ಬೆಂಗಳೂರು: ಭಾರತದ ನಂಬರ್ ಒನ್ ಶಾರ್ಟ್ ವೀಡಿಯೋ ಆ್ಯಪ್ ಮೋಜ್ ನ ಎರಡು ತಿಂಗಳ ಸುದೀರ್ಘವಾದ ಡಿಜಿಟಲ್ ಪ್ರತಿಭಾನ್ವೇಷಣೆ ಮುಕ್ತಾಯಗೊಂಡಿದ್ದು, ನಟನಾ ವರ್ಗದಲ್ಲಿ ಬೆಂಗಳೂರಿನ ಪಾರು ಗೌಡ ಮೋಜ್ ಸೂಪರ್ ಸ್ಟಾರ್ ಆಗಿ ಆಯ್ಕೆಯಾಗಿರುವುದಾಗಿ ಘೋಷಿಸಿದೆ.
ಪರಿಶ್ರಮ ಮತ್ತು ಅದ್ಭುತ ಪ್ರತಿಭೆಯ ಪಾರು ಗೌಡ ಪ್ರತಿಯೊಬ್ಬರ ಗಮನವನ್ನೂ ಸೆಳೆದಿದ್ದು, ಇದು ’ನಟನಾ’ ವರ್ಗದಲ್ಲಿ ಅವರನ್ನು ವಿಜೇತರಾಗಿಸಲು ಕಾರಣವಾಗಿದೆ. ಪಾರು 5 ಲಕ್ಷ ರೂ. ನಗದು ಬಹುಮಾನ ಕೂಡಾ ಪಡೆದಿದ್ದಾರೆ.
ದೇಶಾದ್ಯಂತ ಅದ್ಭುತ ಪ್ರತಿಭೆಗಳನ್ನು ಅನ್ವೇಷಿಸುವ ಗುರಿಯೊಂದಿಗೆ #MojSuperstarHunt ವೇದಿಕೆಯಲ್ಲಿ ತಮ್ಮ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸಲು ದೇಶಾದ್ಯಂತ ಸ್ಪರ್ಧಿಗಳನ್ನು ಆಹ್ವಾನಿಸಿತ್ತು, ಪ್ರಸಿದ್ಧ ನೃತ್ಯಸಂಯೋಜಕ ನಿರ್ದೇಶಕರಾದ ರೆಮೋ ಡಿಸೋಜಾ ಮತ್ತು ಮೋಜ್ ನ ಆವೇಜ್ ದರ್ಬಾರ್ ಇದರ ತೀರ್ಪುಗಾರರಾಗಿದ್ದರು, #MojSuperstarHunt ಅತ್ಯಂತ ಯಶಸ್ವಿ ಡಿಜಿಟಲ್ ಪ್ರತಿಭಾನ್ವೇಷಣೆಯಾಗಿದ್ದು, ಇಕೋಸಿಸ್ಟಂನಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅತಿದೊಡ್ಡ ಪ್ರತಿಭಾನ್ವೇಷಣೆಯಲ್ಲಿ 6.5 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದು, 4.4 ದಶಲಕ್ಷ ವಿಷಯಗಳೊಂದಿಗೆ 37 ಲಕ್ಷ ವೀಡಿಯೋ ಪ್ಲೇಗಳನ್ನು ಹೊಂದಿತ್ತು.
ಪ್ರತಿಭಾನ್ವೇಷಣೆಯ ಬಗ್ಗೆ ಮಾತನಾಡಿದ, ಮೋಜ್ ನ ವಿಷಯ ವ್ಯವಹಾರ ಮತ್ತು ಕಾರ್ಯನಿರ್ವಹಣಾ ಹಿರಿಯ ನಿರ್ದೇಶಕರಾದ ಶಶಾಂಕ್ ಶೇಖರ್, “#MojSuperstarHunt ಮೂಲಕ, ನಾವು ನಮ್ಮ ದೇಶಾದ್ಯಂತ ಹರಡಿರುವ ಎಲೆಮರೆಯ ಕಾಯಿಗಳನ್ನು ಗುರುತಿಸಿ, ಅವರ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಅವರನ್ನು ಮುನ್ನಲೆಗೆ ತರುವುದು ನಮ್ಮ ಬಯಕೆಯಾಗಿತ್ತು. ಪ್ರತಿಭಾನ್ವೇಷಣೆಗೆ ಅದ್ಭುತ ಸ್ಪಂದನೆ ದೊರೆತಿದ್ದು ನಮ್ಮ ವೇದಿಕೆಯಲ್ಲಿ ಈ ನವಜಾತ ಪ್ರತಿಭೆಗಳನ್ನು ನೋಡುವುದು ನಿಜಕ್ಕೂ ಸಂತೋಷದ ಅನುಭವ. ಅಂತಿಮಪಟ್ಟಿಯ ಎಲ್ಲಾ ಸ್ಪರ್ಧಿಗಳೂ ಪ್ರಪಂಚಕ್ಕೆ ತಮ್ಮ ಪ್ರತಿಭೆಯನ್ನು ತೋರಿಸಿದ ಕುರಿತು ಹೆಮ್ಮೆ ಪಟ್ಟಿದ್ದಾರೆ. ವಿಜೇತರು ನಮ್ಮ ದೇಶದಲ್ಲಿರುವ ಪ್ರತಿಭೆಗಳ ಅದ್ಭುತ ಸಾಗರವಾಗಿದ್ದು, ಈಗ ಮೋಜ್ ನ ಪ್ರತಿಭೆಗಳಾಗಿದ್ದಾರೆ” ಎಂದು ಹೇಳಿದ್ದಾರೆ.