ಬೆಂಗಳೂರು : ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಬಿಜೆಪಿಯವರ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಈ ರೀತಿ ಕೆಲಸ ಮಾಡಿದರೆ ನಾವು ಬಿಜೆಪಿಯ ವಿರುದ್ಧ ಅಲ್ಲ ಪೋಲೀಸರ ವಿರುದ್ಧ ಹೋರಾಟ ಮಾಡಬೇಕಾಗಬಹುದು ಎಚ್ಚರಿಕೆ ಇರಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೊಲೀಸ್ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು ಗಲಭೆಯಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಫಿಕ್ಸ್ ಮಾಡಬೇಕು ಎಂದು ಪ್ರಯತ್ನಗಳು ನಡೆಯುತ್ತಿದೆ ಹಾಗಾಗಿ ಪೊಲೀಸರು ಬಿಜೆಪಿಯ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಬಾರದು ಮಿಸ್ಟರ್ ಕಮಿಷನರ್ ಬಿ ಕೇರ್ ಫುಲ್ ಎಂದು ಗುಡುಗಿದ ಡಿಕೆ ಶಿವಕುಮಾರ್ ಇದನ್ನು ಮನವಿಯಾದರು ಅಂದುಕೊಳ್ಳಿ ಅಥವಾ ಎಚ್ಚರಿಕೆ ಅಂತನೂ ಅಂದುಕೊಳ್ಳಿ ಎಂದಿದ್ದಾರೆ.
ಗಲಭೆಯನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಇದಕ್ಕೆ ಕಾಂಗ್ರೆಸ್ ಪಕ್ಷವನ್ನು ಫಿಕ್ಸ್ ಮಾಡಲು ಸರ್ವ ಪ್ರಯತ್ನಗಳು ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಹಾಗೂ ಈ ಡಿಕೆ ಶಿವಕುಮಾರ್ ಬಿಡಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಇನ್ನು ಸತ್ತಿಲ್ಲ ನಿಮ್ಮ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದರು.
ಗಲಭೆಯಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಆದರೆ ಅಮಾಯಕರನ್ನು ಬಂಧಿಸೋದು ಸರಿಯಾದ ಕ್ರಮವಲ್ಲ ಎಂದು ಸರಕಾರ ಹಾಗೂ ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದರು.
ಸರಕಾರ ನಡೆಸುವ ತನಿಖಾ ಸಂಸ್ಥೆಯ ಮೇಲೆ ನಮಗೆ ನಂಬಿಕೆ ಇಲ್ಲ ತನಿಖೆ ನಡೆಸುವುದಾದರೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಲಿ, ಈ ಹಿಂದೆ ಶಿವಮೊಗ್ಗದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ಹಾಕಲಾದ ಸಂದರ್ಭ ಇದು ಪೋಲೀಸರ ಕಣ್ತಪ್ಪಿನಿಂದ ಆಗಿರುವುದು ಬಿ ರಿಪೋರ್ಟ್ ಹಾಕ್ತೀವಿ ಎಂದು ಮುಖ್ಯಮಂತ್ರಿಗಳು ಹೇಳಿದ್ದರು ಆದರೆ ಇದುವರೆಗೂ ಬಿ ರಿಪೋರ್ಟ್ ಹಾಕಿಲ್ಲ ಆದರೂ ಎಲ್ಲವನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುತ್ತೆ ಎಂದು ಹೇಳಿದ್ದಾರೆ.