್ಲಿ ವಿವಿಧ ಅನುದಾನ ದಲ್ಲಿ ಶಾಲೆಗಳಿಗೆ ಬೆಂಚು, ಕುರ್ಚಿ ಮುಂತಾದ ಸಲಕರಣೆ ಖರೀದಿಸಲಾಗಿದೆ. ಸರಕಾರದ ಸುತ್ತೋಲೆಯಲ್ಲಿರುವ ಯಾವ ನಿಯಮ ಕೂಡ ಪಾಲಿಸದೆ ಕಳಪೆ ಪೀಠೊಪಕರಣಗಳ ಸರಬರಾಜು ಮಾಡಲಾಗಿದೆ. ಸುಮಾರು 10 ಶಾಲೆಗಳಿಗೆ 4.50 ಲ.ರೂ. ವೆಚ್ಚದಲ್ಲಿ ವಾಟರ್‌ ಫಿಲ್ಟರ್‌ ಖರೀದಿಸಲಾಗಿದೆ ಮತ್ತು ತಲಾ 49 ಸಾವಿರ ರೂ.ಯಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಜೂರಾತಿ ನೀಡಿದ್ದಾರೆ. ಆದರೆ 50 ಲೀ. ಫಿಲ್ಟರ್‌ಗಳನ್ನು ಅಳವಡಿಸಿ ನೂರು ಲೀ. ಫಿಲ್ಟರ್‌ನ ಬಿಲ್‌ ಪಾಸ್‌ ಮಾಡಲಾಗಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ ಕೆಲವು ಶಾಲೆಯಲ್ಲಿ ಫಿಲ್ಟರ್‌ ಬದಲಾಯಿಸಲಾಗಿದೆ.

ಗಣಕಯಂತ್ರ ಖರೀದಿಗೆ 4.50 ಲ.ರೂ. ಮಂಜೂರಾಗಿದ್ದು ಮಾರ್ಚ್‌ ಅಂತ್ಯದೊಳಗೆ ಬಿಲ್‌ ಮಂಜೂರಾತಿ ಪಡೆಯಲಿದೆ. ಕಳಪೆ ಗಣಕ ಯಂತ್ರಗಳಿಗೆ ಗರಿಷ್ಠ ಮೊತ್ತದ ಮಂಜೂರಾತಿಯಾಗಿದೆ.

ಇದನ್ನೂ ಓದಿ : ಎಡಗೈಯಲ್ಲಿ ಊಟ ಮಾಡಿದಕ್ಕೆ ವಧುವನ್ನೇ ಬಿಟ್ಟು ಹೊರಟ!

Advertisement

ಶಿಶು ಪಾಲನ ರಜೆ ಬೇಕಾದರೆ ಹಣ ಕೊಡಬೇಕು
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚ ನೀಡದಿದ್ದರೆ ಯಾವುದೇ ಕೆಲಸ ನಡೆಯುದಿಲ್ಲ ಅನ್ನುವುದು ಶಿಕ್ಷಕರ ಅಭಿಪ್ರಾಯವಾಗಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರ ಗೈರು ಹಾಜರಿ ಇದ್ದು ಪ್ರತಿದಿನ ಸಹಿ ಪಡೆಯದೇ ಶಿಕ್ಷಕರು ಕರ್ತವ್ಯಕ್ಕೆ ಬಂದ ಬಳಿಕ ರಜಾ ದಿನದ ಹಾಜರಿ ಹಾಕಿರುವುದು ಕಂಡುಬಂದಿದೆ. ಶಿಶುಪಾಲನ ರಜೆ ಮಂಜೂರಾತಿ, ಕೆ.ಜಿ.ಐ.ಡಿ., ಜಿ.ಪಿ.ಜಿ. ನಿಯೋಜನೆ, ವರ್ಗಾವಣೆ, ನಿವೃತ್ತಿ ವೇತನ ಎಲ್ಲದರಲ್ಲೂ ಕೂಡ ಪ್ರತ್ಯೇಕ ಹಣ ವ್ಯವಹಾರ ಮಾಡುತ್ತಿರುವುದು ಶೈಕ್ಷಣಿಕ ವ್ಯವಸ್ಥೆಯ ದುರಂತವಾಗಿದೆ.

ಲೋಕಾಯುಕ್ತ ತನಿಖೆಯಾಗಲಿ
ಬೈಂದೂರು ವ್ಯಾಪ್ತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಕಚೇರಿ ಮೂಲಕ ಶಾಲಾ ವಸ್ತು ಖರೀದಿಯಲ್ಲಿ ಮತ್ತು ಶಿಕ್ಷಕರ ನಿಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಶಾಲಾ ಕಾಮಗಾರಿ ಗುತ್ತಿಗೆ, ಶೌಚಾಲಯ ದುರಸ್ತಿ, ಕೊಠಡಿ ನಿರ್ಮಾಣ ಕೂಡ ಕಳಪೆಯಾದರೂ ಇಲಾಖೆ ಗಮನಹರಿಸುತ್ತಿಲ್ಲ. ಕಂಪ್ಯೂಟರ್‌, ವಾಟರ್‌ ಫಿಲ್ಟರ್‌ ಖರೀದಿ ಕುರಿತು ಲೋಕಾಯುಕ್ತ ತನಿಖೆಯಾಗ ಬೇಕು ಎನ್ನುವುದು ಶಿಕ್ಷಣಾಭಿಮಾನಿಗಳ ಅಭಿಪ್ರಾಯವಾಗಿದೆ.

ತಪ್ಪು ನಡೆದಿದ್ದರೆ ಕ್ರಮ
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಸಮಸ್ಯೆ ಕುರಿತು ಈ ಹಿಂದೆ ಕೂಡ ಮಾಹಿತಿ ಬಂದಿತ್ತು. ತಾ.ಪಂ., ಜಿ.ಪಂ. ವ್ಯಾಪ್ತಿಯ ಅನುದಾನದಲ್ಲಿ ಹಲವು ಯೋಜನೆಗಳು ನಡೆಯುತ್ತದೆ. ಇಲಾಖೆ ವ್ಯಾಪ್ತಿಯಲ್ಲಿ ತಪ್ಪುಗಳು ಕಂಡು ಬಂದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. -ಗೋವಿಂದ ಮಡಿವಾಳ, ಉಪನಿರ್ದೇಶಕರು ,ಶಿಕ್ಷಣ ಇಲಾಖೆ ಉಡುಪಿ

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next