Advertisement

Bengaluru:ಮಹಿಳೆಯರ ಸುರಕ್ಷತೆಗಾಗಿ ರಾತ್ರಿ ಪಾಳಿಯಲ್ಲಿ ಸಂಚಾರ ಠಾಣೆ ಲೇಡಿ ಪೊಲೀಸ್‌ ಕರ್ತವ್ಯ

02:32 PM Aug 23, 2024 | Team Udayavani |

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಮಹಿಳೆಯರ ನೆರವಿಗೆ ಮತ್ತು ಮಹಿಳಾ ಚಾಲಕರ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಇನ್ನು ಮುಂದೆ ಮಹಿಳಾ ಸಂಚಾರ ಪೊಲೀಸರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಂ.ಎನ್‌. ಅನುಚೇತ್‌ ಮಾಹಿತಿ ನೀಡಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿ ಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಸೇರಿ ನಗರದಲ್ಲಿರುವ 50 ಸಂಚಾರ ಪೊಲೀಸ್‌ ಠಾಣೆಗಳಲ್ಲಿ 100 ಮಂದಿ ಮಹಿಳಾ ಪೊಲೀಸರು ರಾತ್ರಿ ವೇಳೆ ಪಾಳಿ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ.

ರಾತ್ರಿ ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಅಪಘಾತ ಹಿನ್ನೆಲೆಯಲ್ಲಿ ನ್ಯಾಯ ಅರಸಿ ಠಾಣೆಗಳಿಗೆ ಬರುವ ಮಹಿಳೆಯರಿಗೆ ಠಾಣೆಯಲ್ಲೇ ಕೂತು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಿದರೆ, ಮತ್ತೂಬ್ಬ ಮಹಿಳಾ ಸಿಬ್ಬಂದಿ ಅಪಘಾತ ಸ್ಥಳದ ಪರಿಶೀಲನೆ, ಜನಸಂದಣಿ ಪ್ರದೇಶಗಳಲ್ಲಿ ಗಸ್ತು ಹಾಗೂ ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ಮಾಡುವ ಪುರುಷ ಟ್ರಾಫಿಕ್‌ ಸಿಬ್ಬಂದಿಗೆ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ.

ಡ್ರಂಕ್‌ ಆ್ಯಂಡ್‌ ಡ್ರೈವ್‌ನಿಂದ ಅಪಘಾತ ಪ್ರಕರಣಗಳ ಸಂಖ್ಯೆ ಕಳೆದ ಎರಡು ತಿಂಗಳಿಂದ ಹೆಚ್ಚಾಗಿರುವುದು ಕಂಡುಬಂದಿದೆ. ಇದನ್ನು ತಹಬದಿಗೆ ತರಲು ರಾತ್ರಿ ಪಾಳಿಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಎಂ.ಎನ್‌. ಅನುಚೇತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next