Advertisement
ಎಸ್ಎಂಎಸ್, ಇ-ಮೇಲ್ ಸೇರಿ ಹಲವು ದಾರಿಗಳಲ್ಲಿ ಮೋಸಗಾರರು ಜನರನ್ನು ಸಂಪರ್ಕಿಸಿ, ಕೆವೈಸಿ ಅಪ್ಡೇಟ್ ಮಾಡಿಕೊಡುವುದಾಗಿ ಹೇಳುತ್ತಾರೆ. ಅಪ್ಡೇಟ್ ಮಾಡದಿದ್ದರೆ, ಖಾತೆ ನಿಷ್ಕ್ರಿಯವಾಗುತ್ತದೆ ಎಂದು ಹೆದರಿಸುವುದು ಸಾಮಾನ್ಯವಾಗಿದೆ. ಖಾತೆ ಸಂಖ್ಯೆ, ಲಾಗ್ಇನ್ ಮಾಹಿತಿ, ಒಟಿಪಿ, ಪಿನ್ನಂತಹ ಮಾಹಿತಿಯನ್ನು ಪಡೆದು ಖಾತೆಯ ಸಂಪೂರ್ಣ ಹಿಡಿತವನ್ನು ಸಾಧಿಸಿ ಹಣ ವರ್ಗಾವಣೆ ಮಾಡಿಕೊಳ್ಳುವ ಕುರಿತು ದೂರುಗಳು ಹೆಚ್ಚಾಗಿ ಕೇಳಿಬರುತ್ತಿವೆ.
Related Articles
Advertisement
ಕೆವೈಸಿ ಎಂದರೇನು?
ಕೆವೈಸಿ ಎಂದರೆ “ನೋ ಯುವರ್ ಕಸ್ಟಮರ್” (ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ) ಎನ್ನುವಸಂಕ್ಷಿಪ್ತ ರೂಪವಾಗಿದೆ. ಹಣಕಾಸು ಸಂಸ್ಥೆಯಲ್ಲಿ ಖಾತೆ ತೆರೆಯುವಿಕೆ ಪ್ರಕ್ರಿಯೆ ನಡೆಸುವಾಗ ಇದನ್ನು ಗ್ರಾಹಕರ ಗುರುತಿಸುವಿಕೆ ಪ್ರಕ್ರಿಯೆಗಾಗಿ ಬಳಸಿ ಕೊಳ್ಳಲಾಗುತ್ತದೆ. ಹೂಡಿಕೆದಾರರ ಗುರುತು ಮತ್ತು ವಿಳಾಸಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳಾದ ಭಾವಚಿತ್ರವುಳ್ಳ ಗುರುತಿನ ಚೀಟಿಗಳಾದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ ಮತ್ತು ವಿಳಾಸ ದಾಖಲೆ ಮತ್ತು ಇನ್ಪರ್ಸನ್ ಪರಿಶೀಲನೆ (IPV) ಮೂಲಕ ಕೆವೈಸಿ ಖಾತ್ರಿ ಪಡಿಸುವ ಪ್ರಕ್ರಿಯೆ ನಡೆಯುತ್ತದೆ.
2 ವಿಭಾಗ
ಸಮಾನ ಕೆವೈಸಿಕೇಂದ್ರೀಯ ಕೆವೈಸಿ ರಿಜಿಸ್ಟ್ರಿ ಶಿಫಾರಸು ಮಾಡಿದಂತೆ ಹೂಡಿಕೆದಾರರ ಪ್ರಾಥಮಿಕ ಮತ್ತು ಸಮಾನ ಕೆವೈಸಿ ವಿವರಗಳನ್ನು ಒಳಗೊಂಡಿರುತ್ತದೆ. ಇದನ್ನು ಎಲ್ಲ ನೋಂದಾಯಿತ ಹಣಕಾಸು ಮಧ್ಯವರ್ತಿಗಳು ಬಳಕೆ ಮಾಡುತ್ತಾರೆ. ಹೆಚ್ಚುವರಿ ಕೆವೈಸಿ
ಮ್ಯೂಚುವಲ್ಫಂಡ್, ಸ್ಟಾಕ್ ಬ್ರೋಕರ್, ಹೂಡಿಕೆದಾರರ ಖಾತೆಯನ್ನು ತೆರೆಯುವ ಡೆಪಾಸಿಟರಿ ಭಾಗಿದಾರನಂತಹ ಹಣಕಾಸು ಮಧ್ಯವರ್ತಿಗಳು ಪ್ರತ್ಯೇಕವಾಗಿ ಹೆಚ್ಚುವರಿ ಕೆವೈಸಿ ಮಾಹಿತಿಯನ್ನು ಪಡೆಯಬಹುದು. ಕಡ್ಡಾಯ
2002 ರ ಹಣ ದುರ್ಬಳಕೆ ತಡೆ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು, ಹಣ ದುರ್ಬಳಕೆ ತಡೆಯ (AML) ಮಾನದಂಡಗಳ ಪ್ರಕಾರ ಉಗ್ರ ಚಟುವಟಿಕೆಗಾಗಿ ಹಣಕಾಸು ನೆರವಿನ ವಿರುದ್ಧ ಹೋರಾಟ(CFT) ಸೆಕ್ಯುರಿಟಿ ಮಾರ್ಕೆಟ್ ಮಧ್ಯವರ್ತಿಗಳ ಹೊಣೆಗಾರಿಕೆ ಕುರಿತ ಸೆಬಿ ಮಾಸ್ಟರ್ ಸರ್ಕ್ಯುಲರ್ ಪ್ರಕಾರ ಕೆವೈಸಿಗೆ ಬದ್ಧವಾಗುವುದು ಕಡ್ಡಾಯವಾಗಿದೆ.