Advertisement
ಕಮ್ಮನಹಳ್ಳಿಯ 5 ನೆ ಮುಖ್ಯರಸ್ತೆಯಲ್ಲಿ ಜನವರಿ 1 ರಂದು ನಸುಕಿನ 2.30 ರ ವೇಳೆಗೆ ಈ ಘಟನೆ ನಡೆದಿದ್ದು, ಆಟೋದಲ್ಲಿ ಬಂದಿಳಿದ ಯುವತಿಯನ್ನು ಸ್ಕೂಟರ್‌ನಲ್ಲಿ ಬಂದ ಕಾಮುಕರಿಬ್ಬರು ಅಡ್ಡಗಟ್ಟಿದ್ದಾರೆ. ಒಬ್ಟಾತ ಸ್ಕೂಟರ್‌ನಿಂದ ಇಳಿದು ಯುವತಿಯನ್ನು ತಬ್ಬಿ ಮುದ್ದಾಡಿ ಚುಂಬಿಸಿದ್ದಾನೆ. ಯುವತಿಯನ್ನು ಎಳೆದೊಯ್ದು ಸ್ಕೂಟರ್‌ನಲ್ಲಿ ಕೂರಿಸಲು ಯತ್ನಿಸಿದ್ದಾನೆ, ಪ್ರತಿರೋಧ ತೋರಿದಾಗ ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ.
Related Articles
ಸುದ್ದಿಯಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಪ್ರಕರಣದ ತನಿಖೆಯ ನೇತೃತ್ವವನ್ನು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ವಹಿಸಲಾಗಿತ್ತು.
Advertisement
ನಾಲ್ವರು ಶಂಕಿತರು ವಶಕ್ಕೆ
ಪ್ರಕರಣದ ಸಿಸಿಟಿವಿ ದೃಶ್ಯಾವಳಿ ರಾಷ್ಟ್ರವ್ಯಾಪಿ ಪ್ರಸಾರವಾಗಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಬುಧವಾರ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಬ್ಬರು ಅಪರಿಚಿತರ ವಿರುದ್ಧ ಬಾಣಸವಾಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಾಣಸವಾಡಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.ಯುವಕರನ್ನು ಕರೆತರುತ್ತಿದ್ದಂತೆ ಆತಂಕಿತರಾದ ಅವರ ತಾಯಂದಿರು , ಸಹೋದರಿಯರು ಮತ್ತು ಸಂಬಂಧಿಕರು ಠಾಣೆಯ ಎದುರು ಬಂದು ನಮ್ಮ ಮಕ್ಕಳು ಅಮಾಯಕರು ಅವರನ್ನು ಬಿಟ್ಟು ಬಿಡಿ ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ಪಿ.ಶ್ರೀನಿವಾಸ್ ಅವರು ನೀಡಿದ ದೂರಿನಂತೆ ಕೇಸು ದಾಖಲಿಸಿಕೊಳ್ಳಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆಗೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಕಾಮುಕರಿಗೆ ಇನ್ನೆರಡು ಬೈಕ್‌ಗಳಲ್ಲಿದ್ದ ನಾಲ್ಕು ಮಂದಿ ಕಾಮುಕರು ನೀಚ ಕೃತ್ಯಕ್ಕೆ ಸಾಥ್ ನೀಡಿರುವ ಬಗ್ಗೆ ಕಂಡು ಬಂದಿದೆ.