Advertisement

ಬೆಂಗ್ಳೂರು-ಮಂಗ್ಳೂರು ಇನ್ನೂ ಹತ್ತಿರ;ಇಂಟರ್ ಸಿಟಿ ರೈಲು ಶೀಘ್ರ ಶುರು

03:45 AM Feb 17, 2017 | Team Udayavani |

ಬೆಂಗಳೂರು: ಬಹು ನಿರೀಕ್ಷಿತ “ಬೆಂಗಳೂರು-ಹಾಸನ- ಮಂಗಳೂರು’ ರೈಲು ಮಾರ್ಗ ಪೂರ್ಣಗೊಂಡಿರುವುದರಿಂದ ಮಾರ್ಚ್‌ ಮೊದಲ ವಾರದಲ್ಲಿ ಎರಡು ಇಂಟಿರ್‌ಸಿಟಿ ರೈಲುಗಳ ಸಂಚಾರಕ್ಕೆ ದಿನಗಣನೆ ಪ್ರಾರಂಭವಾಗಿದೆ.

Advertisement

ಈಗಾಗಲೇ “ಬೆಂಗಳೂರು-ಹಾಸನ’ ನಡುವಿನ ಇಂಟರ್‌ ಸಿಟಿ ಸಂಚಾರಕ್ಕೆ ವೇಳಾ ಪಟ್ಟಿಯೂ ಸಿದ್ಧಗೊಂಡಿದ್ದು, ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹಾಸನ ಬಿಡುವ ರೈಲು 9.40 ಕ್ಕೆ ಯಶವಂತಪುರ ತಲುಪಲಿದೆ. ಅದೇ ರೀತಿ ಸಂಜೆ 6 ಕ್ಕೆ ಯಶವಂತಪುರ ಬಿಟ್ಟು ರಾತ್ರಿ 9.30 ಕ್ಕೆ ಹಾಸನ ತಲುಪಲಿದೆ.

ಇದರ ಜತೆಗೆ “ಬೆಂಗಳೂರು-ಮಂಗಳೂರು ನಡುವೆ ಇಂಟರ್‌ಸಿಟಿ ರೈಲು ಸಂಚಾರ ಆರಂಭಕ್ಕೆ ಪ್ರಸ್ತಾವ ಸಲ್ಲಿಕೆ ಯಾಗಿರುವುದು ಆ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರುವ ಆಸೆ ಚಿಗುರೊಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾದರೆ ಕೊಂಕಣ ಸುತ್ತಿ ಮೈಲಾರಕ್ಕೆ ಎಂಬಂತೆ ತುಮಕೂರು ಅರಸೀಕೆರೆ ಮಾರ್ಗ ಅಥವಾ ಮೈಸೂರು ಹೊಳೇನರಸೀಪುರ ಮಾರ್ಗದಲ್ಲಿ ಹೋಗಬೇಕಿತ್ತಾದರೂ ಇದೀಗ ನೂತನ ಮಾರ್ಗ ಪೂರ್ಣಗೊಂಡಿರುವುದರಿಂದ 9 ತಾಸಿನಲ್ಲಿ ಬೆಂಗಳೂರಿನಿಂದ ಮಂಗಳೂರು ತಲುಪ ಬಹುದಾಗಿದೆ.

ಇತ್ತೀಚೆಗಷ್ಟೇ ನೆಲಮಂಗಲ-ಶ್ರವಣಬೆಳ ಗೊಳವರೆಗಿನ 110 ಕಿಮೀ. ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ವಿಭಾಗದವರು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಬೆಂಗಳೂರು-ಹಾಸನ ಮಾರ್ಗದಲ್ಲಿ ಹೊಸ ರೈಲು ಸೇವೆಗೆ ರೈಲ್ವೆ ಸುರಕ್ಷತಾ ವಿಭಾಗದ ಒಪ್ಪಿಗಾಗಿ ಕಾಯಲಾಗುತ್ತಿದೆ.

ಬೆಂಗಳೂರು-ಹಾಸನ-ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರಿಗೆ ಇಂಟರ್‌ಸಿಟಿ ರೈಲು ಸಂಚಾರದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯವರೆಗಿನ 55 ಕಿ.ಮೀ. ಮಾರ್ಗ ಪಶ್ಚಿಮ ಘಟ್ಟದ ಮೂಲಕ ಹಾದು ಹೋಗಿರುವುದರಿಂದ ಅಲ್ಲಿ ಸುರಕ್ಷತೆ ದೃಷ್ಟಿಯಿಂದ ಯಾವ ಸಮಯದಲ್ಲಿ ಪ್ಯಾಸೆಂಜರ್‌ ರೈಲು ಓಡಿಸುವುದು ಉತ್ತಮ ಎಂಬ ಬಗ್ಗೆ ಪರಿಶೀಲನೆ
ನೆಡಸಲಾಗುತ್ತಿದೆ.

Advertisement

*ಸುರೇಶ್ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next