Advertisement

ಬೆಂಗ್ಳೂರು 3ನೇ ಅತಿ ಅಗ್ಗದ ನಗರಿ!

03:50 AM Mar 22, 2017 | Team Udayavani |

ನವದೆಹಲಿ: ವಿಶ್ವದ ಅತಿ ಅಗ್ಗದ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ 3ನೇ ಸ್ಥಾನ! ಆರ್ಥಿಕ ಗುಪ್ತಚರ ಘಟಕ (ಯುಐಯು) ಈ ಪಟ್ಟಿ ತಯಾರಿಸಿದ್ದು, ಚೆನ್ನೈಗೆ 6ನೇ ಸ್ಥಾನ, ಮುಂಬೈ 7 ಮತ್ತು ನವದೆಹಲಿಗೆ 10ನೇ ಸ್ಥಾನ ಲಭ್ಯವಾಗಿದೆ. ನಗರವಾಸಿಗಳ ಜೀವನಶೈಲಿ, ವಾಸಯೋಗ್ಯ ಸ್ಥಳ, ಜೀವನ ನಿರ್ವಹಣೆ ವೆಚ್ಚ ಮುಂತಾದ ಸಂಗತಿಗಳನ್ನು ಮಾನದಂಡವಾಗಿರಿಸಿಕೊಂಡು ಈ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯನ್ನೂ ಯುಐಯು ತಯಾರಿಸಿದ್ದು, ನಂ.1 ಸ್ಥಾನ ಸಿಂಗಾ ಪುರದ ಪಾಲಾಗಿದೆ. 4ನೇ ಸ್ಥಾನದಲ್ಲಿ ಟೊಕಿಯೊ, ಒಸಾಕಾ 5, ಸಿಯೋಲ್‌ 6ನೇ ಸ್ಥಾನದಲ್ಲಿದ್ದು, ಕಳೆದವರ್ಷ ಲಕ್ಷುರಿ ಸಿಟಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಲಾಸ್‌ಏಂಜಲೀಸ್‌ ಈ ಬಾರಿ 11ನೇ ಸ್ಥಾನಕ್ಕೆ ಕುಸಿದಿದೆ.

Advertisement

ಆನಂದಭರಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 122ನೇ ಸ್ಥಾನ!
ಲಂಡನ್‌: ವಿಶ್ವದ ಸಂತೋಷಭರಿತ ದೇಶಗಳ ಪಟ್ಟಿಯಲ್ಲಿ ಭಾರತ 3 ಸ್ಥಾನ ಕುಸಿತ ಕಂಡಿದ್ದು, 122ನೇ ಸ್ಥಾನ ಅಲಂಕರಿಸಿದೆ. ಅಚ್ಚರಿಯೆಂದರೆ, ನೆರೆಯ ರಾಷ್ಟ್ರ ಪಾಕಿಸ್ತಾನ 80ನೇ ಸ್ಥಾನ, ಇರಾಕ್‌ 117ನೇ ಸ್ಥಾನದಲ್ಲಿದ್ದು, ಭಾರತವನ್ನು ಹಿಂದಿಕ್ಕಿವೆ! 
ಜಿಡಿಪಿ, ಭ್ರಷ್ಟಾಚಾರ, ಅಭಿವೃದ್ಧಿ ಮುಂತಾದ ಸಂಗತಿ ಆಧರಿಸಿ ತಯಾರಿಸುವ ಹ್ಯಾಪಿನೆಸ್‌ ಪಟ್ಟಿ ಇದಾಗಿದ್ದು, ಕಳೆದವರ್ಷ ಭಾರತ 118ನೇ ಸ್ಥಾನದಲ್ಲಿತ್ತು. ಡೆನ್ಮಾರ್ಕ್‌ ಅನ್ನು 3ನೇ ಸ್ಥಾನಕ್ಕೆ ತಳ್ಳಿ, ನಾರ್ವೆ ವಿಶ್ವದ “ಅತ್ಯಂತ ಆನಂದಭರಿತ ರಾಷ್ಟ್ರ’ ಎಂಬ ಹಿರಿಮೆಗೆ ಪಾತ್ರವಾಗಿದೆ. 79ನೇ ಸ್ಥಾನದಲ್ಲಿ ಚೀನಾ, ನೇಪಾಳ 99, ಶ್ರೀಲಂಕಾ 120ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next